118 ಸತಿ ಹಿತೈ ಪಿ ಇದಕ್ಕೆ ನಾವು ಈಗೇನು ಮಾಡಬೇಕು ? ವಿಚಾರಗಳನ್ನು ಚರ್ಚಿಸಿ, ನ್ಯಾಯವನ್ನು ನಿರ್ಧರಿಸಿ, ಸಮಾಜದ ಶಾಂತಿಯನ್ನು ಮತ್ತೆ ಸಂಸ್ಥಾಪನೆ ಮಾಡಬೇಕು. 1 ಮತ್ತೊಂದುಬಾರಿ -ಮತ್ತೊಂದುಬಾರಿ. ) ಹಾಗಿದ್ದರೆ, ಚೆನ್ನಾಗಿ ಕೇಳಿರಿ, ಪ್ರಿಯಬಾಂಧವರೇ! ಇಂದಿನ ಈ ನಮ್ಮ ಸಭೆಯ ಉದೆ ಶವು, ಸಮಾಜದ ನ್ಯಾಯಸಂಸ್ಥಾಪನೆಗೆಂದೇ ಆಗಿದೆ. ಇಂತಹ ಸುಯೋಗ ವನ್ನು ನಾವು ಹೇಗೂ ವ್ಯರ್ಥಮಾಡಿಕೊಳ್ಳಬಾರದು. ಕೇಳಿರಿ, ಕೇಳಿರಿ.) ಮೊದಲು, ಈಗ ಈ ಶಿವಪುರದ ಅಶಾಂತಿಯನ್ನು ಕುರಿತು, ಒಂದೆರಡು. ನಾಲ್ಕಾರು ಮಾತುಗಳನ್ನಾಡಿ ಆ ಬಳಕ ಮುಂದಿನ ನಮ್ಮ ಕರ್ತವ್ಯವನ್ನು ನಿರ್ಧರಿಸುವ, [ಪ್ಪಿತ, ಒಪ್ಪಿತ.) (ನಗೇಶರಾಯನು...............ನ್ಯಾಯಶಾಸ್ತ್ರಕ್ಕೆ ವಿರೋಧವಾಗಿ ನಡೆಸುವುದಲ್ಲದೆ, ಅನೇಕ ಅತ್ಯಾಚಾರಕ್ಕೂ ಕಾರಣನಾಗಿ ತಿರುಗಿದ್ದಾನೆ. ಮದುವೆಯಕಾಲವು ಮೀರಿದ್ದರೂ ಮಗಳನ್ನು ಹಾಗೆಯೇ ಬೆಳೆಸುತ್ತಿರುವ ನಲ್ಲದೆ,.........ಅವಳಾವಳೋ ಅಜ್ಞಾತ ತ್ರದ ಭಿಕ್ಷುಕನ ಮಗಳು. ಅವಿವಾಹಿತೆಯಾದ ಷೋಡಶಿಯೊಬ್ಬಳನ್ನು ಬೇರೆ ಮನೆಯಲ್ಲಿ ಕರೆತಂದಿಟ್ಟು, ಅವಳ ಮೂಲಕ ಗುರುಹಿರಿಯರನ್ನೂ, ದೈವಬ್ರಾಹ್ಮಣರನ್ನೂ ವಿಶೇಷವಾಗಿ ನಿಂದಿಸುತ್ತಿರುವನು. ಇಷ್ಟೇ ಅಲ್ಲ! ಇನ್ನೂ ಎಷ್ಟೆಷ್ಟೋ ಅತಿಕ್ರಮಗಳಿಂದ ನಮ್ಮ ಜನಾಂಗಕ್ಕೂ ಪಟ್ಟಣಕ್ಕೂ ಮುಖ್ಯ ಶತ್ರುವಾದ ರಕ್ಕಸನಂತೆ...... ತಿರುಗುತ್ತಿರುವನು. ಅವನ ಹಣಕ್ಕೆ ಬೆರೆದ ಇತರ ನಾಸ್ತಿಕರೂ, ಈಗಿನ ನಾಗರಿಕರೆಂದು ಹೆಸಗೊಂಡ ಅಧಿಕಾರಿಗಳೂ ಅವನಂತೆಯೇ ನಡೆಯುತ್ತಿ ರುವರು ...... ಈಗಾಗಲೇ ಎಷ್ಟೋ ಸೇವಾಕಾರ್ಯಗಳು ನಿಲ್ಲಿಸಲ್ಪಟ್ಟಿವೆ. ಮಠಕ್ಕೆ ಬರುತಿದ್ದ ವರಮಾನದಲ್ಲಿ ಅರೆಪಾಲು ಕಡಿಮೆಯಾಗಿದೆ. ಸೇವೆ..... ಗೆಂದು ಬರುತ್ತಿದ್ದ ಆದಾಯದಲ್ಲಿ ಮೂರು ಪಾಲ: ತಡೆಯಲ್ಪಟ್ಟು, ಅವೆಲ್ಲವೂ ಜಲಾಶಯ ನಿರ್ಮಾಣ, ಅನಾಥಾಲಯಸ್ಸಾಪನೆ ಮೊದಲಾದುವಕ್ಕೆಂದು ವಿನಿಯೋಗವಾಗುತ್ತಿವೆ......ನಗೇಶರಾಯನ ಪುಂಡಾಟದಿಂದ ಮಠಕ್ಕೂ ಸಮಾಜಕ್ಕೂ ಸಾವಿರಗಟ್ಟಿ ರೂಪಾಯಿಗಳ ವರೆಗೂ ನಷ್ಟವಾಗಿರುವುದಲ್ಲದೆ, ಇನ್ನೂ ಸರ್ವನಾಶವಾಗುವಂತೆ ಮಾಡುವ ಸೂಚನೆಯ ಇದೆಯೆಂದರೆ ಸಾಕು, ”
ಪುಟ:ಮಾತೃನಂದಿನಿ.djvu/೧೩೨
ಗೋಚರ