ಪುಟ:ಮಾತೃನಂದಿನಿ.djvu/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಮಾತೃನ೦ದಿನಿ 169 ಬಿಟ್ಟಿರುವಂತೆ ಕಾಣುತ್ತಿಲ್ಲ. ಲೋಕಸ್ಥಿತಿಯು ಹೀಗಿರುವಾಗ ಇನ್ನು, ಮಾತೃಭಕ್ತಿ, ದೇಶವಾತ್ಸಲ್ಯ, ಭಾಷಾಭಿಮಾನ, ಬಂಧು ಪ್ರೇಮಗಳ ವಿಚಾ ರಕ್ಕೆ ಅವಕಾಶವೆಲ್ಲಿರುವುದು? ಮತ್ತು ನಾವದನ್ನು ಆಚರಣೆಗೆ ತರಲು ಹೇಗೆ ಸಮರ್ಥರಾಗುವೆವು?- ಇತ್ತ ನೋಡಿರಿ; ಬಾಂಧವರೇ!

  ಕೋಟ್ಯನುಕೋಟಿ ಸಂಖ್ಯಾಕರಾದ ನಮ್ಮೆಲ್ಲರಿಗೂ ತಾಯಿಯಾಗಿ ಆನಂತ ಸಂತಾನವುಳ್ಳ, ವೀರಪ್ರಸವಿನಿಯೆಂಬ ಪ್ರಖ್ಯಾತಿಯನ್ನು ಪಡೆದಿದ್ದ ನಮ್ಮ ತಾಯಿ, ಜನ್ಮಭೂಮಿ. ಈ ನಮ್ಮ ದೇಶಮಾತೆ, ಈಗ ಹೊಂದಿರುವ ಕ್ಲಿಷ್ಟಭಾವವನ್ನು ನೋಡಿರಿ, ಇವಳ ಈ ಪರಿಸ್ಥಿತಿಗೆ ಕಾರಣರಾರಿರಬೇಕೆಂ ಬುದನ್ನು ಮನನಮಾಡಿಕೊಳ್ಳಿರಿ. ಆಗಲಾದರೂ ನಿಮಗೆ ಇದರ ಮರ್ಮವು ತಿಳಿದು, ಪರಿತಾಪಹುಟ್ಟಿ, ಇವಳ ಮನಸ್ಸಮಾಧಾನಕ್ಕಾಗಿ ನಿಮಗೆ ನೀವೇ ದೀಕ್ಷೆಯನ್ನು ವಹಿಸುವವರಾಗುವಿರಿ! (ಶೋಚನೀಯ ಸ್ಥಿತಿಯು ನಿಜ. ವಿಚಾರಶಕ್ತಿಹೀನರಾದೆವು. ಉಪದೇಶವಾಗಬೇಕು.)

ಪ್ರಿಯಭಾಂಧವರೇ!

  ಮಾತೃಜೀರ್ಣೋದ್ಧಾರದಲ್ಲಿ ಒದ್ಧಾದರಾಗಿ ನಿಂತು, ಉದ್ಯೋಗವನ್ನು ಕೈಕೊಳ್ಳಬೇಕೆಂದು ಕೇಳಿಕೊಳ್ಳುತ್ತಿರುವುದು ಮಾತ್ರವಲ್ಲದೆ, ಬಾಹುಬಲ, ಬುದ್ಧಿಶಕ್ತಿ, ವಿದ್ಯಾಧಿಕ್ಯಗಳಿಂದ ಪ್ರಬುದ್ಧಮಾನರಾಗುತ್ತಿರುವ ನಿಮಗೆ ಉಪದೇಶಮಾಡಲು ನಾನು ಶಕ್ತನಲ್ಲ. ಆದರೂ ಇಷ್ಟನ್ನು ಹೇಳಬಲ್ಲೆನು.-
  ಹೆತ್ತ ತಾಯಿಗೆ ಹೆಣ್ಣು ಮಕ್ಕಳಲ್ಲಿ ಅತಿಶಯ ಪ್ರೇಮವಿರುವುದು ಸಹಜವು. ಏಕೆಂದರೆ, ಹುಟ್ಟಿದ ಹೆಣ್ಣು, ಬೆಳೆದು ಬುದ್ಧಿ ಕಲಿತರೆ, ಬ್ಯಾಲದಿಂದಲೂ ತಾಯಿಯೊಡನಾಡಿ, ಕಾಡಿ, ಬೇಡಿ, ನಲಿದಾಡಿ, ತಾಯಿಯ ಕೆಲಸಗಳಲ್ಲಿ ನೆರವಾಗಿ, ಎಷ್ಟೋ ಬಗೆಯಿಂದ ಅವಳ ಮನಸ್ಸಿಗೆ ಉತ್ಸಾಹವನ್ನು ಹೆಚ್ಚಿಸುವಳು. ಆ ಬಳಿಕ ದೊಡ್ಡವಳಾದರೂ ತನ್ನ ತಾಯಿಯಲ್ಲಿ 'ಹೆಂಗರುಳು ಮೃದು'ವೆಂಬ ನಾಣ್ನುಡಿಗನುಸಾರವಾಗಿ ತನ್ನ ಸರ್ವಾಂತಃಕರಣದಿಂದಲೂ ವಿಧೇಯಳಾಗಿರುವಳು. ಅಲ್ಲದೆ, ತನ್ನ ತಾಯಿಯಂತೆ ತಾನು ಕೂಡ ಪ್ರೇಮಮಯಿಯಾದ ಮಾತೆಯೆನ್ನಿಸಲು, ಮತ್ತು ತನ್ನ ತಾಯಿಯಂತೆ ಸತೀಮಣಿಯಾಗಿ ಪ್ರಕಾಶಿಸಲು ಸಂಕಲ್ಪಿಸಿ, ಪತಿರಾಜನನ್ನೂ, ಆತನ ಗುರು.