ವಿಷಯಕ್ಕೆ ಹೋಗು

ಪುಟ:ಮಾತೃನಂದಿನಿ.djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾತೃನಂದಿನಿ 131 ವೆಂದೂ, ಉಚಿತ ರೀತಿಯಲ್ಲಿ ಮುಂದಿನ ಕರ್ತವ್ಯವನ್ನು ನೆರೆವೇರಿಸಬೇ ಕೆಂದೂ ಯೋಚಿಸಿ ನಮ್ಮನ್ನು ಕರೆಯಿಸಿದ್ದರು. ಚಿತ್ರ:- ಕುತೂಹಲದಿಂದ-"ಮತ್ತೇನಾದರೂ ವಿಶೇಷವುಂಟೇನು ? ನೀವು ಮೂರುಮಂದಿಯೂ ಹೋಗಿದ್ದಿರೇಕೆ?” ನಗೇಶ:- ವಿಶೇಷವಿನ್ನೇನು ? ಅಚಲಚಂದ್ರನ ಕಾರ್ಯಕಲಾಪಗಳ ಪ್ರಭಾವವೇ ಎಲ್ಲೆಡೆಯಲ್ಲಿಯೂ ಬೆಳಗುತ್ತಿವೆ. ಇಲ್ಲಿ ನಡೆದ ವಿದ್ಯಮಾನಗಳಲ್ಲಿ ಒಂದು ನಾಸಿವೆಕಾಳಸ್ಟಾದರು ಬಿಟ್ಟು ಹೋಗದೆ, ಎಲ್ಲವೂ, ಅವರಿಗೆ ನಿವೇದಿಸಲ್ಪಟ್ಟಿವೆ. ಅದರ ಮೇಲೆಯೇ ಅವರು ನಮ್ಮನ್ನು ಬರೆಹೇಳಿಕಳಿಸಿದ್ದುದಾಗಿ ತಿಳಿದುಬಂದಿದೆ. ಚಿತ್ರ:-- ಆದರೂ ಅಚಲನೆಂದರೆ ಸಾಮಾನ್ಯನಲ್ಲ.ಅಬ್ಬ!ಏಷ್ಟು ಸಾಹಸಪರ! ನಗೇಶ:- ಆತನ ಸಾಹಸವು ಸಾಮಾನ್ಯವಾದುದಲ್ಲ. ಆತನಿಗೆ-ಆತನು ಕೋರಿದಷ್ಟರ ಸ್ವಾತಂತ್ರ್ಯವು ಮಾತ್ರ ದೊರೆತಿದ್ದರೆ, ಇಲ್ಲಿಯ ಗುರು ಪೀಠಾಧಿಪತಿಸ್ಥಾನದಲ್ಲಿರುವ ಕಪಟಸನ್ಯಾಸಿಯನ್ನೂ, ಆತನ ಅಸುಗಾರುಗಳನ್ನೂ ಆಗಲೆ ಶಿವಪುರದ ಎಲ್ಲೆಯಿಂದಾಚೆಗೆ ಹೊಡೆದೋಡಿಸಿಬಿಡುತ್ತಿದ್ದನು; ಅಷ್ಟಕ್ಕೆ ಅವಕಾಶವನ್ನು ಕೊಡದೆ, ನಮ್ಮ ಸ್ವಾಮೀಜೀಯವರು ತಡೆದು, ವಿವೇಕವನ್ನು ಬೋಧಿಸಿದುದರಿಂದ ಇಷ್ಟುಮಟ್ಟಿನ ತಾಳ್ಮೆಯನ್ನು ಹೊಂದಿರುವನು. ಆದರೂ ಭಟ್ಟಾಚಾರ್ಯರೂ, ಪಂತರೂ, ಈತನ ಕೋಪವನ್ನು ತಿಳಿದು, ಹೊರಟೇ ಹೋದರು. ಮತ್ತೇನು ಹೇಳುವುದು? ಚಿತ್ರ:-ಸತ್ಯಾನಂದ ಸ್ವಾಮೀಜೀಯವರೂ ಅಚಲಚಂದ್ರನ ಪ್ರಾರ್ಥನೆಗೆ ಕಟ್ಟುಬಿದ್ದಿರುವರೇನು? ನಗೇಶ:- ಹಾಗೆ ಕಟ್ಟುಬೀಳದೆ ಇರುವ ಪಕ್ಷದಲ್ಲಿ ಈಗ ನಮ್ಮನ್ನು ಕರೆಸುತ್ತಿರಲಿಲ್ಲ. ಅಚಲಚಂದ್ರನ ಯುಕ್ತಿಯುಕ್ತವಾದ ಪ್ರಾರ್ಥನೆಗಳು ಅವರಿಗೆ ಸರ್ವರಾ ಪ್ರಿಯವನ್ನೇ ಉಂಟುಮಾಡುತ್ತಿವೆಯಂತೆ. ಚಿತ್ರ:-ಹಾಗಾದರೆ, ಅವರು ನಿಮಗೆ ಹೇಳಿದುದೇನು ? ನರೇಶ:-ನಂದಿನಿಯನ್ನು ಇಲ್ಲಿಗೆ ಕರೆತಂದು ಬಿಡಬೇಕೆಂದೂ, ಅದಕ್ಕಾಗಿ ತಾವು ದಿನವನ್ನು ಗೊತ್ತುಮಾಡಿ ಕಳಿಸುವಾಗ ಸಕಲ ಸಾಹಿತ್ಯ