ಮಾತೃನ ೦ ದಿ ನಿ 125 ದಂತೆ ನಡೆಯಲು ಪ್ರೇರಿಸುವುದೂ, ನಮ್ಮ ಪ್ರತಿ ಕಾರ್ಯಕಲಾಪವೂ ದೇಶಭಕ್ತಾಗ್ರಣಿಗಳಾದ ನಗೇಶರಾಯರೇ ಮೊದಲಾದ ನಮ್ಮ ಹಿರಿಯರ ಅಭಿ ಮತಕ್ಕೊಳಪಡುವಂತೆ ನಡೆಸುವುದೂ, ಇಲ್ಲಿ ನಾವು ಮಾಡಬೇಕಾದ ಮುಖ್ಯ ಕಾರ್ಯವಾಗಿರುವುದು. ಇನ್ನು ಉಳಿದ ವಿಚಾರಗಳನ್ನು ಮತ್ತೊಮ್ಮೆ ಚರ್ಚಿ ಸಲಾದೀತು. ಮುಖ್ಯವಾಗಿ, ನಾವು, ನಮ್ಮ ದೇಶಕಲ್ಯಾಣಕ್ಕಾಗಿ ನಮ್ಮ ಸರ್ವಸ್ವವನ್ನೂ ಧಾರೆಯೆರೆಯಬೇಕೆಂಬುದೇ ನನ್ನ ಇಂದಿನ ದೈನ್ಯಸಂಪ್ರಾರ್ಥನೆಯಾಗಿದೆ.
ಎಲ್ಲಿ,--ನನ್ನ ಪ್ರಿಯಭಾಂದವರೇ! ಏಳಿರಿ, ಎದ್ದುನಿಂತು ಕೂಗಿ ಹೇಳಿರಿ,-ಉಚ್ಚಸ್ವರದಿಂದ ಕೂಗಿ ಹೇಳಿರಿ. ಹೂ೦? ಎಲ್ಲಿ! "ದೇಶಮಾತೆಗೆ ಜಯವು. ದೇಶಸೇವಕರಿಗೆ ವಿಜಯವು, ಸಮಾಜಕ್ಕೆ ಅಭ್ಯುದಯವು; ಸಂಘಶಕ್ತಿಗೆ ದಿಗ್ವಿಜಯವು; ಇದೇ ನಮ್ಮ ನಿರಂತರದ ಪ್ರಾರ್ಥನೆಯು ! ದೇಶಮಾತೆಯೇ ನಮ್ಮ ಇಷ್ಟ ದೇವತೆಯು !! ಇದು ನಿಜವು.”
ಮತ್ತೊಮ್ಮೆ ಕೂಗಿ ಹೇಳಿರಿ." ಸಂಘಶಕ್ತಿಗೆ ಜಯವಾಗಲಿ! ಮಾತೃ ಸೇವೆಯಲ್ಲಿ ಜನ್ಮ ಸಾಫಲ್ಯಹೊಂದುವಂತೆ ಈ ಸಂಘಶಕ್ತಿಯು ನಮ್ಮನ್ನು ಸಹಕರಿಸುತ್ತಿರಲಿ! ಇಂದಿನ ಸಂಘಶಕ್ತಿಸ್ಥಾಪನೆಯೇ, ಈ ಪಟ್ಟಣದ ಮಾಹಾ ಜನರ ಬಹಿಷ್ಕಾರ ಪತ್ರಕ್ಕೆ ಪ್ರತೀಕಾರವಾಗಿ. ಅವರನ್ನೇ ನಮ್ಮ ಈ ಸಂಘದಿಂದ ಪ್ರತ್ಯೇಕಿಸುವಂತೆ ಮಾಡಲಿ” ಹೇಳಿರಿ, ಹೇಳಿರಿ," ನಮ್ಮ ಈ ಸಂಘ ಶಕ್ತಿಯು ನಿರಂತರವಾಗಿ ಉನ್ನತಿಗೆ ಬರಲಿ.”
(ಸಭಿಕರೆಲ್ಲರೂ ಎದ್ದು ನಿಂದು ಕರತಾಡನಪೂರ್ವಕವಾಗಿ ಅಚಲಚಂದ್ರ ನೊಡನೆ ಮತ್ತೆಮತ್ತೆಯೂ ಮೇಲಿನ ವಾಕ್ಯಗಳನ್ನು ಉದ್ದೇಷಿಸುತಾ ಕುಣಿದಾಡಿದರು. ಆ ವರೆಗೂ ಸಭಾಕಾರ್ಯವು ನಿರ್ವಿಘ್ನವಾಗಿ ನಡೆದುದನ್ನು
ನೋಡುತ್ತಿದ್ದಭಟ್ಟಾಚಾರ್ಯರಾದಿಯಾದವರು ಕುಳಿತಿದ್ದಲ್ಲಿಂದ ಮೆಲ್ಲನೆ ಜಾರಿ ತಲೆತಪ್ಪಿಸಿಕೊಂಡು ಹೊರಟುಹೋದರು, ಮುಂದೆ ನಡೆಯ ಬೇಕಾದ ಸಭಾ ಕಾರ್ಯಗಳ ಸಂಭ್ರಮವನ್ನು ವಿವರಿಸಬೇಕೇ? ಒಟ್ಟಿನಲ್ಲಿ, ವಿಚಾರಗಳು ನಿರ್ಧಾರಿತಗಳಾಗಿ, ಸಕಲರೂ ಸಂಭ್ರಮದಿಂದ ಮುಂದಿನ ಕಾರ್ಯದಲ್ಲಿ ಗಮನಿಸಿದರೆಂದರೆ ಸಾಕು.)