ಪುಟ:ಮಾತೃನಂದಿನಿ.djvu/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

170 ಸತೀಹಿತೈಷಿಣೀ

ಬಂಧುವರ್ಗವನ್ನೂ ಅಕೃತ್ರಿಮ ಭಕ್ತಿ-ವಿಶ್ವಾಸಗಳಿಂದ ಸೇವಿಸುತ್ತೆ, ಆತ್ಮ ಕ್ಕೂ ಹಿತಬಂಧುಮಿತ್ರರಿಗೂ ಆಹ್ಲಾದದಾಯಿನಿಯಾಗಿ ಬಗೆಗೊಳ್ಳವಳು. ಹೀಗಾಗುವುದರಿಂದ ತಾಯಿಗೆ, ತನ್ನ ಮಗಳು ತನಗೆ ಸತ್ಕೀರ್ತಿಯನ್ನೂ, ಕುಲಕ್ಕೆ ಗೌರವವನ್ನೂ, ಸಮಾಜಕ್ಕೆ ಕಾಂತಿಯನ್ನೂ ಹೆಚ್ಚಿಸಿದಳೆಂಬ ಸಂತೋಷವುಂಟಾಗುವುದು. ಇಂತಹ ಸಂತೋಷವುಂಟಾಗಬೇಕೆಂದೇ ತಾಯಿಯರು, ತಮ್ಮ ಹೆಣ್ಣುಮಕ್ಕಳಲ್ಲಿ ಹೆಚ್ಚು ಅಕ್ಕರೆಗೊಳ್ಳುತ್ತಿರುವರು. ಸಿದರ್ಶನಕ್ಕೆಂದರೆ, ಲೋಕಮಾನ್ಯ ಸಾವಿತ್ರೀದೇವಿಯ ಚರಿತೆಯೇ ಸಾಕು.

 ಆದರೆ, ಈಗಿನ ನಮ್ಮವರ ಪರಿಸ್ಥಿತಿಯು ಹೇಗೆ ತಿರುಗಿದೆ, ನೋಡಿರಿ! ದೇಶಮಾತೆಯ ಸಮಸ್ತ ಕಲ್ಯಾಣಕ್ಕೂ ಕಾರಣರಾಗಿರುವ ಸ್ತ್ರೀಯರನ್ನು ನಾವು ಈಗ ಕೇವಲ ನಿಕೃಷ್ಟ ಭಾವದಿಂದ ಕಾಣುತ್ತೇವೆ. ಅವರ ಪರಮೋದ್ದೇಶವನ್ನು ವಿಮರ್ಶಿಸಲೊಲ್ಲದೆ, ವಿಕಲ್ಪಾರ್ಥದಿಂದ ಅಲ್ಲಗಳೆದು, ಅವರನ್ನು ಮೂಲೆಗೆ ಒತ್ತರಿಸಿ, ನಿಷ್ಠುರಪಡಿಸಿತ್ತಿದ್ದೇವೆ. ಅವರ ಸೇವಾಕಾರ್ಯಗಳಿಗೆ ತಕ್ಕಂತೆ ಸಹಾನುಭೂತಿಯನ್ನು ತೋರಿಸದೆ, ಅನೇಕ ನಿರ್ಬಂಧಗಳನ್ನು ಮುಂದಿಟ್ಟು, ಹಲವು ಬಗೆಯಿಂದ ಅವರ ಮನಸ್ಸನ್ನು ನೋಯಿಸಿ, ಅವರಿಗೆ, ವಿದ್ಯಾವಿಚಾರ-ಶಾಸ್ತ್ರಾಭ್ಯಾಸಗಳನ್ನು ಕಲಿಸುವ ಮಾತಿಗೆ ಪ್ರತಿಯಾಗಿ ಸ್ತ್ರೀಸಾಮಾನ್ಯಕ್ಕೆ ಸಹಜವಾಗಿರುವ ಕೌಶಲ್ಯ(ಬುದ್ಧಿಶಕ್ತಿ)ವನ್ನೂ ಕುಂದಿಸಿ ಕೆಡಿಸುತ್ತಿದ್ದೇವೆ. ಅಂತವರು ಪ್ರಜ್ಞಾಪ್ರಸಾರಕ್ಕವಕಾಶವನ್ನು ಹೊಂದಲರಿಯದೆ, ಬಂಧನಕ್ಲೇಶದಲ್ಲಿ ಸಿಕ್ಕಿ, ಹಲವು ವಿಘ್ನಗಳಿಗೆ ಪಕ್ಕಾಗಿ, ತಮ್ಮ ಪವಿತ್ರಹೃದಯದ ಕೋಮಲತೆಯು ಕುಗ್ಗಿ ಹೋಗುವಂತೆ ಕ್ಲೇಶ-ಅಸೂಯೆ- ಆತುರ-ಅಭಿಮಾನ-ಕ್ರೋಧ-ಸಂಶಯಗಳಿಗೆ ತುತ್ತಾಗಿ ಹೋಗುತ್ತಿರುವಂತೆ ಮಾಡಿ, ನಲಿಯುತ್ತಿರುತ್ತೇವೆ. ಇದಕ್ಕೂ ಹೆಚ್ಚಿನ ದುರ್ಗುಣಗಳುಂಟೇ? ಇಲ್ಲ; ಎಂದಿಗೂ ಇಲ್ಲ.

ಮತ್ತೂ ಹೇಳುವೆನು ಕೇಳಿರಿ!

 ಸ್ತ್ರೀಜನಾಂಗವನ್ನು ಯಾರು ದೂಷಿಸುವರೋ, ಅವರು ಆತ್ಮದ್ರೋಹ ಪಾತಕಕ್ಕೆ ಮೊದಲು ಗುರಿಯಾಗತಕ್ಕವರು. ಏಕೆಂದರೆ, ನಮ್ಮನ್ನು ಹೆತ್ತ ವಳು ಹೆಂಗಸು; ಹೊತ್ತುಹೊತ್ತಿಗೆ ಅನ್ನನೀರನ್ನಿತ್ತು ಆಡಿಸಿ ಪಾಲಿಸಿದವಳು ಹೆಂಗಸು; ಈಗ ನಮ್ಮನ್ನು ಹೊತ್ತಿರುವವಳಾದರೂ ಹೆಂಗಸೇ ಅಲ್ಲದೆ ಗಂಡ