ಪುಟ:ಮಾತೃನಂದಿನಿ.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾತೃನ೦ದಿನಿ 95 ದಲ್ಲಿ ನಡೆಯಿಸುತ್ತಿರಬೇಕಾದ ರಹಸ್ಯಮಾರ್ಗವನ್ನೂ ಬಹು ರಸವತ್ತಾಗಿ ಹೇಳಿದೆಯಲ್ಲವೆ? ಅದನ್ನು ಯಾವ ಆಧಾರದ ಮೇಲಿಂದ ಹೇಳಿದೆ? ನಂದಿನಿ:-ದರ್ಪದಿಂದ ನಕ್ಕು,- "ಇದಕ್ಕೇ ನಿಮ್ಮನ್ನು ವಿಚಾರಹೀನರೆಂದು ಹೇಳಬೇಕು. ಏಕೆಂದರೆ- ಅನುಭವವೆಂದರೆ, ಕೇವಲ ಸ್ಥೂಲ ದೇಹಕ್ಕೆ ಸಂಬಂಧಿಸಿದವುಗಳನ್ನೇ ಅನುಭವವೆಂದೂ, ಉಳಿದವುಗಳು ಅನುಭವವಿಚಾರಗಳಲ್ಲವೆಂದೂ, ನಿಮ್ಮ ಭಾವನೆಯಲ್ಲವೆ? ಹಾಗಿದ್ದರೆ,ಅದು ಸಾಧುವಲ್ಲ. ಭಾವನೆಗೊಳಪಟ್ಟ, ಮತ್ತು ದೃಶ್ಯಾದೃಶ್ಯರೂಪಗಳಿಂದ ವಸ್ತು ವಿಚಾರಕ್ಕೊಳಪಟ್ಟ ವಿಷಯಗಳೆಲ್ಲವೂ ಅನುಭವಸಿದ್ಧವಾದವುಗಳೆಂದೇ ತಿಳಿಯಬೇಕು. ಹಾಗಿಲ್ಲವೆಂದು ಹೇಳುವುದಾದರೆ, ಈವರೆಗೆ ಹುಟ್ಟಿರುವ ಶಾಸ್ತ್ರಗಳೂ, ರಹಸ್ಯ ಮಂತ್ರಗಳೂ, ಇತರ ಕೃತಿಗಳೂ, ಸಮಸ್ತವೂ ಅನು ಭವಹೀನವಾದವುಗಳೆಂದೂ, ಅವುಗಳೆಲ್ಲವನ್ನೂ ಮೂಲೆಗೊತ್ತರಿಸಿ ಬಿಡಬೇಕೆಂದೂ ಸೂಚಿಸುತ್ತಿದೆ. ಈವರೆಗೆ ನಾನು ಹೇಳಿರುವುದಾಗಲೀ, ಮುಂದೆ ಹೇಳುವುದಾಗಲೀ, ಪ್ರತಿಯೊಂದೂ ನನ್ನ ಭಾವನಾರೂಪದಲ್ಲಿ ಅದು ಇತರ ಪಾತ್ರಗಳಿಂದ ಪ್ರತ್ಯಕ್ಷ ಪ್ರಮಾಣವಾಗುವಂತೆ ನನ್ನ ಪರೀಕ್ಷೆಗೊಳಪಟ್ಟ ವಿಚಾರಗಳಾಗಿವೆಯಲ್ಲದೆ, ಬರಿಯ ಊಹೆಯೊಂದರಿಂದಲೇ ಹೇಳುವುದಾಗಲಿ, ಇಲ್ಲವೇ ಈ ಸ್ಥೂಲದೇಹಕ್ಕೆ ಸಂಬಂಧಿಸಿರುವುದೆಂದಾಗಲೀ ನೀವು ಭಾವಿಸುವುದು ಸರಿಯಾಗಿಲ್ಲ. ಈಗಲಾದರೂ ಒಪ್ಪಿತೋ? ಸುರಸೆ:-ಧಿಗ್ಗನೆದ್ದು, "ನಂದಿನಿ! ನಾನಿನ್ನು ಹೊರಡುವೆನು. ಆಗಲೇ ಕತ್ತಲೆಯಾಯಿತು." ಪರಿಮಳೆ:-ಅದೇನು, ನಿನಗಿಷ್ಟರ ಅತುರ? ನಾನೂ ಬರಬೇಡವೊ ? ಸುರಸೆ:-ನಿನ್ನನ್ನು ಬರಬೇಡವೆಂದೆನೇನು? ನನಗೆ ಹೊತ್ತಾಯಿತು. ಮನೆಗೆ ಗಂಡಸರು ಬರುವ ವೇಳೆಗಾದರೂ ನಾನು ಮನೆಯಲ್ಲಿರದಿದ್ದರೆ,- ಪರಿಮಳೆ:-ಓಹೋ! ಗಂಡನಲ್ಲಿ ಎಷ್ಟು ಭಯವಮ್ಮ? ಸುರಸೆ:-ನೀನೂ ಅತ್ತೆಯ ಮನೆಗೆ ಹೋಗಿ ಸೇರಿದ ಬಳಿಕಲ್ಲವೇ ಇದಕ್ಕುತ್ತರವು? ಈಗ ನಾನು ಕೊಡುವ ಉತ್ತರವು ನಿನಗೆ ಸರಿದೋರುವುದೇನು? ಎಂದಿಗೂ ಅಲ್ಲ. ಪರಿಮಳೆ:-ಬಲ್ಲೆನಮ್ಮ-ಬಲ್ಲೆನು. ಗಂಡನಲ್ಲಿ ನಿನಗಿರುವ ಭಯವೆಂತ