ಪುಟ:ಮಾತೃನಂದಿನಿ.djvu/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸುವ ಅವಶ್ಯಕತೆಯಿಲ್ಲ

ಮಾತೃನ೦ ದಿ ನಿ 149 ದೀನಾನಾಥರನ್ನು ಧನಮರಾಂಧರೂ, ಹೀಗೆ ತಮಗೆ ಕಡಿಮೆಯಾಗಿರುವವರನ್ನು ತಮ್ಮ ಹೆಚ್ಚಿಗೆಯಿಂದ ಹೀಯಾಳಿಸಿ, ಹುಚ್ಚಾಡಿಸುತ್ತಿರುವುದೇಕೆ? ಇದೇ ಪದ್ಧತಿಯೇ ನಮಗೆ ಮೊದಲಿಂದಲೂ ನಡೆದುಬಂದಿರುವುದೇನು ? ಅಥವಾ ನಮ್ಮ ಪೂರ್ವಜರು ಇಂತಹ ದುರಭಿಮಾನ-ಮಾತ್ಸರ್ಯ ಮತ್ತು ದ್ವೇಷಸಾಧನೆಗಳನ್ನೇ ಪರಮಪುರುಷಾರ್ಥ ವಿಚಾರಗಳೆಂದು ಭಾವಿಸುತಿದ್ದರೋ? ಇಲ್ಲ. ಇಂತಹ ದುರ್ವಿಚಾರವು ಆರ್ಯಕುಲಮಂಡನರಾದ ನಮ್ಮ ಪೂರ್ವಜರಲ್ಲಿ, ಎಂದೂ, ಹೇಗೂ ಕಂಡುಬರುತ್ತಿರಲಿಲ್ಲ. ಅವರ ಮನೋಧರ್ಮವು ಈ ಕಾಲದವರಂತೆ ಕ್ಷಣಿಕಭ್ರಾಂತಿಸುಖಕ್ಕೆ ಬೆರೆದು-ಬೀಗಿ, ಹಾಳಾಗುವಂತಿರಲಿಲ್ಲ. ಎಂದರೆ, ಅವರು ಮೂರ್ಖರಾಗಲೀ, ಅವಿದ್ಯಾವತಿ ಯರಾದ ಮೂಢ ವ್ಯಕ್ತಿಗಳಾಗಲೀ ಆಗಿರಲಿಲ್ಲ. ಹಾಗಿದ್ದರೂ ಆ ನಮ್ಮ ಪೂರ್ವಜರು, ದೀನಾನಾಥ ವರ್ಗವನ್ನು ಈಗಿನ ನಮ್ಮವರಂತೆ ನಿಷ್ಕರಣೆ ಯಿಂದ ನಿಷ್ಠುರಕ್ಕೀಮಾಡಿ, ಅವರ ಕಷ್ಟ-ಕ್ಲೇಶಗಳನ್ನು ನೋಡಿ, ಇಪ್ಪಾದರೂ ಕನಿಕರವೆಂಬುದಿಲ್ಲದೆ ನಲಿದಾಡುವಂತಹ ಮೂರ್ಖರಾಗಿರಲಿಲ್ಲ. ಆ ನಮ್ಮ ಪರಮಪೂಜ್ಯರು, ಧರ್ಮಪ್ರಸಾರಕ್ಕೆ ನಾರೀಗಣವೇ ಆಧಾರಸ್ತಂಭವೆಂಬುದನ್ನು ಚೆನ್ನಾಗಿ ತಿಳಿದಿದ್ದುದರಿಂದ, ತಮ್ಮ ತಲೆಯ ಮೇಲೆ ಬಿದ್ದಿರುವ ದೊಡ್ಡ ಹೊರೆಯನ್ನು ಬಹು ಜಾಗರೂಕತೆಯಿಂದ ತೃಪ್ತಿಕರವಾಗಿ ನಿರ್ವಹಿಸುತ್ತಿದ್ದರು. ತಮ್ಮ ಪುರುಷವರ್ಗದವರಿಂದ ತಮ್ಮ ಪಾಲಿಗೆ ಒಪ್ಪಿಸಲ್ಪಟ್ಟ ಧರ್ಮಕ್ರಿಯಾಕಲಾಪಗಳಲ್ಲಿ ಅವರು, ತಮ್ಮ ಪತಿರಾಜರು ನಿರಾತಂಕವಾಗಿ ನಿತ್ಯನೈಮಿತ್ತಿಕ ವೃತ್ತಿಯಲ್ಲಿ ನಿರತರಾಗಿರುವಂತೆ,ನಿರ್ವಂಚನೆಯಿಂದ ಅವರನ್ನು ಸೇವಿಸುತ್ತಲೂ, ತಮ್ಮ ಇತಿಕರ್ತವ್ಯವನ್ನು ಭದ್ರ ರೀತ್ಯಾ ನಡೆಸುತ್ತಲೂ ಇದ್ದರು. ಅವರ 'ಮನೋಯೋಗಶಕ್ತಿಯ ಪ್ರಭಾವದಿಂದಲೇ ಆ ಕಾಲದಲ್ಲಿ ಪುರುಷವರ್ಗವು ಸತೀವರ್ಗವನ್ನು ದೈವಿಕ ಪ್ರೇಮ ಗೌರವದಿಂದಲೂ, ಸಾಮರಸ್ಯ ಭಾವನೆಯಿಂದಲೂ ಸನ್ಮಾನಿಸುತ್ತಿದ್ದರು. ಅವರ, ಮನೋ ದಾರ್ಢ್ಯಬಲದಿಂದಲೇ ಪುರುಷರು ಅವರಲ್ಲಿ ಕೇವಲ ಪೂಜ್ಯಭಾವವನ್ನಿಟ್ಟು, ತಮ್ಮ ಮನಸ್ಸನ್ನು ವಿಕಾರರೋಗಕ್ಕೆ ಬಲಿಕೊಡದೆ, ಕಾಯ-ಮನೋವಾಕ್ಕುಗಳಿಂದಲೂ ಪರಿಶುಧ್ದರಾಗಿಯೇ ಇರುತ್ತಿದ್ದರು. ಈ ಕಾಲದ ನಾಗರಿ ಕರೆಂಬವರಲ್ಲಿಯೂ ಹಾಗಿರುವುದೋ?