ಪುಟ:ಮಾತೃನಂದಿನಿ.djvu/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾತೃನ೦ದಿನಿ ೧೭೩

ದಲ್ಲಿ ಹಾಗೂ ಹೀಗೂ ಇದ್ದರೂ, ವಯಸ್ಸು ಕಳೆದಂತೆಲ್ಲಾ ವಿಷಯಭ್ರಾಂತಿ, ಪಕ್ಷಪಾತ, ಕಾಠಿಣ್ಯ, ಕೃಪಣತೆಗಳನ್ನು ಅಭ್ಯಸಿಸಿ ಮುಪ್ಪಿನಮರುಳಾತಟವಾಡುತ್ತಿರುವರು. ಇಂತವರು ತಮ್ಮ ಮುಂದಿನ ಮಕ್ಕಳನ್ನು ಮ೦ದಿಗಳಾಗುವಂತೆ ಮಾಡುವ ಯೋಚನೆಯನ್ನು ಒಂದು ಕಡೆಗಿಟ್ಟು, ತಮ್ಮ ಮುಪ್ಪಿನಲ್ಲಿ ತಮಗುಂಟಾದ ಮರುಳ್ತವನ್ನೇ ಮಕ್ಕಳಿಗೆ ಕಲಿಸುವುದೂ, ಇಲ್ಲವೆ, ತಮ್ಮ ಚಾಪಲ್ಯರೋಗವನ್ನು ನೋಡಿ ಸಹಿಸಲಾರದ ಮಕ್ಕಳನ್ನೇ ತಾವು ಕಳೆದುಕೊಳ್ಳುವುದೂ ಹೀಗೆ ಎರಡು ಬಗೆಯಿಂದಲೂ ದೇಶಕ್ಕೆ ಮತ್ತು  ಸಮಾಜಕ್ಕೆಹಾನಿಯನ್ನುಂಟು ಮಾಡುವವರಾಗಿರುತ್ತಾರೆಂಬುದನ್ನು ಬಹು ಜನರು ನೋಡಿಯೇ ಇರಬಹುದು. ಆದರೆ ಅಧಿಕಾರವು ಹೆಚ್ಚಿದಷ್ಟೂ ಉತ್ತರವಾದಿತ್ವವೂ ಹೆಚ್ಚಿ, ನ್ಯಾಯಾನ್ಯಾಯಗಳ ಸುಕ್ಷ್ಮವನ್ನರಿತು, ವಿಹಿತಮಾರ್ಗದಲ್ಲಿ ನಡೆಯುವುದಲ್ಲದೆ, ಮತ್ತು ವಿಹಿತಮಾರ್ಗದಿಂದ ದೇಶಹಿತಕಾರ್ಯದಲ್ಲಿ ನಿರತವ್ರತರಾಗಿರುವವರನ್ನು ಅಧಿಕವಾಗಿ ಪ್ರೋತ್ಸಾಹಿಸಿ, ಅಂತವರ ಸತ್ಕಾರ್ಯದಲ್ಲಿ ತಮ್ಮ ಶಕ್ತಿಯಿದ್ದಷ್ಟು ಮಟ್ಟಿಗೂ ಅನುಕೂಲಗಳನ್ನು ಕಲ್ಪಿಸುವ ವಿದ್ವನ್ಮಣಿಗಳಲ್ಲಿ ಕಲೆಕ್ಟರ್ ಜ್ಞಾನಸಾರಚಕ್ರವರ್ತಿಯೂ, ಕಾಲೇಜ್ ಸುಪರಿಂಟೆಂಡೆಂಟ್ ವಿದ್ಯಾನಂದ ಬಾಬುವೂ ಪ್ರಧಾನಪುರುಷರಾಗಿರುತ್ತಾರೆ. ಇವರ ಕರ್ತವ್ಯ ದಕ್ಷತೆಯಿಂದ, ಇವರು ಕಲ್ಪಿಸಿಕೊಟ್ಟ ಅನುಕೂಲಗಳಿಂದ ದೇಶಮಾತೆಯ ಸತ್ಪುತ್ರನಾದ -ವಿದ್ಯಾರ್ಥಿಕುಲಮಂಡನನಾದ-ಸಮಾಜದ ಶಾಂತಿಸಂಸ್ಥಾಪನೆಯಲ್ಲಿ ದಕ್ಷನಾದ-ಅಚಲಚ೦ದ್ರನು ತನ್ನ ಸಹಾಧ್ಯಾಯಿಗಳಲ್ಲಿ, ಈ ಕಾಲದ ನವನಾಗರಿಕರೆಂಬ ಹೆಮ್ಮೆಗೊಂಡು, ಸೊಗಸು-ಶೃಂಗಾರಗಳಲ್ಲಿಯೇ ನಿರತರಾಗಿದ್ದ ಇತರ ತರುಣರನ್ನೂ ತನ್ನಂತೆಯೇ ದೇಶಮಾತೃ ಸೇವೆಯಲ್ಲಿ, ಸಮಾಜದ ಕಲ್ಯಾಣ ಕಾರ್ಯದಲ್ಲಿ ಬದ್ಧರನ್ನಾಗಿ ಮಾಡಿಕೊಳ್ಳುವವನಾದನು. ಹಾಗಿಲ್ಲದಿದ್ದರೆ,ನಗೇಶರಾಯನ ಮೇಲೆ ಹೊರೆಯಿಸಲ್ಪಟ್ಟ ಆರೋಪ, ಬಹಿಷ್ಕಾರಗಳಿಂದ ಶಿವನಗರಕ್ಕೆ ಉಂಟಾಗಿದ್ದ ಆಗ್ರಹವು, ಇಷ್ಟು ಬೇಗ ಶಾಂತಿಹೊಂದುತಿದ್ದಿತೆಂದಾಗಲೀ ಮುಂದಾಲೋ ಚನೆಯಿಲ್ಲದೆ ತಮ್ಮ ಪೂರ್ವದ ಅಕಾರ್ಯಗಳು ಹೊರಬೀಳುವುದೆಂಬ ವಿಚಾರವೂ ಇಲ್ಲದೆ, ಸ್ವಕಾರ್ಯಸಾಧನಗಾಗಿ ನಗೇಶರಾಯನ ಮತ್ತು ಆತನ ಅನುಗಾಮಿಗಳ ಪರಿವಾರದಲ್ಲಿ ಅಪದವನ್ನು ತಂದೊಡ್ಡುತ್ತಿದ್ದ ಪ೦ತರು.