ವಿಷಯಕ್ಕೆ ಹೋಗು

ಪುಟ:ಮಾತೃನಂದಿನಿ.djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾತೃನ೦ದಿನಿ 131 ಅದರೆ, ಅ ನೀತಿಸಾರಕ್ಕೆ ಸ್ಥಿರಾಧಾರಪಾತ್ರರಾದ ನಮ್ಮ ಸ್ತ್ರೀ ವರ್ಗವನ್ನು ಸುಸ್ಥಿತಿಗೆ ತಂದಲ್ಲದೆ ಮತ್ತೆ ಯಾವ ಬಗೆಯಿಂದಲೂ ಆಗುವುದಿಲ್ಲ. ಮೇಲೆ ಹೇಳಿರುವ ಕಾರಣಗಳಿಂದ, ದೇಶಮಾತೆಯ ಜೀರ್ಣೋದ್ಧಾರ ಕಾರ್ಯದಲ್ಲಿ ಬದ್ದರಾಗಿ ನಿಲ್ಲಲು ಸಂಕಲ್ಪಿಸುವ ನಾವು, ನಮ್ಮ ಅಚಲ ಚ೦ದ್ರನಾಥನ ಹಿತಸೂಚನೆಯಂತೆ, ನಮ್ಮ ಸ್ತ್ರೀವರ್ಗವೆಲ್ಲವನ್ನು ಜ್ಞಾನವಿ ಶಿಶ್ಟರರನ್ನಾಗಿ ಮಾಡಲು, ಪರಮಪೂಜ್ಯಭಗಿನಿಯಾದ ಮಾತೃನಂದಿನಿಯ ಶಿಷ್ಯವರ್ಗದಲ್ಲಿ ನೇಮಿಸಿ ಆ ಪವಿತ್ರ ಮೂರ್ತಿಯ ದಿವ್ಯಸೂಕ್ತಿಗಳಿಂದ ನಮ್ಮ ಶಿಶ್ಯವರ್ಗವೂ, ಆ ದೇವಿಯ ಮಾರ್ಗಾನುಯಾಯಿನಿಯರಾಗಿ, ದೇಶಮಾತೆಯ ಅಂತಸ್ಥಾಪ ನಿವಾರಣೆಯಲ್ಲಿ ದಕ್ಷರೆನ್ನಿ ಸುವಂತಾಗಬೇಕೆಂಬುದೇ ನಮ್ಮೆಲ್ಲರ ಉತ್ಕಟೇಚ್ಛೆಯಾಗಿದೆ. ಆದುದರಿಂದ, ಈ ನಮ್ಮ ಕರ್ನಾಟಕದ ಪ್ರಪಂಚಕ್ಕೆಲ್ಲಾ ಜ್ಞಾನ ಪ್ರಸಾರವನ್ನು ೦ಟುಮಾಡುವುದರಲ್ಲಿ ಸಮರ್ಥಳಾದ ನಂದಿನೀದೇವಿಯು, ತನ್ನ ನಿಸರ್ಗ ಪ್ರೇಮದಿಂದ ಇತರ ಸೋದರೀವರ್ಗಕ್ಕೆ ತನ್ನ ದಿವ್ಯಸಂದರ್ಶನ ಲಾಭವನ್ನಿತ್ತು, ಅವರ ಮನಸ್ಸು ಪರಿಪಕ್ವವಾಗುವಂತಹ ಹಿತಬೋಧೆನೆಯನ್ನು ಉ೦ಟುಮಾಡುವ ಕಾರ್ಯಭಾರವನ್ನು ವಹಿಸುವಂತೆ ಕಲ್ಪಿಸಬೇಕೆಂದು ನಾವೆಲ್ಲರೂ ನಮ್ಮ ಪರಮಪೂಜ್ಯರಾದ ನಿಮ್ಮಲ್ಲಿ ಸಂಪ್ರಾರ್ಥಿಸುತ್ತಿರುವೆವು. ನಮ್ಮ ಪ್ರಾರ್ಥನೆಯನ್ನು ನಿರಾಕರಿಸದೆ ಮಾನ್ಯಮಾಡಿ, ತಮ್ಮ ಪೋಷಣೆಯಲ್ಲಿರುವ ನಂದಿನಿಯಲ್ಲಿ ನಮ್ಮೀ ಪ್ರಾರ್ಥನೆಯನ್ನರ್ಪಿಸಿ, ಅನುಮೋದಿಸುವಂತೆ ಮಾಡುವ ಭಾರವು ತಮ್ಮನ್ನೇ ಸೇರಿದುದಾಗಿದೆ. ಮತ್ತೇನು ಹೇಳುವ? ಪ್ರಕೃತದಲ್ಲಿ ಇಷ್ಟೆ; ನಾವೆಲ್ಲರೂ ವಿದ್ಯಾನ೦ದ ಪ್ರಭುವಿನ ಮತ್ತು ಅಚಲಚಂದ್ರನಾಥನ ಮಾರ್ಗಾನುಯಾಯಿಗಳಾಗಿರುತ್ತೇವೆ. ನಮ್ಮ ಅತ್ಮವೂ ಶ್ರೀ ಸತ್ಯಾನಂದ ಪರಮಪುಣ್ಯತೀರ್ಥರ ದಿವ್ಯಬೋಧೆಯೊ೦ದರಿಂದಲೇ ಉನ್ನತಿಗೆ ಬರತಕ್ಕುದಾಗಿದೆ. ಇನ್ನು ನಮ್ಮ ಶಕ್ತಿಸ್ವರೂಪಿಣಿಯಾದ ಸ್ತ್ರೀ, ನಂದಿನಿಯ ಮಾದರಿಯನ್ನೇ ಹಿಡಿದು ನಡೆಯಬೇಕಾಗಿದೆ. ಇದನ್ನು ಮಾಡಲು ನಮ್ಮ ಗುರುಹಿರಿಯರೆಲ್ಲರಿಂದಲೂ ಸಮ್ಮತಿಯನ್ನೂ ಹೊಂದಿರುತ್ತವೆ, ಕಾರ್ಯ ಸಿದ್ದಿಗೆ ತಮ್ಮ ಅನುಗ್ರಹವು ಮಾತ್ರವೇ ನಿಂತಿದೆ. ಭಗವತಿಯಿಯೊಲ್ಮೆಯಿ೦ದ ತಾವು ಈ ನಮ್ಮ ಪ್ರಾರ್ಥನೆ.