ಪುಟ:ಮಾತೃನಂದಿನಿ.djvu/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನರೇಶ: ---ಕೌತುಕದಿಂದ--'ಅದಾವುದು? ಏತಕ್ಕಾಗಿ? ಕಳುಹಿದವರಾರು?' ಭಕ್ತಿಸಾರ:-'ನಮ್ಮ ದೇಶಸೇವಾ ಸಂಘದವರ ಕಡೆಯಿಂದ ಬಂದಿದೆ. ಏತಕ್ಕಾಗಿ ಯಾರು ಕಳುಹಿದವರು ಎ೦ಬುದನ್ನು ಪತ್ರದಿಂದಲೇ ತಿಳಿಯಬೇಕು.'

ನರೇಶ: :"ಆಗಬಹುದು". ಎ೦ದು ಪತ್ರವನ್ನು ಕೈಕೊಂಡು, ಸ್ವರ್ಣೆಯ ಕೈಯಲ್ಲಿರಿಸಿ-"ಸ್ವರ್ಣ, ಎಲ್ಲಿ? ಮೊದಲು ಇದನ್ನು ಗಟ್ಟಿಯಾಗಿಯು, ಸ್ಪಷ್ಟವಾಗಿಯೂ ಓದಿಹೇಳು. ಆ ಬಳಿಕ ಉಳಿದ ಪತ್ರಗಳಾಗಲಿ.” ಸ್ವರ್ಣಯು ಅಚಲಚಂದ್ರನ ಮತ್ತು ಚಿತ್ರಕಲೆ-ನಂದಿನಿಯರ ಮುಖಗಳನ್ನು ನೋಡಿ ತಲೆಬಾಗಿ, ಪತ್ರವನ್ನು ಕೈಕೊಂಡು ವಾಚಿಸಲು ಮೊದಲು ಮಾಡಿದಳು ಕುಳಿತಿದ್ದವರೆಲ್ಲರೂ ಕುತೂಹಲಾನಿಷ್ಟರಾಗಿ, ಸ್ವರ್ಣೆಯನ್ನೇ ನೋಡುತ್ತಿದ್ದರು. ವಾಚಕರ ತಿಳಿವಿಗಾಗಿ ಪತ್ರದ ಛಾಯೆಯನ್ನೆ ಕೆಳಗೆ ಕೊಟ್ಟಿರುವೆವು -

ಪತ್ರ : (ಲೋಕಾದರ್ಶ ಪುಣ್ಯಪುರುಷರಾದ ಪೂಜ್ಯಪಾದರಲ್ಲಿ,

ಕಳೆದ ವಾರದಲ್ಲಿ ನಮ್ಮ ಕಲಾಶಾಲೆಯಲ್ಲಿ ಶಾಲಾಧಿಕಾರಿಗಳ ಅಧ್ಯಕ್ಷತೆಯ ಮೇಲೆ, ನಮ್ಮ ದೇಶಸೇವಕಾಗ್ರಣಿ ಅಚಲಚಂದ್ರನು ನಡೆಸಿದ ಭಾಷಣದಿಂದ ಈ ನಮ್ಮ ಸಂಘದಲ್ಲಿ ನೂತನಶಕ್ತಿಯು ಉತ್ಪನ್ನವಾಗಿರುವುದೂ, ಈ ಸಂಘಶಕ್ತಿಯನ್ನು ನಾಫಲ್ಯಗೊಳಿಸುವಂತೆ ಮಾಡಬೇಕೆಂಬ ಏರ್ಪಾಡುಗಳು ಅಲ್ಲಲ್ಲಿಗೆ ಚರ್ಕಿಸಲ್ಪಡುತ್ತಿರುವುದು ಸನ್ನಿಧಾನಕ್ಕೆ ನಿಗದಿತ ವಿಷಯವೇ ಆಗಿರುವುದಷ್ಟೆ. ಈ ನಮ್ಮ ಸಂಘದ ನಿಜವಾದ ಉದ್ದೇಶವು ಪ್ರಸಾರಕ್ಕೆ ಬರಬೇಕಾದರೆ, ನಮ್ಮಲ್ಲಿ ಈಚೀಚೆಗೆ ಬಂದಿರುವ ಹಲವು ದುಷ್ಪದ್ದತಿಗಳನ್ನು ಸಕಾರಣವಾಗಿ ವಿಮರ್ಶಿಸಿ, ಖಂಡಿಸಿ, ಅಂತವುಗಳನ್ನು ದೂರಮಾಡುವುದೂ, ನಮ್ಮ ಅನಾದಿಸಿದ್ದವಾದ ಅರ್ಯನೀತಿಯನ್ನು -ಭೂತ-ಭವಿಷತ್ಕಾಲಕ್ಕೂ ನಾಧನಭೂತವಾದ ಆ ಪವಿತ್ರತಮವಾದ ಅರ್ಯ ನೀತಿಯನ್ನು-ಸರ್ವ ಸಾಹಸದಿಂದಲೂ ಆಚರಣೆಗೆ ತರಬೇಕಾದುದೂ ಅತ್ಯಾವಶ್ಯಕವಾಗಿರುವುದು.