174 ಸತಿ ಹಿತೈಷಿಣಿ ಭಟ್ಟಾಚಾರ್ಯರ ಆಕ್ರಮಗಳಿಗೆ ಪ್ರಾಯಶ್ಚಿತ್ತವಾಗುತ್ತಿದ್ದಿತೆಂದಾಗಲೀ ಹೇಳಲಾರೆನು. ಕಲೆಕ್ಟರರ ನ್ಯಾತ್ಮಿಕ ಪಕ್ಷಪಾತವೂ, ವಿದ್ಯಾನಂದ ಬಾಬುವಿನ ಜನ ಪ್ರನಾರದ ಪರಮೋದ್ದೆಶವೂ, ಶರಶ್ಚಂದ್ರನಾಥನ ಸಮತಾಭಾವವೂ ಸಹಕ ರಿಸದಿದ್ದ ಪಕ್ಷದಲ್ಲಿ ನರೇಶರಾಯನು ಎಷ್ಟೆ ಲೋಕೈಕವೀರನೂ, ದಕ್ಷನೂ. ಧೈರ್ಯಶಾಲಿಯೂ ಆಗಿದ್ದ ಮಾತ್ರದಲ್ಲಿಯೂ, ಈತನೊಬ್ಬನಿಂದಲೇ ಇಷ್ಟು ಕಾರ್ಯಗಳೂ ನೆರೆವೇರುತ್ತಿರಲಿಲ್ಲ. ಅಲ್ಲದೆ, ಅವರ ಸಹಾಯವಿಲ್ಲದಿದ್ದರೆ ಈತನು ನಂದಿನಿಯ ಪರವಾಗಿ ಉಂಟಾದ ಅಷ್ಟರ ಕಷ್ಟ-ನಷ್ಟ -ನಿಷ್ಟರ ಗಳನ್ನೂ ತಡೆದು ನಂದಿನಿಯನ್ನು ಪರಿತ್ಯಾಗಮಾಡಬೇಕೆಂದವರ ಬಾಯನ್ನು ಕಟ್ಟಿ, ನಾಲದುದಕ್ಕೆ ತನ್ನ ಮಗಳನ್ನು ಕೂಡ, ನಂದಿನಿಯಂತೆಯೇ ಬೆಳೆಯಿಸಿ, ದುರಾಶಾ ಪಿಶಾಚಗ್ರರನ್ನು ಹಣ್ಣಿಗೆ ತರುವೆನೆಂಬ ಪಂಥವನ್ನೊಡ್ಡಿ, ಇಷ್ಟರ ಸಂಭ್ರಮಕ್ಕೂ ಕಾರಣ-ಕಾರ್ಯಕರ್ತನಾದೆನೆಂದು, ಇಂದು ಲೋಕಮಾನ್ಯ ನೆನ್ನಿಸುವಂತಹ ಸುಯೋಗವನ್ನೂ ಕಾಣುತ್ತಿರಲಿಲ್ಲ. ಆದುದರಿಂದಲೇ ನಮ್ಮವರಲ್ಲಿ ಐಕಮತ್ಯವೊಂದಿದ್ದರೆ, ಅದೇ ಸಂಘಶಕ್ತಿಯ ಮಹತ್ವ ವನ್ನು ಸರ್ವಪ್ರಕಾರದಿಂದಲೂ ನಾರ್ಥಿಕಪಡಿಸುವಂತೆ ಮಾಡುವುದೆಂದೂ, ಇದೆಲ್ಲಕ್ಕೂ ನಮ್ಮಲ್ಲಿ ನಿಷ್ಕಲ೦ಕವಾದ ಬಂಧುಪ್ರೇಮವೂ ಪೂಜ್ಯಭಾವನೆ ಯೂ ಚೆನ್ನಾಗಿರಬೇಕೆಂದೂ ಹೇಳಲು ತಡೆಯಿಲ್ಲ. ಇನ್ನು ವಿವರವಿಷ್ಯಕ್ಕೆ ಸಾಕು, ನ.ಖ್ಯವಿಚಾರವನ್ನು ಸೂಚಿಸಿ, ಕೃತ ಕಾರ್ಯನಾಗುವೆನು, ಕೇಳಿರಿ, ನನ್ನ ಪ್ರಿಯಬಾಂಧವರೇ' ನಂದಿನಿಯ ವಿಚಾರವಾಗಿ ನೀವು ಇಂದಿನವರೆಗೆ ಹೇಗೆ ಹೇಗೆ ತಿಳಿ ದಿರುವಿರೋ-ಅದರಲ್ಲಿ, ನಿಜಾಂಶವೆಷ್ಟಿರಬಹುದೊ, ಯಾರೂ ಹೇಳಲಳವಲ್ಲ. ಅಲ್ಲದೆ- ಅಜ್ಞಾತಗೋತ್ರದ ಭಿಕ್ಷುಕನ ಮಗಳು, ಸ್ವಚ್ಛಾ ಖಾರಿ, ಅವಿವಾಹಿತೆಯಾದ ಜೋಡಶಿ, ಇತ್ಯಾದಿ ಇತ್ಯಾದಿಯಾದ ಪರುಷ ಭಾಷಣಗಳಿಂದ ಅವಳ ಯಾವರ್‌ವೃತ್ತಾಂತವನ್ನೂ ತಿಳಿಯಬೇಕೆಂಬ ಕೌತುಕವೂ ನಿಮಗಾಗಿರಬಹುದು, ಹೀಗಾಗಬೇಕಾದುದು ಸಹಜವೇ ಸರಿ. ಏಕೆಂದರೆ
ಪುಟ:ಮಾತೃನಂದಿನಿ.djvu/೧೮೮
ಗೋಚರ