ಮಾತ್ಮನ೦ದಿನಿ 117 ಕರ್ಮಗಳಿಗೆ ವಿರೋಧವಾಗಿ ಮಾಡಿರುವ ಗುರುಪೀಠದವರ ಶಾಸನವನ್ನು ಕುರಿತು ಉಂಟಾಗಿರುವ ಸಮಾಜದ ಅಶಾಂತಿಯನ್ನೂ, ನೀವೆಲ್ಲರೂ ಚೆನ್ನಾಗಿ ತಿಳಿದಿರುವಿರಿ. ಇದರಲ್ಲಿ, ಯಾವ ಪಕ್ಷದಲ್ಲಿ, ಸಮಾಜದ ಶಾಂತಿಭಂಗಕ್ಕೆ ಕಾರಣವಾದ ಅತ್ಯಾಚಾರವೂ ದ್ರೋಹವೂ ತುಂಬಿರಬಹುದೆಂಬುದನ್ನೂ, ಇದಕ್ಕೆ ನಾವು ಮಾಡಬೇಕಾದ ಪ್ರತೀಕಾರವೇನೆಂಬುದನ್ನೂ ನೀವು ಸಕಾರಣವಾಗಿ ಹೇಳಬಲ್ಲವರಾಗಿಯೇ ಇರುವಿರಿ. 11(ಬಲ್ಲೆವು-ಬಲ್ಲೆವು”ಎಂದು ಸಭಿಕರು ಕೂಗುವರು.) ಆದರೆ, ಓ, ನನ್ನ ಪ್ರಿಯಬಾಂಧವರೇ! ಕೇಳಿರಿ:- ಸಮಾಜದ ಉದ್ದೇಶವೇನು ?-ಪ್ರಜೆಗಳನ್ನು ಅಧರ್ಮ-ಅನೀತಿಪ್ರವ ರ್ತಕರಾಗದಂತೆ ನ್ಯಾಯಮಾರ್ಗದಲ್ಲಿ ನಡೆಯಿಸುವುದು! ಅಧರ್ಮ-ಅನೀತಿ ಎಂಬುದರ ಅಭಿಪ್ರಾಯವೇನು ? ಈ ದೇಹಕ್ಕೂ, ದೇಹವನ್ನೇ ಆಶ್ರಯಿಸಿ ರುವ ಆತ್ಮನಿಗೂ, ಅಹಿತ-ಎಂದರೆ, ಅನಿಷ್ಟ ವನುಂಟು ಮಾಡುವ ಕಾರ್ಯಗಳಲ್ಲವೇ? ಅದೇ ಅಲ್ಲವೆ, ಅಕ್ರಮ-ಎಂದರೆ ಭಗವನ್ನಿ ರೂಪಕ್ಕೆ ಪ್ರತಿಯಾಗಿ ಎಂದರೆ, ಮಾನವಜನ್ಮಧಾರಣೆಯ ಮುಖ್ಯೋದ್ದೇಶವೇ ಮರೆಯಾಗುವಂತಹ ದುರಾಚಾರವೆನ್ನಿಸುವುದು? ಹೀಗೆ ಕರ್ಮಹೀನರಾಗಿ ನಡೆಯುವ ದುರಾಚಾರಿಗಳನ್ನು ಸರಿಯಾದ ಪ್ರಾಯಶ್ಚಿತ್ತಕ್ಕೆ ಗುರಿಮಾಡಿ, ಸತಿಗೆ ತಿರುಗುವಂತೆ ಪ್ರಯತ್ನಿಸಬೇಕಾದುದೇ ಸಮಾಜ ಶಾಸನಕರ್ತರ ಅಥವಾ ಮತಬೋಧಕರ ಅವಶ್ಯ ಕರ್ತವ್ಯ ಎಂದಲ್ಲವೇ, ಗುರುಪೀಠದವರು ಪೀಠಿಕೆಯನ್ನು ಬರೆದಿರುವುದು. ಆಗಲಿ, ವಿಚಾರಮಾಡುವ, ಸಮಾಜದ ಕಲ್ಯಾಣಕ್ಕೆಂದು............ವಿಧಿಸಿರುವುದು, ಎಂದು ನಿರೂಪಿಸಿರುವ ಮಹಾಜನರಿಗೆ ಸಮಾಜದ ಕಲ್ಯಾಣವು, ಯಾವುದನ್ನು ಅತ್ರ ಯಸಿರುವುದೆಂಬುದು, ಅದೇಕೆ ತಿಳಿಯಲಿಲ್ಲ? ಅವರ ಜ್ಞಾನದೃಷ್ಟಿ, ಎಲ್ಲಿ ಮರೆ ಯಾಗಿದ್ದಿತು ? ಅವರು ಮಾಡಿರುವ ಶಾಸನವು, ಈಗ ಸಮಾಜದ ಅಶಾಂತಿ ಯನ್ನು ಎಷ್ಟು ಮಟ್ಟಿಗೆ ತಡೆದು ನಿಲ್ಲಿಸಬಹುದಾಗಿದೆ? ಇದರಿಂದ ಅಶಾಂತತೆಯೆಂಬ ಕಾಡ್ಗಿಚ್ಚು ನಾಲ್ಕಾರು ಕಡೆಯಲ್ಲಿಯೂ ಹಬ್ಬಿ, ಪ್ರಪಂಚವನ್ನೇ ನಡುಗುವಂತೆ ಮಾಡಿರುವುದಲ್ಲವೇನು? (ನಿಜ-ನಿಜ !! ಹಾಗಾಗಿರುವುದೇ ನಿಜ.)
ಪುಟ:ಮಾತೃನಂದಿನಿ.djvu/೧೩೧
ಗೋಚರ