ಪುಟ:ಮಾತೃನಂದಿನಿ.djvu/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

168 ಸತೀಹಿತೈಷಿಣಿ

ಪ್ರಕಾರದಿಂದಲೂ, ನಡೆದುಕೊಳ್ಳುವಂತೆ ಮಾಡಬೇಕಾದುದೇ ಸಹಚಾರಿಣಿಯರಾದ ಸತಿಯರ ಕೆಲಸವು.ತಾಯ್ತಂದೆಗಳ ಮನಸ್ಸಮಾಧಾನವಾಗಬೇಕಾದರೆ, ದ್ವೇಷಾಸೂಯಾದಿ ದುರ್ಗುಣಗಳೂ, ಉದಾಸೀನ-ಅಭಿಮಾನ ಮೊದಲಾದ ತಾಮಸವ್ಯಾಪಾರವೂ ನಮ್ಮಲ್ಲಿರಬಾರದು. ಒಡಹುಟ್ಟಿದವರೆಲ್ಲರಲ್ಲಿಯೂ ಆಪ್ತಭಾವವನ್ನಿರಿಸಿ, ಎಲ್ಲರೂ ಅನ್ಯೋನ್ಯಭಾವದಲ್ಲಿ ಬದ್ಧರಾಗಿ, ಸ್ವಕರ್ತವ್ಯ ನಿಷೆ- ಸ್ವಾವಲಂಬನಗಳಿಂದ ನಿರಲಸರಾಗಿ, ನಿರಂತರೋದ್ಯೋಗಶೀಲರೆನ್ನಿಸಿ ನಡೆಯುತ್ತಿರಬೇಕು. ಹೀಗೆ ಮಾಡಿದಲ್ಲದೆ ನಮ್ಮ ಪುತ್ರಕರ್ತವ್ಯವು ನಮ್ಮಿಂದ ಸರಿಯಾಗಿ ಮಾಡಲ್ಪಟ್ಟಿತೆಂದು ಹೇಳುವಂತಿಲ್ಲ.

ಹಾಗಿದ್ದರೆ,-"ನಾವು ಮಾತೃಸೇವೆಯಲ್ಲಿ ಎಷ್ಟು ಮಟ್ಟಿಗೆ ಕೃತಕೃತ್ಯರಾಗಿರುವೆವು? ನಮ್ಮಿಂದ ನಮ್ಮ ದೇಶಮಾತೆಗಾಗಲೀ, ದೇಶಮಾತೆಯ ಪ್ರತಿ ನಿಧಿಸ್ವರೂಪಿಣಿಯಾದ ಜನ್ಮದಾತೆಗಾಗಲೀ, ಎಷ್ಟು ಮಟ್ಟಿನ ಮೇಲ್ಮೆಯುಂಟು ಮಾಡಲ್ಪಟ್ಟಿರುವುದು? ನಮ್ಮಲ್ಲಿ ಬಂಧು ಪ್ರೇಮವು ಎಷ್ಟು ಮಟ್ಟಿಗೆ ನಿಂತಿರುವುದು ? ನಮ್ಮನಮ್ಮಲ್ಲಿ ಐಕಮತ್ಯ,ಸ್ವಾತಂತ್ರ್ಯ, ಸಮತಾಭಾವ, ಸತ್ಯಸಂಧತೆಗಳು ಎಷ್ಟೆಷ್ಟು ಪ್ರಚಾರಕ್ಕೆ ಬಂದಿರುವುವು?" ಎಂಬವನ್ನು ಕುರಿತು. ನಮ್ಮ ನಮ್ಮಲ್ಲಿಯೇ ವಿಚಾರಮಾಡಿಕೊಳ್ಳುವುದೂ, ವಿಚಾರಾಂತ್ಯದಲ್ಲಿ ತೋರಿಬರ ಬಹುದಾದ ನ್ಯೂನತೆಗಳನ್ನು ಕ್ರಮಪಡಿಸಿಕೊಂಡು ಮುಂದೆ ಜಾಗರೂಕರಾಗಿರುವುದೂ ಅವಶ್ಯಕವಲ್ಲವೆ? (ಒಪ್ಪಿದೆವು; ಒಪ್ಪಿದೆವು.) 

ಈಗ ನೋಡಿರಿ,-ನನ್ನ ಪ್ರಿಯಬಾಂಧವರೇ!

ನಾವೆಲ್ಲರೂ ಏಕಮಾತೃಸಂತಾನರು; ಏಕದೈವೋಪಾಸಕರು; ನಮ್ಮೆಲ್ಲ ರಿಗೂ ಒಂದೇ ಒಂದಾಗಿರುವ ಸನಾತನ ಅಥವಾ ಆರ್ಯ ಧರ್ಮವೇ ಅನು

ಷೇಯವು; ಹೀಗಿದ್ದರೂ ನಮ್ಮಲ್ಲಿ ಮಾತ್ರ ಇನ್ನೂ ಬಂಧುಪ್ರೇಮವು ಸರ್ವತ್ರ ಪ್ರಸಾರವಾಗುತ್ತಿಲ್ಲ. ನಮ್ಮಲ್ಲಿ ಪರಸ್ಪರ ಸೌಜನ್ಯಭಾವಗಳು ಅಷ್ಟಾಗಿ ಕಾಣುತ್ತಿಲ್ಲ. ಅಲ್ಲದೆ, ನಮ್ಮಲ್ಲಿ ಒಬ್ಬರನ್ನೊಬ್ಬರು ದೂರುವುದಾಗಲೀ, ಒಬ್ಬರಲ್ಲೊಬ್ಬರು ಹೋರುವುದಾಗಲಿ ಬಿಟ್ಟಿಲ್ಲ. ಒಬ್ಬರ ವಸ್ತುವನ್ನು ಮತ್ತೊಬ್ಬರು ಅಪಹರಿಸುವುದೂ, ತಮ್ಮ ಮನಸ್ತೃಪ್ತಿಗೆಂದು ಮತ್ತೊಬ್ಬರ ಮೇಲೆ ಬೀಳುವುದೂ, ಅವರ ಪ್ರಾಣ-ಮಾನ-ಧನಗಳನ್ನು ಅಪಹರಿಸುವುದೂ, ಇವೇ ಮೊದಲಾದ ದುರಾಚಾರಗಳನ್ನು ನಮ್ಮವರು ನಿಶ್ಶೇಷವಾಗಿ