ವಿಷಯಕ್ಕೆ ಹೋಗು

ಪುಟ:ಮಾತೃನಂದಿನಿ.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

100 ಸತೀಹಿತೈಷಿಣೀ ಬಂದರೆ ದೊರೆಯದು.” ಎಂದೀಬಗೆಯ ಡಂಗುರೆಯ ಸುದ್ದಿಯೊಂದು ಎಲೆಡೆಯಲ್ಲಿಯೂ ಹರಡಿಕೊಂಡಿತು. ಆಬಳಿಕ ಕೇಳಬೇಕೆ,.-ಜನರ ಉತ್ಸಾಹವೆಷ್ಟರದೆಂಬುದನ್ನು ?--

  ಭೋಜನಕೆಂದರೆ, ದ್ವಿಜರಾವೂ-ದಶಯೋಜನವಾದರೂ ಸಾರುವೆವೂ”. ಎಂಬ ನಾಣ್ಣುಡಿಯೇ ಉಂಟಷ್ಟೆ. ಹಾಗೂ ಭೂರಿಭೋಜನವೆಂದರೆ ಹೇಳುವುದೇನು?- ಹವ್ಯ-ಕವ್ಯಗಳೆಂದರೆ ಸಾಕು; ನಮ್ಮವರೆಲ್ಲರ ಕಿವಿಗಳೂ ಅನೆಯ ಕಿವಿಗಳಂತೆ ಅಗಲವಾಗುವುವು. ಕಣ್ಣು ನೋಟಗಳಂತೂ, ಪಕ್ಷಿರಾಜನ ದೂರದೃಷ್ಟಿಯನ್ನೂ ಕೂಡ ಹಿಂದೇಳಿಸಿಬಿಟ್ಟು ತಾವೇ ಮುಂದಾಗುವುವು. ಮತ್ತೆ ಮನಸ್ಸೆಂದರೆ -ಸಾಕ್ಷಾತ್ ಮಾರುತನನ್ನೂ ಜಯಿಸಬಲ್ಲುದೆಂದು ಹೇಳಲು ತಡೆಯಿಲ್ಲ. ಇಂತಹ ಅದ್ಭುತ ಶಕ್ತಿಯುಳ್ಳವರಾದುದರಿಂದಲೇ ನಮ್ಮಲ್ಲಿ ಭಟ್ಟಾಚಾರ್ಯರಂತಿರುವ ಬಹುಮಂದಿ ಸಿಪುಣ ಬ್ರಾಹ್ಮಣರು, ಒಂದೇ ದಿನದಲ್ಲಿ ನಾಲ್ಕಾರು ಪಿತೃಕವ್ಯಗಳನ್ನು ಮಾಡಿಸಬಲ್ಲ. ಪೌರೋಹಿತ್ಯವನ್ನೂ, ಅದೂ ನಾಗಿ ಮುಂದೆ ಒಂದರೆ, ಬ್ರಾಹ್ಮಣ್ಯವನ್ನನಿಸಿಕೊಳ್ಳಬೇಕೆಂಬ ಒಂದೇ ನೆವದಿಂದ, ಒಂದೇ ಹಗಲಲ್ಲಿ, ಎರಡು ಮನೆಯಲ್ಲಿಯ ಸಪಿಂಡೀಕರಣದ ನಿಯಂತ್ರಣಕ್ಕೂ ಬದ್ಧರಾಗಿ ಬಂದು ನಿಂತಿರುವುದನ್ನೂ, ಮುಂದೆ ಇನ್ನೂ ಹೆಚ್ಚಿನ ಅದ್ಭುತವಾಹಸಗಳನ್ನು ತೋರಲು ಉದ್ದೇಶಪಟ್ಟಿರುವುದನ್ನೂ ನವನಾಗರಿಕರ ಸಹಚರ್ಯೆಯಲ್ಲಿರುವವರಲ್ಲಿ ಬಹುವಾಗ ನೋಡಬಹುದಾಗಿದೆ. ಹೀಗೆ ಒರೆದಿದೆಯೆಂದು, ಪಾಪ! ಅ ನಮ್ಮ ಧರ್ಮ ಬಾಂಧವರು ಮುಳಿವವರಾದರೆ, ಅದಕ್ಕೆ ನಾವಾಗಲೀ, ನಮ್ಮ ಲೇಖನಿಯ ಗಲೀ ಉತ್ತರವಾದಿತ್ವವನ್ನು ವಹಿಸಬೇಕಾದುದಿಲ್ಲ. ಅಂತವರ ಕರ್ಮವೇ, ಅವರ ಮನೋಗತಿಯೇ, ಅವರ ಆಗ್ರಹಕ್ಕೆ ಪಕ್ಕಾಗಬೇಕೆಂಬುದನ್ನು ಅವರು ಖಚಿತವಾಗಿ ತಿಳಿದು, ತಮ್ಮ ನಾಲಿಗೆಯನ್ನು ಉದ್ದುದ್ದವಾಗಿ ನೀಡದೆ ತಡೆ ಯಬೇಕೆಂದು ಮಾತ್ರ ಸೂಚಿಸಿ ಮುಂದೆ ಸಾಗುವೆವು.
 ಡಂಗುರೆಯಲ್ಲಿ ಸಾರಿದಂತ ಇಂದು, ನಮ್ಮ ಶಿವಪುರದ ಕಲೆಕ್ಟರ್ ಜ್ಞಾನಸಾರಚಕ್ರವರ್ತಿಗೆ ಜನ್ಮೋತ್ಸವವು. ಚಕ್ರವರ್ತಿ ಮಹಾಶಯನಿಂದಲೂ, ಮತ್ತು ಶರಚ್ಚಂದ್ರ-ನಗೇಶರಾಯರ ಕಡೆಯಿಂದಲೂ ನಾವು ಆಮಂತ್ರಿ ತರಾಗಿಯೇ ಇರುತ್ತೇವೆ. ಹೇಗಿದ್ದರೂ ನಾವು ಅಲ್ಲಿಗೆ ಹೋಗಲೇಬೇಕು.