ಪುಟ:ಮಾತೃನಂದಿನಿ.djvu/೧೧೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


96 ಸತಿ ಹಿತೈಷಿಣಿ ಹುದೆಂಬುದನ್ನು ನಾನು ಬಲ್ಲೆನು. ಆದರೂ ಇಲ್ಲಿಗೆ ಬಂದಿದ್ದುದನ್ನು ತಿಳಿದೇ ಇರುವವನಲ್ಲಿ ಇಷ್ಟರ ಭಯಕ್ಕೆ ಕಾರಣವೇನು ?

ನಂದಿನಿ:- ಪರಿಮಳ! ಸುರಸೆಯು ಹೇಳಿದುದು ಸರಿಯಾಗಿದೆ. ಹಾಗಿರುವುದೇ ಹೆಂಗಸರಿಗೆ ಒಳ್ಳೆಯದು. ಅವರು ಯಾವಾಗಲೂ ವಿನಯ ಭಯ-ಭಕ್ತಿ-ಶ್ರದ್ಧೆ-ಸತ್ಯ ನಿಯಮಗಳಿಂದ ತಮ್ಮ ಕರ್ತವ್ಯದಲ್ಲಿ ಚಾಗರೂಕರಾಗಿ ವರ್ತಿಸುತ್ತಿರಬೇಕು. ಪತಿಯು ಹೇಡಿಯೆಂದು ತಿಳಿದು, ತಾನು ಪುರುಷ ವೃತ್ತಿಯನ್ನು ಹಿಡಿಯುವುದೂ, ಪತಿಯು ಕ್ರೂರಸ್ವಭಾವಿಯೆಂದು ತನ್ನ ಆಚರಣೆಯಲ್ಲಿ ಕೃತ್ರಿಮನಟನೆಯನ್ನು ತೋರುವುದೂ, ಆತನು ದುರಾಚಾರಿಯೆಂದು ಶಂಕಿಸಿ, ನಿರಾಕರಿಸುವುದೂ, ಇಲ್ಲವೇ, ದೀನ-ರಿಕ್ತಹಸ್ತನೆಂದು ಹಂಗಿಸಿ, ಭಂಗಿಸುವುದೂ ಮಾನವತಿಯರಿಗೆ ಧರ್ಮವಲ್ಲ. ಆತನು ಹೇಗೇ ಇದ್ದರೂ ತನ್ನ ಧರ್ಮ-ಧ್ಯೇಯ-ಕರ್ತವ್ಯಗಳಿಗೆಲ್ಲಕ್ಕೂ ಆತನೇ ತನಗೆ ಸಾಕಾರ ದೈವಸ್ವರೂಪನೆಂದು ನಂಬಿ, ತನ್ನ ಶೀಲಪುಷ್ಪವನ್ನು ಭದ್ರವಾಗಿ ಕಾಪಾಡಿ ಕೊಳ್ಳುವುದು ಮುಖ್ಯವೃತ್ತಿಯು ಇದನ್ನು ನಿಮಗೆ ನಾನೇನೂ ಹೇಳಿಕೊಡಬೇಕಾಗಿಲ್ಲ. ಇನ್ನು ನೀವು ನಿಮ್ಮ ಮನೆಗೆ ತೆರಳಬಹುದು. ಇಲ್ಲಿ ಹರಟೆಗೆ ಕುಳಿತು, ಅಲ್ಲಿ ನಿಮ್ಮ ಹಿರಿಯರಿಗಾಗಲಿ ಅರಸರಿಗಾಗಲೀ ಮರುಕವುಂಟಾಗುವಂತೆ ಮಾಡುವುದು ಸರಿಯಲ್ಲ.. ಹೀಗೆ ಹೇಳಿದೆನೆಂದು ಕೋಪಿಸಬೇಡಿರಿ, ಕ್ಷಮೆಯಿರಲಿ ! ಪರಿಮಳ:- ನಕ್ಕು- ಅಹುದು; ಕಣ್ಣು ಚುಚ್ಚಿ ಬೆನ್ನು ತಟ್ಟುವ ಜಾಣ್ಮೆ ನಿನಗೇ ಸರಿ. ಇರಲಿ; ನೀನೇನು, ನಮ್ಮೆಲ್ಲರನ್ನೂ ಬಿಟ್ಟು ಹೊರಟೇ ಹೋಗುವವಳೋ-ಹೇಗೆ?? ನಂದಿನಿ:- ಅಂತಹ ಭೀತಿಗೆ ಕಾರಣವಿಲ್ಲ. ಒಂದುವೇಳೆ ಹೋಗಬೇಕಾದರೂ, ನಿಮಗೆ ಹೇಳದೆ ಹೋಗುವುದಾಗಲೀ, ಈ ಊರಿನವರ ಕಾಟಕ್ಕೆ ಹೆದರಿ ಹೋಗುವುದಾಗಲೀ ಇಲ್ಲ. ಧೈರ್ಯವಾಗಿರಿ; ನಡೆಯಿರಿ. ಇನ್ನು ವಿಳಂಬಿಸಬಾರದು. ಆದರೆ, ಇಂದಿನ ಗೃಹಿಣೀಧರ್ಮ ವಿಚಾರವು ಮಾತ್ರ ನೆನಪಿನಲ್ಲಿರಬೇಕೆಂಬುದು ನನ್ನ ಕೋರಿಕೆ. ಪರಿಮಳೆ:- ಸುರಸೆ:-(ಆಗಬಹುದು; ನೀನೂ ಇದನ್ನು ಕಾರ್ಯದಲ್ಲಿ ತೋರಿಸುವಂತಾಗಬೇಕೆಂಬುದೇ ನಮ್ಮ ಅಭಿನಂದನಪೂರ್ವಕವಾದ ಪ್ರಾರ್ಥನೆ.” ಎಂದು ಹೇಳುತ್ತ ಹೊರಟುಹೋದರು.