128 ಸತೀಹಿತೈಷಿಣೀ
ತಿಳಿದವರೆನ್ನಿಸಿಕೊಂಡವರು, ನಿಮ್ಮನ್ನು ಸ್ತ್ರೈಣರೆಂದು ಹೇಳಿದರೆ, ಏನೆಂದು ಉತ್ತರವನ್ನು ಕೊಡುವಿರಿ?
ನಗೇಶ:-ತಲೆಯೆತ್ತಿ-'ಏನೆಂದು ಉತ್ತರವನ್ನು ಕೊಡುವೆನೆ ? ಅಂತಹ ಆಕ್ಷೇಪಕರಿಗೆ ನನ್ನ ಸಮಾಧಾನವಿಷ್ಟೇ'-"ನಿಜ; ನಾನು ಸತ್ಯವಾಗಿಯೂ ಸ್ತ್ರೈಣನೇ ಸರಿ. ಏಕೆಂದರೆ, ಆದಿಶಕ್ತಿಯ ಅಂಶಾವತಾರವಾಗಿರುವ ಯಾವ ಸ್ತ್ರೀವಗವನ್ನು ಗೌರವಿಸಿಯೇ ನಾವು ಮುಂದಕ್ಕೆ ಬರಬೇಕಾಗಿರುವುದೋ, ಅಂತವರನ್ನು ಹಳಿದಾಡುವ ಮತ್ತು ನಿರ್ಬಂಧದಲ್ಲಿಟ್ಟು ಗೋಳಿಡುವ, ಇಲ್ಲವೆ ಅಪವಾದಾರೋಪಗಳಿಗೆ ಬಲಿಕೊಡುವ ದುರಭಿಮಾನವು ನನಗಿಲ್ಲ. ನಾನು ನನ್ನ ಸತಿಯಲ್ಲಿ ಕೇವಲ ಗೌರವವನ್ನೇ ಬೆಳೆಯಿಸಿರುವೆನು. ಅವಳ ಅಂತರಂಗ ಸಹಾಯದಿಂದಲೇ ನನ್ನ ಪ್ರತಿಯೊಂದು ಕಾರ್ಯವೂ ನಾರ್ಥಿಕ್ಯವೆನ್ನಿಸುವುದು. ಅದಿಲ್ಲದಿದ್ದರೆ ಇದೂ ಆಗುತ್ತಿರಲಿಲ್ಲ.” ಚಿತ್ರ:-ಲಗೈಯಿ೦ದ -- "ಸಾಕು, ಸಾಕು. ಇಂದೇನೋ ವಿಪರೀತ ಜೋಧೆಯಾದಂತೆ ತೋರುತ್ತಿದೆ? ಕೈಯಲ್ಲಿರುವ ಪತ್ರಿಕೆಯಾವುದು ? " ನಗೇಶ:-ಕಿರುನಗೆಯಿಂದ-'ನಿನಗೆ ನನ್ನ ಮಾತು ಸಹನಾತೀತವಾಯಿತಲ್ಲವೆ? ಹೋಗಲಿ, ಈ ಪತ್ರಿಕಯು 'ಸುರ್ಯೋದಯ' ವೆಂಬ ದೈನಿಕ ವಾರ್ತಾಪತ್ರಿಕೆ. ಇದರಲ್ಲಿ ಕೊಟ್ಟಿರುವ ಅತ್ಯುತ್ತಮ ಲೇಖನದ ಬೋಧೆಯೇ ನನಗೆ, ಇಂದು ಇಷ್ಟು ಉತ್ಸಾಹವನ್ನುಂಟುಮಾಡಿದೆ'. ಚಿತ್ರ:-ಅದಾವಲೇಖನ ? ಯಾವ ವಿಷಯದಲ್ಲಿ? ನಗೇಶ:- ಇದು, ನಮ್ಮ ಕಲೆಕ್ಟರರ ಬೀಗನೂ, ಪರಿಮಳೆಯ ಮಾವನೂ ಆದ ವಿದ್ಯಾನಂದಬಾಬುವೂ ಆತನ ಮುಖ್ಯ ಶಿಷ್ಯನಾದ ಅಚಲ ಚಂದ್ರನೂ ಸೇರಿ ಬರೆದುದಾಗಿರಬೇಕು. ವಿಷಯವು ಬಹು ವಿಸ್ತಾರವಾಗಿದೆ. ಅಷ್ಟನ್ನೂ ವಿವರಿಸುವುದಕ್ಕಾಗದು. ಒಟ್ಟಿನಲ್ಲಿ ಸತೀವರ್ಗದವರ ಸಹಾನು ಭೂತಿಯೇ ಸರ್ವಾರ್ಥಸಿದ್ಧಿಗೂ ಹೇತುವೆಂಬುದೂ ಈ ಶಿವಪುರದ ಮೂರ್ಖ ಭಾವದ ಮಹಾಜನರು ಸತೀವರ್ಗದಲ್ಲಿ ಹೇಗೆ ವರ್ತಿಸುತ್ತಿರುವರೆಂಬುದೂ ಈ ಊರಿನ ಭಟ್ಟಾಚಾರ್ಯರು-ಪಂತರು ಮೊದಲಾದ ಪೀಠಾಶ್ರಿತರಾದವರ ನಡೆವಳಿಗಳೂ ಬಹು ಸಮಂಜಸವಾಗಿ ವಿವರಿಸಲ್ಪಟ್ಟಿವೆ. ಅಲ್ಲದೆ, ಅದರ ಮುಂದೆ ಅಚಲಚಂದ್ರನ ಉಪನ್ಯಾಸದ ವಿಷಯವೂ ಅಂದಿನ ಆತನ ಭಾಷಣ.