*102 ಸತಿ ಹಿತೈ ಸಿ ನ ಸಡಗರ! ಎಷ್ಟು ಸಂತೋಷ !! ಇರಲಿ. ಇಲ್ಲಿ ಇದೇ ಹೊರಬಾಗಿಲ ಬಳಿಯಲ್ಲಿರುವ ಮಂಟಪದಲ್ಲಿ ಕುಳಿತಿದ್ದು ವಿನೋದವನ್ನು ನೋಡುವ ಹೋ, ತಾಳಿರಿ! ಅದೇನದು ? ಮಂಟಪದ್ವಾರದಲ್ಲಿ ತೂಗಿರುವ ಹಂಗಯಮೇಲೆ ಏನು ಒರೆದಿದೆ, ನೋಡಿರಿ ? ಆಗಂತುಕರಿಗೆ ವಂದನೆ. ಬಂದವರಲ್ಲಿ ಪತಿತರು, ದೀನರು, ಅನಾ ಥರು, ಅಂಗಹೀನರು, ಗುರುಪೀಠಾಶ್ರಯದಿಂದ ಬಹಿಷ್ಕೃತರಾಗಿರುವ ಪರಿಮಿತಾಚಾರಿಗಳು, ಇವರಲ್ಲಿ ಯಾರಿದ್ದರೂ ಅಪ್ಪಣೆಯನ್ನು ಕೇಳದೆಯೇ ಬರಬಹುದು. ಉಳಿದವರು ಅಪ್ಪಣೆಯಿಲ್ಲದೆ ಒಳಗೆ ಬರಲಾಗದು.” «ಇದೆಂತಹ ವಿಲಕ್ಷಣವಾದ ಸತ್ಕಾರ! ಈಗ ನಾವು ಮೇಲೆ ಹೇಳು ಟ್ಟವರಲ್ಲಿ ಯಾವ ಗುಂಪಿಗೆ ಸೇರಬೇಕು?” - ಸುಹೃದರೇ ! ಇದು ನಮಗೆ ಅಥವಾ ನಿಮಗೆ ಬರೆದುದಾಗಿಲ್ಲ, ಇದರ ವಿಚಾರವು ನಿಮಗೆ ಮುಂದೆ ತಿಳಿವುದು. ಅಲ್ಲಿಯವರೆಗೆ ತಾಳ್ಮೆಯನ್ನು ತೆಗೆದುಕೊಳ್ಳಿರಿ. ಹಾಗೂ ನಿಮಗೆ ಸಮಾಧಾನವಿಲ್ಲವೆಂದರೆ ನೋಡಿರಿ: ನಾವೇನೋ ನೀಡ್ತಾಶ್ರಯದಿಂದ ಬಹಿಷ್ಕೃತರಾಗಿರುವ ಪರಿಮಿ ತಾಚಾರಿಗಳಾಗಿದ್ದೇವೆ. ನಮಗೆ ಯಾರ ಅಪ್ಪಣೆಯೂ ಬೇಕಾಗಿಯೇ ಇರುವುದಿಲ್ಲ. ನಮ್ಮೊಡನೆ ಬರಲು ನಿಮಗಿಷ್ಟೆ ಕೆ ಹೆದರಿಕೆ ? ಬನ್ನಿರಿ. ಇತ್ತ ನೋಡಿರಿ, ಇಲ್ಲಿಯೇ ನಮ್ಮ ದೇಶಭಕ್ತಾಗ್ರಣಿಗಳಾದ ನರೇಶರಾಯ, ಶರಚ್ಚಂದ್ರನಾಥ, ಕಲೆಕ್ಟರ್ ಚಕ್ರವರ್ತಿಮಹಾಶಯ-ಈ ಮೂವರೂ ಅಸನಾಸೀನರಾಗಿ ಕುಳಿತಿರುವರು. ಉಳಿದವರು ಅಲ್ಲಲ್ಲಿ ತಮ್ಮ ತಮ್ಮ ಕೆಲಸಗಳಲ್ಲಿ ನಿರತರಾಗಿರುವರು. ಇಲ್ಲಿ ಇವರು ಮೂವರೇ ಇರುವರು. 1 ಇಲ್ಲಿ ಇವರು ಕುಳಿತು ಮಾಡುತ್ತಿರುವುದೇನು ?” ಉಂಡುತಿಂದು ಬಂದವರ ಹೆಸರನ್ನೂ ಮನೆತನದ ವಿಚಾರವನ್ನೂ ಕೇಳಿ ತಿಳಿದು, ತಮ್ಮ ಹಸ್ತ ಪುಸ್ತಕದಲ್ಲಿ ಗುರುತು ಮಾಡಿಕೊಳ್ಳುವುದು; ಬಂದವರ ಯೋಗ್ಯತೆಗೆ ತಕ್ಕಂತೆ ದಕ್ಷಿಣ-ವಸ್ತ್ರಗಳ ಬಹುಮಾನಗಳನ್ನೂ ಕೊಟ್ಟು ಸವಿಮಾತಿನಿಂದ ಬೀಳ್ಕೊಡುವುದು. ಆದರೆ-'ನಮಗೆ ಇಲ್ಲಿ ಬೇಕಾದುದೇನು?' ಎಂದು ಕೇಳುವಿರೋಹೇಗೆ? ಊಟದಲ್ಲಿಯೇ ನಿಮ್ಮ ಇಷ್ಟವೋ?-ಕಣ್ಮನ ದಣಿನಂತಿರುವ ನೋಟ
ಪುಟ:ಮಾತೃನಂದಿನಿ.djvu/೧೧೬
ಗೋಚರ