126
|| ಶ್ರೀಃ ||
ದ್ವಾದಶ ಪರಿಚ್ಛೇದ.
( ಸಂಪ್ರಾರ್ಥನೆ! ಸಮಾಲೋಚನೆ ! ವಿಶೇಷಸೂಚನೆ! ) “ದೇಹಾಯಾಸವಾಗಿದ್ದರೆ ಸ್ವಲ್ಪ ಹೊತ್ತಾದರೂ ವಿಶ್ರಾಂತಿಹೊಂದ ಬೇಡವೇ ? ”
" ವಿಶ್ರಾಂತಿಯೆಂದರೆ ನಿನ್ನ ಅಭಿಪ್ರಾಯವೇನು ? ಮಲಗುವುದೊಂದೆ ಯೋ? ಹಾಗಿದ್ದರೆ, ಅದು ನನಗೆ ರುಚಿಸದು.”
"ನಾನು ಮಲಗಬೇಕೆಂದು ಬಲವಂತವನ್ನೇನೂ ಮಾಡಲಿಲ್ಲ. ದಾರಿನಡೆದು ದುಡಿದು ಬಂದಿರುವವರು, ಒಂದು ಮುಹೂರ್ತಮಾತ್ರವಾದರೂ ವಿಶ್ರಮಿಸಿಕೊಳ್ಳುವುದು ಆರೋಗ್ಯವೆಂದು ಹೇಳಿದೆನು; ಅಷ್ಟೆ.”
..ಹಾಗೋ? ಸರಿ.ನಾನೂ ವಿಶ್ರಮಿಸಿಕೊಳ್ಳಲಿಕ್ಕೇ ಬಂದಿರುತ್ತೇನೆ. ದೇಹಾಯಾಸವನ್ನು ಪರಿಹಾರಮಾಡುವುದಕ್ಕೂ, ನೂತನ ಶಕ್ತ್ಯುತ್ಸಾಗಳನ್ನು ಕೊಡುವುದಕ್ಕೂ ಸಹಧರ್ಮಣೆ, ಅಥವಾ, ಅರ್ಧಾಂಗಿಯ ಸರಸ ಪ್ರಸಂಗವೇ ನಾಕಾದ ವಿಶ್ರಾಂತಿಯಷ್ಟೆ ?” ಈ ಬಗೆಯ ಉಕ್ತಿ ಪ್ರತ್ತ್ಯುಕ್ತಿಗಳು ವಿಶ್ರಾಂತಿಸ್ಥಾನದಲ್ಲಿ ಚಾಪೆಯ ಮೇಲೆ ಕುಳಿತಿದ್ದ ನಗೇಶರಾಯನಿಗೂ, ಆತನ ಬಳಿಯಲ್ಲಿಯೇ ಕುಳಿತು ವೀಳ್ಯವನ್ನೊಪ್ಪಿಸುತ್ತಿದ್ದ ಚಿತ್ರಕಲೆಗೂ ನಡೆಯುತ್ತಿದ್ದುವು. ನಗೇಶರಾಯನು ಕೈಯಲ್ಲಿ ಯಾವುದೋ ವರ್ತಮಾನ ಪತ್ರಿಕೆಯನ್ನು ಹಿಡಿದು, ಒಂದು ಬಾರಿ ಪತ್ರವನ್ನೋದುತ್ತ, ಮತ್ತೊಂದು ಬಾರಿ ಪತ್ನಿಯ ಮುಖವನ್ನು ನೋಡುತ್ತ ಕುಳಿತಿದ್ದನು. ಚಿತ್ರಕಲೆಯು ಪತಿಯ ಮುಂದೆ ಕುಳಿತು, ಕೋಮಲ ಸ್ವರದಿಂದ, ಮೃದುಮಧುರವಾಣಿಯಿ೦ದ ಪತಿಯ ಕುಶಲವಾರ್ತೆಯನ್ನು ಕೇಳಿ, ತಕ್ಕಂತೆ ಸದುತ್ತರಗಳನ್ನು ಕೊಡುತ್ತಿದ್ದಳು. ( ಈ ನಮ್ಮ ಆದರ್ಶ ರಮಣಿಯ ಪತಿಭಕ್ತಿಯೂ. ಇವಳ ಗೃಹಿಣೀಕರ್ತವ್ಯಪರಾಕಾಷ್ಟೆಯೂ, ನಮ್ಮ ಅರ್ಯಮಹಿಳೆಯರೆಲ್ಲರಿಂದಲೂ ಅತ್ಯಾವಶ್ಯಕವಾಗಿ ಸಂಗ್ರಹಿಸಲ್ಪಡ