139 ಮಾತೃನ೦ದಿಸಿ ಬಿಟ್ಟು ಬಂದುದು ಮೊದಲು, ಇಲ್ಲಿ ದಿನವೂ ಮಾತೃವಂದನೆಯನ್ನು ಮಾಡು ವಾಗಲೆಲ್ಲ, ಮಾತೆಯ ಹತ್ತಿರದಲ್ಲಿಯೇ ನೀನು ಕುಳಿತಿರುವಂತೆ ಕನವರಿಸುತ್ತಿ ರುವೆನು. ಅಷ್ಟೇ ಅಲ್ಲ. ನನ್ನ ವಿರಾಮಕಾಲವನ್ನು ನಿನಗೆ ಕೊಡುತ್ತಿದ್ದ ಹಿತಬೋಧೆಯಿಂದ ಬಹು ಸುಖವಾಗಿ ಕಳೆಯುತ್ತಿದ್ದ ಕಾಲಧನವನ್ನು ಈಗ ಬಹು ದೀರ್ಘವಾಗಿಯೂ, ಒ೦ದೊ೦ದುಬಾರಿ ಕಷ್ಟ ವಾಗಿಯೂ ಕಳೆಯುತ್ತಿ ರುವೆನು. ಇಷ್ಟಾದರೂ ಈವರೆಗೂ ನಿನ್ನನ್ನು ಮಾತ್ರ ಮತ್ತೊಮ್ಮೆಯೂ ನೋಡಲಿಲ್ಲ. ಆದರೆ, ವತ್ಸೆ ! ಯತ್ನ ವಿಲ್ಲದ ವಿಚಾರದಲ್ಲಿ ನಾನು ಮಾಡುವು ದೇನು? ನಿನಗೆ ಬಾಲವ ಮೀರಿತು. ನವೋಡೆಯಾದ ನೀನು, ಇಲ್ಲಿರುವ ದರಿಂದ ನಮ್ಮ ಸಮಾಧಾನಕ್ಕಾಗಲೀ, ಮುಂದಿನ ನಿನ್ನ ಸುಖಸಂಗತಿಗಾಗಲಿ ಬಾಧಕಗಳುಂಟಾಗುವುದು ಸಹಜವೆಂದೆಣಿಸಿ, ನಿನ್ನನ್ನು ಶ್ರೀಮಂತರ ಒಳಿ? ಯಲ್ಲಿ ಬಿಟ್ಟು ಒಂದೆವು. ನಿನ್ನ ಮನಸ್ಸು ವ್ಯಾಕುಲವಡದಿರಬೇಕೆಂದು ದೇಶಯಾತ್ರಾ ವ್ಯಾಜವನ್ನು ಹೂಡಿ, ನಾವು ಹೊರಟು ಬಂದೆವು. ಇದನ್ನು ನೀನೂ ತಿಳಿದೇ ಇರಬಹುದಾದರೂ ಈಗ ಸಕಾಲವಾಗಿರುವುದರಿಂದ ಹೇಳು ತೇನೆ. ನಂದಿನಿ ! ಸೀನೇ ನಮ್ಮ ದೇಶಮಾತೆಗೂ, ಮತ್ತು ನಮ್ಮ ಕುಲ ಕೋಟಿಗೂ ಸದ್ದತಿಯನ್ನು ಕಾಣಿಸುವ ನಂದಿನಿಯು. ಆದುದರಿಂದ ನೀನು ಇಂದಿನ ವರೆಗೂ ಇದ್ದಂತೆ ಮುಂದೆ ಸುಮ್ಮನಿರುವುದು ಕೂಡದು. ನಿನ್ನ ಸೋದರಿಯರ ದುಸ್ಥಿತಿಯನ್ನು ಸಕಾರಣವಾಗಿ ಸಿಮರ್ಶಿಸುವ ಕಾರ್ಯವು ನಿನ್ನವಾಗಿದೆಯೆಂದೂ, ಇದನ್ನು ಹೇಗೂ ನಿರ್ವಹಿಸದೆ ಬಿಡ ವುದು ಮಾತೃನಂದಿನಿಯಾದ ನಿನಗೆ ಸರಿಯಲ್ಲವೆಂದೂ ಹೇಳುವೆನಲ್ಲದೆ, ಹೆಚ್ಚು ಬರೆಯಲಾರೆನು. ಮತ್ತೊಂದು ಮಾತು; ನಿನ್ನ ತಾಯಿ, ಆ ನಿನ್ನ ಜನ್ಮದಾತೆಯು, ತನ್ನ ಅಂತ್ಯಕಾಲದಲ್ಲಿ ಹೇಳಿದ ಮಾತು ನಿನ್ನ ನೆನಪಿನಲ್ಲಿರಲಿ. ಅದನ್ನು ನೆನೆನೆನೆದು, ಆ ತಾಯಿಯ ಆತ್ಮವಿಶ್ವಾಸವನ್ನು ಭಂಗಪಡಿಸದೆ, ಸರ್ವಪ್ರಕಾರರಲ್ಲಿಯೂ ಸಾರ್ಥಕಪಡಿಸುವುದರಲ್ಲಿ ಮಾತ್ರ ಯಾವಾಗಲೂ ಎಚ್ಚರಿಕೆಯುಳ್ಳವಳ hರು. ಭಗವು ನಿನಗೆ ಸಹಾಯಕಳಾಗಿರಲಿ, ಇತಿ, ನಿನ್ನ ವಿಶ್ವಸನೀಯೆಯಾದ ಯೋಗಿನಿ!
ಪುಟ:ಮಾತೃನಂದಿನಿ.djvu/೧೫೩
ಗೋಚರ