ಪುಟ:ಮಾತೃನಂದಿನಿ.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

108 ಸಿಸತೀ ಹಿತೈಷಿಣೀ

ಕಲೆಕ್ಟರ್:- ಕೋಪಗೊಳ್ಳಬಾರದು; ಮಹಾಶಯರೆ! ಕೋಪಿಸಬಾರದು. ತಮ್ಮನ್ನು ಪಾಷಂಡಿಗಳೆಂದಾಗಲೀ ಕರ್ಮಭ್ರಷ್ಟರೆಂದಾಗಲೀ ನಾನು ಹೇಳಲಿಲ್ಲ. ಇಲ್ಲಿ ನನ್ನೊಡನೆ ನಾಸ್ತಿಕ ವಾದಿಗಳೂ, ಆಚಾರ ಭ್ರಷ್ಟರೂ ಆದ ಸಮಾಜ ಬಹಿಷ್ಕೃತರು ಕುಳಿತಿರುವರು. ತಾವೂ ಇಲ್ಲಿಗೆ ಬಂದುದಾದರೆ, ಸಮಾಜವು ತಮ್ಮನ್ನೂ ಪ್ರಾಯಶ್ಚಿತ್ತಕ್ಕೆ ಎಳೆಯಬಹುದೇ ನೆಂಬ ಶಂಕೆಯಿಂದ ಹಾಗೆ ಹೇಳಿದನು.
     ಭಟ್ಟಾಚಾರ್ಯ:- ಅದೇನು ಹೇಳುವಿರಯ್ಯ? ನಮ್ಮನ್ನು ಪ್ರಾಯಶ್ಚಿತ್ತಕ್ಕೆ ಗುರಿಮಾಡುವ ಶಕ್ತರೂ ಇದ್ದಾರೊ?
     ಕಲೆಕ್ಟರ್:-ಇಲ್ಲದೆ ಉಂಟೊ? ನ್ಯಾಯವೆಂಬುದು ಎಲ್ಲರಿಗೂ ಇರಬೇಕು. ನ್ಯಾಯಕ್ಕೆ ತಪ್ಪಿದವರು ಯಾರೇ ಆಗಿದ್ದರೂ ಪ್ರಾಯಶ್ಚಿತ್ತವಾಗ ಬೇಕೆಂಬುದು ನಿಮ್ಮ ಶಾಸ್ತ್ರದಲ್ಲಿಯೇ ಇದೆಯಷ್ಟೆ ?
 
     ಭಟ್ಟಾ:- ಅದೇನದು? ನಮ್ಮ ಶಾಸ್ತ್ರ ! ನಮ್ಮದು ಬೇರೆ ಶಾಸ್ತ್ರೆ? ನಿಮ್ಮದು ಬೇರೆ ಶಾಸ್ತ್ರವೊ?
     ಕಲೆಕ್ಟರ್:- ಓಹೋ, ಸಂದೇಹವಿಲ್ಲದೆ! ನಿಮ್ಮ ಶಾಸ್ತ್ರವೆಂಬುದು ಕೇವಲ ಸಮಾಜಶಾಸನವೆಂಬದರ ಮೇಲೆಯೇ ನಿಂತಿರುವುದು. ನಮ್ಮ ಶಾಸ್ತ್ರವಿಚಾರವು ಹಾಗಿಲ್ಲ. ಅದು, ನ್ಯಾಯಾನ್ಯಾಯಗಳನ್ನು ಬಹು ಸೂಕ್ಷ್ಮ ದೃಷ್ಟಿಯಿಂದ ಪರಿಶೀಲಿಸಿ, ಕರ್ಮಕ್ಕೆ ತಕ್ಕ ಪ್ರಾಯಶ್ಚಿತ್ತಗಳನ್ನು ವಿಧಿಸುವುರಾಗಿದೆ.
     ಭಟ್ಟಾ:-ಆದುದರಿಂದಲೇ ಅಲ್ಲವೆ, ಕರ್ಮಹೀನರನ್ನೂ, ಅತ್ಯಾಚಾರಿಗಳನ್ನೂ, ಅವಿಧೇಯರನ್ನೂ ಪುರಸ್ಕರಿಸುತ್ತಿರುವುದು ?
     ಕಲೆಕ್ಟರ್:~ ಎಂದಿಗೂ ನಮ್ಮಲ್ಲಿ ಆ ಅನ್ಯಾಯಾಚರಣೆಗೆ ಅವಕಾಶವಿಲ್ಲ. ನಮ್ಮಲ್ಲಿ ಕರ್ತವ್ಯವಿಮುಖರಾಗಲೀ, ಕಪಟಾಚರಣೆಯಿಂದ ಸಮಾಜದ ಉದ್ದೇಶವನ್ನೇ ಹಾಳು ಮಾಡುವ ಅತ್ಯಾಚಾರಿಗಳಾಗಲೀ, ನ್ಯಾಯ ನೀತಿಗಳಲ್ಲಿ ಗುರು-ಹಿರಿಯರನ್ನು ಕಾಲಿಂದ ತುಳಿದು ಕೆಡಹುವಂತಹ ಅವಿಧೇಯರಾಗಲೀ ಯಾರೂ ಇರುವುದಿಲ್ಲ. ತಿಳಿದಿರೇನು, ಭಟ್ಟಾಚಾರ್ಯರೇ! ಇಲ್ಲಿ ವಿಚಾರವಿಹೀನರ ಮಾತನ್ನೇ ವೇದವಾಕ್ಯದ ಪ್ರಮಾಣವೆಂದು ತಿಳಿದು,