ಪುಟ:ಮಾತೃನಂದಿನಿ.djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾತೃನ ೨ ದಿ ನಿ 121 ಬೇಕೆಂಬ ಉದ್ದೇಶದಿಂದ ಇವರ ಸಂಭಾಷಣೆಯನ್ನು ಯಥಾವತ್ತಾಗಿ ಇಲ್ಲಿ ಕೊಟ್ಟಿರುವೆವು.) ನಗೇಶರಾಯನು ತನ್ನ ಮಾತಿಗೆ ಉತ್ತರವಿಲ್ಲದುದನ್ನು ನೋಡಿ, ಮತ್ತೆ ಕುತೂಹಲದಿಂದ.- ಕೆ, ಮಾತಿಲ್ಲ? ಹೇಳಬಾರದೇ ? " ಚಿತ್ರಕಲೆ:- ನಾನು ಹೇಳುವುದೇನು ? ಪ್ರಭುವು, ತನ್ನ ಸರಿತಾ ರಕರನ್ನು ವಿಶೇಷವಾಗಿ ಪ್ರಶಂಸಿಸಿದರೆ, ಅವರ ಬಾಯಿಂದ ಹೇಗೆ ತಾನೇ ಉತ್ತರವು ಹೊರಡಬೇಕು? ೨

  • ನರೇಶ:- ಪರಿಚಾರಕರಾರು? ಪತ್ನಿ ಯೂ ಪರಿಚಾರಿಣಿಯೊ ? ಆ ಮೂಢಭಾವನೆಯು, ಮೂರ್ಖಸಮಾಜಕ್ಕೆ ಮಾತ್ರವೇ ಸೇರಿರಲಿ, ನನಗೆ ನೀನು ಅದಿಶಕ್ತಿಸ್ವರೂಪಿಣಿಯಾದ, ನೂತನಶಕ್ತಿ ಪ್ರದಾಯಿನಿಯಾದ ನನ್ನ ಇಷ್ಟ ದೇವತೆಯೇ ಸರಿ, ಯಾವ ಸತೀಮಳೆಯು, ತನ್ನ ಪತಿಗೆ ಸಹಕಾರಿ ರ್ರಿಣಿಯಾಗಿದ್ದು ಅಕೃತ್ರಿಮಪ್ರೇಮದಿಂದ ಆತನ ಶ್ರೇಯೋಭಿವೃದ್ಧಿಯನ್ನೇ ಮುಖ್ಯಗುರಿಯಾಗಿಟ್ಟು ಕೊಂಡು, ಕಾಲೋಚಿತ ನೀತಿಬೋಧೆಯಿಂದ ಆತನನ್ನು ವಿವೇಕಸಾಮ್ರಾಜ್ಯದಲ್ಲಿ ಅರಸುಖಿಯನ್ನಾಗಿ ಮಾಡುವ ಮಂತ್ರಿ ಯಂತಿರುವಳೋ, ಆ ಪುಣ್ಯವತಿಯನ್ನು ಪರಿಚಾರಿಣೀ, ರಾಸ್ತಿ-ಮೊದಲಾದ ಹೀನಭಾವನೆಯಿಂದ ಅಗೌರವಪಡಿಸುವವನು ಹುಚ್ಚನಲ್ಲದೆ ಬೇರಲ್ಲ. ಯಾವ ಗೃಹದಲ್ಲಿ, ಗೃಹಸ್ವಾಮಿನಿಗೆ, ಆರ್ಯಧರ್ಮಾಧಾರಪಾತ್ರೆಗೆ ಸನ್ಮಾನವುಂಟೆ, ಆ ಗೃಹವೇ ಸ್ವರ್ಗವು, ಎಲ್ಲಿ, ಸ್ತ್ರೀಯರು ಗೌರವಿಸಲ್ಪಡುವರೋ – ಅಲ್ಲಿಯೇ ಲಕ್ಷ್ಮಿಯ ಸಾಕ್ಷಾತ್ಕಾರವು. ಯಾರು, ಸ್ತ್ರೀಯರನ್ನು ಅಕೃತ್ರಿಮ ಪ್ರೇಮದಿಂದ ಪರಿಭಾವಿಸುವರೋ, ಅವರೇ, ಉತ್ತರೋತ್ತರಾಭಿವೃದ್ಧಿಯನ್ನು ಹೊಂದತಕ್ಕೆ ಧನ್ಯಾತ್ಮರು. ಹಾಗಿಲ್ಲದೆ, ಕೈ ಹಿಡಿದ ಹೆಂಡಿರನ್ನು ತೊತ್ತು ಗಳಂತೆಯ, ಹೆತ್ತತಾಯಿಯರನ್ನು ಶತ್ರುಸ್ವರೂಪರಂತೆಯ, ಇತರ ಅಬಲಾವರ್ಗವನ್ನು ದನಕರುಗಳಂತೆಯೂ ಭಾವಿಸಿ, ದಂಡಿಸುವ ವಿವೇಕಶೂ ನ್ಯರಿಗೆ, ಭಗವದನುಗ್ರಹವೂ, ಲಕ್ಷ್ಮೀಕಟಾಕ್ಷವೂ, ಶ್ರೇಯೋಭಿವೃದ್ಧಿಯ ಸ್ವಷ್ಟ ದಲ್ಲಾದರೂ ದುರ್ಲಭವೆಂದು ತಿಳಿ, ಅಂಥವರ ಮಾತು ನನಗೆ ಬೇಕಾ ಗಿಲ್ಲ,

ಚಿತ್ರಕಲೆ:-ನೀವು ಹೇಗಾದರೂ ಹೇಳಿಕೊಳ್ಳಬಹುದು. ಆದರೆ,