ಪುಟ:ಮಾತೃನಂದಿನಿ.djvu/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

139 ಸತಿ ಹಿತೈಷಿ ಯನ್ನು ನಡೆಸಿಕೊಡುವ ಪಕ್ಷದಲ್ಲಿ, ತಮ್ಮ ಸೂಚನೆಯಂತೆ ನಡೆಯಲು ನಾವು ಸಿದ್ದರಾಗಿ ಇರುವೆವು, ದಯೆಯಿಟ್ಟು ಇದನ್ನು ನಡೆಸಿಕೊಡ ಬೇಕೆಂದು ಕೋರುವ... ತಮ್ಮ ನಿರಂತರದ ವಿಧೇಯರಾದ ದೇಶಸೇವಕರು, ” ಸ್ವರ್ಣ:-ಪತ್ರವನ್ನು ಅಲ್ಲಿಗೆ ಮುಗಿಸಿ-- 11 ಅಪ್ಪ ! ಕೆಳಗೆ ಕೊಟ್ಟಿ ರುವ ಹೆಸರುಗಳನ್ನೂ ಓದಬೇಕೆ?" ನರೇಶ:- "ಅದೇನೂ ಬೇಕಾಗಿಲ್ಲ.' ಆಚಲನ ಕಡೆಗೆ ತಿರುಗಿ 'ಏನಯ್ಯಾ ! ಐಂದ್ರಜಾಲದಲ್ಲಿ ನೀನು ತುಂಬ ನಿಪುಣನಂತೆ ಕಾಣುತ್ತೀಯೆ?' ಆಡಲ:-ಇನ್ನೂ ಅಷ್ಟರ ನೈಪುಣ್ಯವುಂಟಾಗಿಲ್ಲ. ತಮ್ಮ ಅನುಗ್ರಹ ಇದ್ದರೆ ಅದೂ ಆಗಲಿ, ಅದರಿಂದ ನಷ್ಟವೇನೂ ಇಲ್ಲ. ಈ ಪ್ರಾರ್ಧನಾ ಪತ್ರಕ್ಕೆ ಉತ್ತರವೇನು?' ನರೇಶ:-ಏನೆಂದರೆ, ಸೂತ್ರಧಾರನು ಎಳೆದಂತೆ ನಡೆದಾಡುವುದು ಬೊಂಬೆಗಳ ಕೆಲಸವಷ್ಟೆ. ಇನ್ನು ನಿನ್ನ ಇಷ್ಟವೇ ನಮ್ಮ ಇಷ್ಟವೆಂಬುದನ್ನೂ ಬೇರೆಯಾಗಿ ಹೇಳಬೇಕೆ? ಅಚಲ:-ಕೇವಲ ನನ್ನ ಇಷ್ಟವೊಂದನ್ನೆ ಅಷ್ಟು ಪ್ರಾಮುಖ್ಯ ವಿಚಾರವಾಗಿ ಭಾವಿಸಬೇಕಾಗಿಲ್ಲ. ನಮ್ಮ ಗುರುದೇವರ ಶಾಸನವು ಹೇಗಾಗಿರುವುದೋ ಹಾಗೆ ನಡೆದರೆ ಸಾಕು. ಭಕ್ತಿ-ಸೇವಾ:- "ಅಹುದು. ಅದೇ ನಮ್ಮ ಅಭಿಮತವೂ ಆಗಿದೆ.” ನಗೇಶ:- ಹಾಗೂ ಆಗಬಹುದು.”- ಸ್ವರ್ಣ ಕುಮಾರಿಯನ್ನು ಕುರಿತು-ತಾಯೀ! ಎಲ್ಲಿ, ನಿನ್ನ ಕೈಯಲ್ಲಿ ಮೊದಲು ಕೊಟ್ಟಿದ್ದ ಪತ್ರಗಳನ್ನು ಓದಿಹೇಳು.' ( ಸ್ವರ್ಣಯು ಪತ್ರದಲ್ಲಿದ್ದ ಮತ್ತೊಂದು ಖಂಡಪತ್ರವನ್ನು ತೆಗೆದು ಹೀಗೆ ಓದಿದಳು)-ಮದೀಯಾ೦ಕಲಾಲಿತೆಯಾದ ನಂದಿನಿ! ಭಗವತಿಯು ನಿನಗೆ ಅನುಗ್ರಹಿಸಲಿ. ತಾಯಿ! ನಾನು ನಿನ್ನನ್ನ