ಪುಟ:ಮಾತೃನಂದಿನಿ.djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



130 ಸತೀಹಿತೈಷಿಣೀ ನಗೇಶ:– ದೀರ್ಘಸಂಚಾರಕ್ಕೆ ಹೋಗಿರಲಿಲ್ಲ . ಅವರ ಪ್ರವಾಸವು ನಾಲ್ಕಾರು ತಿಂಗಳಲ್ಲೆಯೇ ಮುಗಿದು ಅವರಾಗಲೇ ಬಂದು ಮಾತೃಮಂದಿರವನ್ನು ಸೇರಿದ್ದರು. ಚಿತ್ರ:-- ಹಾಗಾದರೆ, ಈವರೆಗೂ ತಿಳಿಸದೆಯೇ ಇದ್ದುದೇಕೆ? ನಗೇಶ:-ನನಗೆ ತಿಳಿದಿದ್ದರಲ್ಲವೆ? ಶರಶ್ಚಂದ್ರನಿಗೂ ಆತನ ಪುತ್ರನಿಗೂ ಮಾತ್ರವೇ ತಿಳಿದಿದ್ದಿತು. ಅವರು ಸ್ವಾಮಿಯಿಂದ ತಡೆಯಲ್ಪಟ್ಟು ಹೇಳದಿದ್ದರು. ಚಿತ್ರ:-ಇಂದು ಕರೆಯಿಸಿದ್ದುದೇಕೆ ? ನಗೇಶ:-ತಮ್ಮಲ್ಲಿಗೆ ಮತ್ತೆ ನಂದಿಸಿಯನ್ನು ಕರೆಯಿಸಿಕೊಳ್ಳಬೇಕೆಂದು. ಚಿತ್ರ: -ಬೆದರಿನೋಡುತ್ತ - ಏನು ಏನು? ನಂದಿನಿಯು ಹೊರಟು ಹೋಗುವಳೆ'? ನಗೇಶ:-ಬೇಡವೇ? ತಂದೆಯೇ ಕರೆದೊಯ್ಯಲು ಒಂದರೆ ಕಳುಹ ಬೇಡವೇ? ಚಿತ್ರ: -- ನಾನು ಏನನ್ನೂ ಹೇಳಲಾರೆನು. ಈ ಭಾಗ್ಯಕ್ಕೆ ನಂದಿನಿಯನ್ನು ಇಲ್ಲೇಕೆ ಬಿಡಬೇಕಾಗಿದ್ದಿತು ? ನಗೇಶ:-- ಏಕೆಂದರೆ, ವಯಸ್ಸಾದವಳನ್ನು ಆ ಸಿರ್ಟನಪ್ರದೇಶದಲ್ಲಿರಿಸಿಕೊಂಡಿರುವುದು ಸರಿಯಲ್ಲವೆಂದೂ, ಇತರ ದೇಹಾಸುಬಂಧಿಗಳ ಬಳಿಯಲ್ಲಿ ಬಿಟ್ಟರೆ, ತಮ್ಮ ವಿರಕ್ತಹೃದಯವು ಮತ್ತೆ ಸ್ವಜನರಕಡೆಗೆ ಎಳೆಯಲ್ಲಡಲು ದಾರಿಯಾಗಬಹುದೆಂದೂ ಯೋಚಿಸಿ. ಕೇವಲ ಜ್ಞಾನದೃಷಿಯ ಧರ್ಮ ಬಾಂಧವ್ಯವನ್ನು ಮಾತ್ರವೇ ಗೌರವಿಸಿ, ನಮ್ಮಲ್ಲಿ ಅವಳನ್ನು ಒಪ್ಪಿಸಿದ್ದರು. ಚಿತ್ರ:- ಈಗ ಕರೆಯಿಸಿಕೊಳ್ಳುವುದು ಮಾತ್ರ ಸರಿಯೋ? ಈಗ ವಯಸ್ಸಾಗಿಲ್ಲವೋ ಇಲ್ಲದಿದ್ದರೆ, ಅವಳಿಗೇನಾದರೂ ಮುಪ್ಪಡಿಸಿ ಹೋಗಿದೆಯೋ ? ನಗೇಶ:-- ಮುಪ್ಪೇನೂ ಅಡಸಿಲ್ಲ. ನವೋಢೆಯಾದ ನಂದಿನಿಗೆ ಇಂದಿಗೆ ಸರಿಯಾಗಿ ಇನ್ನೊಂದು ವಾರದಲ್ಲಿ ಹದಿನಾರನೆಯ ವರ್ಷವು ಬೆಳೆಯುತ್ತದೆ. ಇನ್ನೂ ಈ ಬಗೆಯಾಗಿ ಅನ್ಯತ್ರ ಬಿಟ್ಟರುವುದು ಸರಿಯಲ್ಲ.