ಪುಟ:ಮಾತೃನಂದಿನಿ.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

106 ಸತಿಹಿತೈಷಿಣಿ ಕಲೆಕ್ಟರ್:-ಏನಯ್ಯ, ಹೀಗೆ ಹೇಳುವೆ? ನಾವು ಕೊಟ್ಟಿರುವ ಅವಧಿಯು ರಾತ್ರಿ ೧೨ ಘಂಟೆಯವರೆಗೆ ಮಾತ್ರ. ಅದಕ್ಕಾಗಿ ತಂದಿಟ್ಟಿರುವ ರೊಕ್ಕವು, ಊಟದ ವೆಚ್ಚವಲ್ಲದೆ ನಾಲ್ಕು ಸಾವಿರ ರೂಪಾಯಿಗಳಷ್ಟೆ ! ಇಷ್ಟು ಅಲ್ಪಾವಧಿಯಲ್ಲಿ, ಅತ್ಯಲ್ಪ ದ್ರವ್ಯದ ವಿನಿಯೋಗದಲ್ಲಿಯೇ ನಿನಗಿಷ್ಟು ಬೇಸರ ವುಂಟಾಯಿತೇನು? ಶರಚ್ಚಂದ್ರ:-ಬೇಸರವಲ್ಲದೆ ಮತ್ತೇನು? ಈವರೆಗೆ ಬಂದ ಅಸಂಖ್ಯಾತ ಜನರಲ್ಲಿ, ಪೀಠಾಶ್ರಿತರೊಳಗೆ ಪ್ರಮುಖರಾದವರು ಒಬ್ಬರಾದರೂ ಬಂದಂತೆ ಕಾಣುತ್ತಿಲ್ಲ! ಕಲೆಕ್ಟರ್: - (ಪರಿಹಾಸದಿಂದ ನಕ್ಕು),-, ಪ್ರಮುಖರು ಈಗಲೇ ಹೇಗೆ ಬರಬಹುದು. ಸುತ್ತಮುತ್ತಲೂ ನೋಡಬೇಕು, ಹೊತ್ತು-ವೇಳೆಗಳನ್ನು ತಿಳಿದು, ಸರಿಯಾದ ರೀತಿಯಿಂದ ಬರಬೇಕು. ಸುಮ್ಮನೆ ಬಂದರಾದೀತೆ? ಅವರ ಅನುಯಾಯಿಗಳೇನೋ, ಸಹಜ ರೂಪದಿಂದಲೂ, ರೂಪಾಂತರದಿಂದಲೂ ಬಂದು, ಉಂಡು-ತಿಂದು, ತೇಗಿ, ಕೈತುಂಬಿಸಿಕೊಂಡು ಹೋದರು. ಅವರು ಹೇಳಿರುವ ಹೆಸರುಗಳು ಇದೆ, ಇಲ್ಲಿರುವ ಕರಡು ಕಾಗದದಲ್ಲಿರುವುವು. ಹಣದ ಎಣಿಕೆ, ವಸ್ತ್ರದ ಎಣಿಕೆಗಳಲ್ಲಿ ಮಾತ್ರವೇ ನಿರತರಾಗಿದ್ದ ನೀವು ಇದನ್ನು ಚೆನ್ನಾಗಿ ನೋಡಲಿಲ್ಲ. " ನರೇಶ:-ಇರಬಹುದು.

ಇವರ ಸಂಭಾಷಣೆಯ ನಡುವೆ, ಹೊರಬಾಗಿಲಲ್ಲಿ-ಅದೇಕೆ ತಡೆಗಟ್ಟುವಿರಯ್ಯ ?” ಎಂಬ ಘರ್ಜನೆಯು ಕೇಳಿಸಿತು. ಕುಳಿತಿದ್ದ ಕಲೆಕ್ಟರನ ಕಿವಿ ನೆಟ್ಟಗಾಗಿ, ಉತ್ಸಾಹದಿಂದ-"ಸಿಕ್ಕಿತು; ಸಿಕ್ಕಿತು ! ಶಿಕಾರಿ ಸಿಕ್ಕಿ ಕೊಂಡಿತು. ” ಎಂದು ಕೂಗಿ ಹೇಳಿದನು. ಅಷ್ಟರಲ್ಲಿ ಬಾಗಿಲಲ್ಲಿದ್ದ ಗೊಲ್ಲನು ಓಡಿಬಂದು, ಕೈಮುಗಿದು- ಮಹಾಸ್ವಾಮಿ | ಬಾಗಿಲಲ್ಲಿ ಅದಾರೋ, ನಾಲ್ಕಾರು ಮಂದಿ ಪ್ರಬಲಪುರುಷರು ಬಂದು ನಿಂತಿರುವರು. ಹೊತ್ತು ಮೀರಿಹೋಗಿದೆ. ನೀವೂ ಪ್ರಮುಖರಂತೆ ತೋರುತ್ತಿರುವಿರಿ. ನಿಮ್ಮನ್ನು ಒಳಗೆ ಬಿಡಲಾರೆವು' ಎಂದು ಕೂಗಿ ಹೇಳಿದರೂ ಕೇಳದೆ ಹಾರಾಡುತ್ತಿರುವರು.” ಎಂದು ಹೇಳಿದನು.