ಪುಟ:ಮಾತೃನಂದಿನಿ.djvu/೧೪೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಮಾತೃನ೦ದಿನಿ. 135

ಬೇಕೆಂಬುದು ತಿಳಿಯದೆಯೂ, ಪಾಪ ! ಹಿಂದುಮುಂದು ನೋಡುತ್ತಿದ್ದಳು. ಅಷ್ಟೆ 1'* ನಗೇಶ:-ಹಾಗೋ ಸರಿ ಸರಿ ! ಎಷ್ಟಾದರೂ ಅವಳ ಅಭಿಪ್ರಾಯವು ನಿನಗೂ ನಿನ್ನ ಇ೦ಗಿತವು ಅವಳಿಗೂ 

ತಿಳಿಯಬೇಕಾದುದು ಅವಶ್ಯಕವೇ ಸರಿ. ಇರಲಿ. ( ನರೇಶನ ಮಾತು ಮುಗಿಯಲಿಕ್ಕೆ ಮೊದಲೇ ನಾದಾನಂದನು ಮತ್ತಿಬ್ಬರು ಸಮಾನ ವಯಸ್ಕರೊಡನೆ ಅಲ್ಲಿಗೆ ಬಂದು ಸೇರಿದನು. ಇವರು ಬ೦ದುದನ್ನು ನೋಡಿ, ಅಚಲಚ೦ದ್ರನು ಒಮ್ಮೆ ಮೆಲ್ಲನೆ ನಕ್ಕು, ತಲೆದೂ ಗುತ್ತ)-ಸಮನವಾಗಿದೆಯಯ್ಯ-ಭಕ್ತಿಸಾರ ! ಎಂದು ಸುಮ್ಮನಾದನು. ನಗೇಶ:--ಚಕಿತನಾಗಿ ಏಕಕಾಲದಲ್ಲಿ ತ್ರಿಮೂರ್ತಿಗಳ ಸಾಕ್ಷಾತ್ಕಾರ? ಬಹುಸಂತೋಷ: ಕುಳಿತುಕೊಳ್ಳಿರಯ್ಯ! ಇಂದೇ ಸುದಿನ, ಇಂದೇ ನಮ್ಮ ಮನೆಯ ಮುಂದಿನ ಕಲ್ಯಾಣೋತ್ಸವದ ಶುಭಸೂಚನೆ.' ಭಕ್ತಿಸಾರ:-ಕಿರುನಗೆಯಿಂದ-' ಹಾಗೂ ಆಗಲಿ, ಹಿರಿಯರ ಆಶಿ೯ ವಾದವು ಶಿರೋಧಾಯ೯ವಲ್ಲವೇ? 'ಎ೦ದು ಮತ್ತಿಬ್ಬರೊಡನೆ ಕುಳಿತು ಕೊಳ್ಳುವನು.) ನಗೇಶ:-ಇದೇನು ಅಪೂರ್ವ ಲಾಭ? ಭಕ್ತಿಸಾರ: ತ್ರಿಮೂರ್ತಿಗಳನ್ನೂ ಪುತ್ರರನ್ನಾಗಿ ಮಾಡಿಕೊಂಡ ಬಳಿಕ, ಅಂತಹ ಪೂಜ್ಯಪಾದರಾದ ಸಾಕ್ಷಾತ್ ಅನುಸೂಯಾ-ಅತ್ರಿಮಹಾ ತ್ಮರನ್ನು ಸೇವಿಸಬೇಕಾದುದು ತ್ರಿಮೂರ್ತಿಗಳ ಕರ್ತವ್ಯವೇ ಅಹುದಷ್ಟೆ? ಅಚಲ... ಕೈಚಪ್ಪಾಳೆ ಹೊಡೆದು-'ಅದೀಗ ಸದುತ್ತರವು, ಮೆಚ್ಚಿದೆ. ಬಹುರಸವತ್ತಾಗಿದೆ. ಸೇವಾನಂದ:- ನಿಮ್ಮನ್ನು ಮೆಚ್ಚಿಸುವುದೇ ನಮ್ಮ ಮುಖ್ಯ ಗುರಿ, ನಿಮ್ಮ ಸುಪ್ರಸನ್ನತೆಯೇ ಈಗಿನ ನಮ್ಮ ಪ್ರಯತ್ನಕ್ಕೆ ಇಚ್ಛಿತಫಲವು. ಚಿತ್ರಕಲೆ:-ಸಂತೋಷದಿಂದ ವಾಚಾಳಕತೆಯಲ್ಲಿ ಒಬ್ಬರನ್ನು ಮತ್ತೊಬ್ಬರು ಮೀರಿಸುತ್ತಿರುವಿರಿ.' ನಾದಾನಂದ:-ಒಮ್ಮೆ ನಂದಿನಿಯನ್ನು ನೋಡಿ, ತಂದೆಯ ಕಡೆಗೆ ತಿರುಗಿ,- -' ಅಪ್ಪ ! ಇವರು ತಮ್ಮಲ್ಲಿ ವಿಜ್ಞಾಸನಪತ್ರವನ್ನು ಒಪ್ಪಿಸಬೇಕೆಂದು ಬಂದಿರುತ್ತಾರೆ.'