(ಸ 148 ಸತೀ ಹಿತೈಷಿಣೀ ವನ್ನು ನಿಷೇಧಿಸಬೇಕೆಂಬುದೂ ನನ್ನ ಉದ್ದೇಶವಾಗಿಲ್ಲ. ಮತ್ತೆ ಅಕ್ಷರ ಜ್ಞಾನವಿಲ್ಲದಮಾತ್ರದಿಂದಲೇ ನಮ್ಮೀ ಜನಾಂಗವು ಅವಿದ್ಯಾವತಿಯರಾಗಿರು ವರೆಂಬುದನ್ನಾಗಲೀ, ಅಂತಹರಿಂದಲೇ, ದೇಶವು ಹೀನಸ್ಥಿತಿಗೆ ಬಂದಿರುವು ದೆಂಬುದನ್ನಾಗಲೀ ನಾನು ನಂಬುವುದಿಲ್ಲ. ಎಂದರೆ, ಈಗಾಗಿರುವ ದೇಶ ಕ್ಷೋಭೆಗೆ ನಮ್ಮ ಸ್ತ್ರೀಜನಾಂಗವೇ ಮೂಲವೆಂದು ಹೇಳುವುದೂ ನನಗೆ ಅಷ್ಟಾಗಿ ಸಮ್ಮತವಿರುವುದಿಲ್ಲ. ಇದಕ್ಕೆ ನಮ್ಮ ದೇಶಮಾತೆಯ ದುರದೃಷ್ಟವೇ ಹೇತುವೋ, ಇಲ್ಲವೆ, ನಮ್ಮಿ ಸ್ತ್ರೀ ಜನಾಂಗದ ದೌರ್ಜನ್ಯವೇ ಕಾರಣವೋ, ಅಲ್ಲದಿದ್ದರೆ, ನಮ್ಮ ಪುರುಷ ಬಂಧುಗಳ ವಿಚಾರಶಕ್ತಿಲೋಪವೇ ಮೂಲವೋ, ಹೇಗೂ ಇದರ ಫಲವು ಅವರ್ಣನೀಯವಾಗಿ ತಿರುಗಿದೆ. ನನ್ನ ಪ್ರಿಯಭಗಿನಿಯರೇ! ಮೇಲೆ ಹೇಳಿರುವ ವಿಚಾರದಿಂದ ನೀವು ಕೋಪಿಸುವುದಾದರೆ, ಇನ್ನು ಮುಂದಿರುವ ವಿಮರ್ಶೆಯನ್ನು ಕೇಳಿ ತಿಳಿವುದು ಹೇಗೆ? ಕೋಪವನ್ನು ಮಾತ್ರ ದೂರದಲ್ಲಿ ಕಟ್ಟಿಟ್ಟು, ಈ ಸ್ಥಳವು, ನಮ್ಮ ಸಾರಾಸಾರ ವಿಚಾರಕ್ಕೆ ಮುಖ್ಯಸ್ಥಾನವೆಂದು ತಿಳಿದು, ಅದ್ಯಂತವಾಗಿ ಸಂಪೂರ್ಣ ಶ್ರದ್ಧೆಯಿಂದ ವಿಷಯವನ್ನು ಸಂಗ್ರಹಿಸಿ, ಮುಂದಿನ ನಮ್ಮ ಕರ್ತವ್ಯವನ್ನು ನಿರ್ಧರಿಸಿಕೊಳ್ಳು ವುದನ್ನು ಮಾತ್ರ ನಿರಾಕರಿಸಬಾರದೆಂದು ಕೋರುವೆನು. ಏಕೆಂದರೆ, ಈ ನಮ್ಮ ದೇಶಮಾತೆಯ ಅಂತಸ್ತಾಪವನ್ನು ಹೋಗಲಾಡಿಸುವ ಕೆಲಸವು ನಮ್ಮ ಮೇಲೆಯೇ ಬಿದ್ದ ಹೊರೆಯಾಗಿರುವುದರಿಂದ, ನಮ್ಮವರಲ್ಲಿ ಕಾರ್ಯಾ ಕಾರ್ಯವಿವೇಚನೆಯು ಬಹು ಚೆನ್ನಾಗಿರಬೇಕು. ಹೇಗೆಂದರೆ,ಯಾವುದೇ ಒಂದು ದೇಶದ ಉನ್ನತಿಗಾಗಲೀ ಅವನತಿಗಾಗಲೀ ಅಲ್ಲಿಯ ಸ್ತ್ರೀಜನಾಂಗದ ಐಕಮತ್ಯವೂ, ಅದನ್ನೇ ಅನುಸರಿಸಿರುವ ಪ್ರೇಮ, ಧರ್ಮಶ್ರದ್ಧೆ, ಭೂತದಯೆ, ನಿರಂತರೋದ್ಯಮ ಶೀಲತೆಗಳೇ ಮುಖ್ಯವಾಗಿರುವುವೆಂಬುದನ್ನು ನಾವು ಭದ್ರವಾಗಿಡಬೇಕಾಗಿರುತ್ತದೆ. ಐಕಮತ್ಯವೆಂಬುದು ಈಗಿನ ನಮ್ಮ ಸ್ತ್ರೀಯರಲ್ಲಿ ಎಷ್ಟು ಮಟ್ಟಿಗೆ ಇರ ಬಹುದೆಂಬುದನ್ನು ವಿಚಾರಮಾಡಿದರೆ, ಅದು ಎಲ್ಲಿಯೂ ಹೇಗೂ ಸ್ಪಷ್ಟ ವಾಗಿ ಕಾಣುವುದೇ ಇಲ್ಲ. ಹಾಗಾದುದೇಕೆ? ಒಡವರನ್ನು ಹಣಗಾರರೂ ಬಲಹೀನರನ್ನು ಬಲ್ಲಿದರೂ, ಅಂಗಹೀನರನ್ನು ಸರ್ವಾಂಗಪರಿವುಷ್ಟರೂ,
ಪುಟ:ಮಾತೃನಂದಿನಿ.djvu/೧೬೨
ಗೋಚರ