132 ಸತೀ ಹಿತೈಷಿಣೇ ಸಮೇತವಾಗಿ, ಸಪರಿವಾರವಾಗಿ, ನಾವೆಲ್ಲರೂ ಅಲ್ಲಿಗೆ ಹೋಗಿ ಸೇರಬೇಕೆಂ ದೂ, ಆ ದಿನದಲ್ಲಿ ನಂದಿನಿಯನ್ನು ದೇವಿಯಮುಂದೆ ಅಭ್ಯುದಯ ಪೀಠದಲ್ಲಿ ಕುಳ್ಳಿರಿಸಿ, ತಾವು ಮಾಡಬೇಕಾಗಿರುವ ಕಾರ್ಯಭಾರವನ್ನು ಸಾಂಗವಾಗಿ ಮಾಡಿ, ಕೃತಾರ್ಥರಾಗುವೆವೆಂದೂ, ಹೇಳಿರುವರು. ನಾದಾನಂದನ ವಿಚಾ ರವಾಗಿ, ನೀವೆಲ್ಲರೂ ಪೂರ್ಣ ವಿಶ್ವಾಸ ಗೌರವವನ್ನು ತೋರಿಸುತ್ತಿರಬೇ ಕೆಂದೂ, ಸೂಚಿಸಿರುವರು. ಇದಲ್ಲದೆ... 'ನೀವು ಊರಿಗೆ ಹೋದ ಬಳಿಕ, ನಿಮ್ಮ ಮೇಲೆ, ಮತ್ತೊಂದು ಕಾರ್ಯಭಾರವು ಬೀಳಬಹುದು. ಅದನ್ನು ಅಚಲನ ಅಭಿಪ್ರಾಯಾನುಸಾರವಾಗಿ ನೆರವೇರಿಸಿದರೆ ಉತ್ತಮವು.' ಎಂದೀ ಬಗೆಯಾಗಿಯೂ ಹೇಳಿಕಳಿಸಿರುವರು. ಚಿತ್ರ:- ವಿಸ್ಮಯ ಕೌತುಕಗಳಿಂದ ನೋಡುತ್ತ,_' ಅದೇನಾಗಿರ ಬಹುದು? ' ನಗೇಶ: ಯಾರು ಬಲ್ಲರು ? ಅಳಿಯನು ಕುರುಡನಾಗಿದ್ದರೆ, ಬೆಳಗಾ ದೊಡನೆ ತಿಳಿವುದಲ್ಲವೆ? ಚಿತ್ರ:- ಯಾವ ಕಾರ್ಯಗೌರವವೋ, ಏನು ಸಮಾಚಾರವೋ ಹೇಗೂ, ಆತನು ಈಗ ಮೂರು ದಿನಗಳಿಂದ ಲೂ ಇಲ್ಲಿಗೆ ಬಂದಿಲ್ಲ. ಸಗೇಶ:- ತಲೆದೂಗಿ- 'ಆಗಲಿ, ಆಗಲಿ, ತಡೆದು ನೋಡಿ ಕೇಳೊಣ.' ಎಂದು ಹೇಳಿ ಬಾಗಿಲಕಡೆಗೆ ತಿರುಗಿ-'ಸ್ವರ್ಣ ! ಸ್ವರ್ಣ, ಕುಮಾರಿ !' ಎಂದು ಎರಡು ಬಾರಿ ಕೂಗಿದನು. ಸ್ವರ್ಣ: -ಓಡಿಬಂದು-ಏನಪ್ಪ? ಏಕೆ ಕೂಗಿದೆ? ' ನಗೇಶ:-ನಾದಾನಂದನು ಮನೆಯಲ್ಲಿಲ್ಲವೇ? ಸ್ವರ್ಣ:- ಇಲ್ಲ. ಇಂದು ಯಾವುದೋ ಸಂಘದವರ ವಾರ್ಷಿಕ ಸಭೆಯಂತೆ, ಅದಕ್ಕೆ ಹೋಗುತ್ತೇನೆಂದು ಹೇಳಿ ಹೊರಟುಹೋದನು. ನಗೇಶ:-ಹೋಗಲಿ; ನಂದಿನಿಯಾದರು ಎಲ್ಲಿರುವಳು? ಏನು ಮಾಡುತ್ತಿ ರುವಳು? ಸ್ವರ್ಣ :-- ಕಿರುಮನೆಯಲ್ಲಿ ಕುಳಿತು, ಅಚಲಚಂದ್ರನಾಥನೊಡನೆ ಮಾತನಾಡುತ್ತಿರುವಳು. ನಗೇಶ:- ಏನು ? ಅಚಲಚ೦ದ್ರನು ಬ೦ದಿರುವನೇ? ಎಷ್ಟು ಹೊತ್ತಾಯಿತು?
ಪುಟ:ಮಾತೃನಂದಿನಿ.djvu/೧೪೬
ಗೋಚರ