ಪುಟ:ಮಾತೃನಂದಿನಿ.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾತೃನಂದಿನಿ 103 ವನ್ನು ನೋಡಲಿಷ್ಠವೊ ? ನೋಟವೇ ಇಷ್ಟವಾದರೆ ಎಲ್ಲವೂ ಇಲ್ಲಿಯೇ ಕಾಣುವುದು. ಇದೆ ನೋಡಿರಿ; ನಿಮಗಾಗಿ ಉನ್ನತಾಸನ! ಇಲ್ಲಿ ನೀವು ಕುಳಿತು, ಸಾವಧಾನದಿಂದ ಸಮಾಲೋಚಿಸಿರಿ. ವಾಚಕರಾದ ನಿಮ್ಮ ಅತ್ಮನವಧಾನವೇ ನಮ್ಮ ಶ್ರಮಕ್ಕೆ ತಕ್ಕ ಬಹುಮಾನ, ಅದೇ ನಮಗೆ ನಿರ್ದಿಷ್ಟವಾದ ಫಲ. ಆದುದರಿಂದ ಇಲ್ಲಿಯೇ ಸ್ಪಿರಭವದಲ್ಲಿ ಕುಳ್ಳಿರಿ. ನಾವು ಮಾತ್ರ ಇಲ್ಲಿ ನೆಲೆಗೊಂಡರೆ ಸಾಗದು ! ಎಲ್ಲೆಡೆಯಲ್ಲಿಯೂ ತಿರಿ, ಎಲ್ಲರನ್ನೂ ನೋಡಿ ನುಡಿಯಿಸಿ, ಎಲ್ಲ ವಸ್ತುಗಳ ವಿಚಾರವನ್ನೂ ಸಂಗ್ರಹಿಸಿ ಬಂದು, ನಿಮಗೆ ನಿವೇದಿಸಬೇಕಾದುದು ನಮ್ಮ ಕರ್ತವ್ಯ. ಆವರೆಗೆ ನೀವು ಮಾತ್ರ ಬೇಸರಿಸದೆ ನಿಮ್ಮ ಮುಂದೆ ಇಲ್ಲಿರುವ ತ್ರಿಮೂರ್ತಿಗಳ ಸಂಭಾಷಣೆ ಯಲ್ಲಿ ಸಂಪೂರ್ಣ ಗಮನವಿಟ್ಟು, ವಿದ್ಯಮಾನವನ್ನು ಚೆನ್ನಾಗಿ ತಿಳಿದುಕೊ೦ ಡಿರಬೇಕು, | ಕುಳಿತಿದ್ದವರಲ್ಲಿ ಸಂಭಾಷಣೆಗೆ ಮೊದಲಾಯಿತು) ಕಲೆಕ್ಟರ್:- ಅಯ್ಯಾ ನರೇಶರಾಯ ! ನಮ್ಮ ಹೂಟವು ಹೇಗಿದೆನೋಡಿದೆಯಾ? ನಗೇಶ:-ಚೆನ್ನಾಗಿದೆ. ಪಾಪ! ಈಗ ಅವರಿಗೆಲ್ಲ ಎಷ್ಟು ಸಂಕಟ ವಾಗಿರಬಹುದೋ, ತಿಳಿಯದು! ಶರಚ್ಚಂದ್ರ:-ಸಂಕಟವಲ್ಲದೆ ಮತ್ತೇನು? ಐದುಸಾವಿರ ರೂಪಾಯಿ ಗಳ ಮಾತೇನು, ಸಾಮಾನ್ಯವಾದುದೋ? ಅವರ ಅಪ್ಪನ ಕಾಲದಿಂದ ಐದು ಸಹಸ್ರ ಕಾಸುಗಳನ್ನಾದರೂ ಅವರು ಗಳಿಸಿಟ್ಟಿರುವರೋ? ಒಟ್ಟಿಗೆ ಒಂದೇ ದಿನದಲ್ಲಿ ಐದುಸಾವಿರ ರೂಪಾಯಿಗಳು ತಮಗೆ ದೊರೆಯಬಹುದೆಂದು ಹಿಗ್ಗುತ್ತಿದ್ದರು; ಅಲ್ಲದೆ, ಸಾಲಂಕೃತ ಕನ್ಯಾದಾನವಾದರೆ, ತಮ್ಮ ಕುಲ ಕೋಟಿಯ ಪವಿತ್ರವಾಗಿ, ತಮ್ಮ ಮುಂದಿನ ಮಹೋನ್ನತ ಪದವಿಗೂ ಮಾರ್ಗವಾಗಬಹುದೆಂಬ ದುರಾಶೆಯ ಸುತ್ತಿದ್ದಿತು. ಇದರಿಂದ ಅವರು ಏನೋ ಒಂದು ತಂತ್ರವನ್ನೂ ಒಡ್ಡಿ ದರು. ಆದರೆ, ಅವರು ಒಡ್ಡಿದ ಬಲೆ ಯಲ್ಲಿ ಅವರೇ ಸಿಕ್ಕಬೇಕಾಗಿಬಂದುದೂ, ಅಂತದರಿಂದ ತಮ್ಮ ಸರ್ವನಾಶ ವನ್ನು ತಾವೇ ಮಾಡಿಕೊಂಡಂತೆ ಆಗಿರುವುದೂ ಸಂಕಟವಲ್ಲದೆ ಮತ್ತೇನು? ನಿನಗೆ ಅಷ್ಟರ ದಯೆಯಿಲ್ಲದೆ ಅನ್ಯಾಯವಾಗಿ ಅವರೆಲ್ಲರನ್ನೂ ಇಷ್ಟುದೂರ