ಪುಟ:ಮಾತೃನಂದಿನಿ.djvu/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾತ್ಮನ ದಿನಿ 17% ಈ ಅನಂದವನದ ಮಾತೃಮಂದಿರದಲ್ಲಿ ಕೇವಲ ಫಲಮೂಲಾಹಾರಿ ಯಾಗಿರುವ ಒಬ್ಬ ಸನ್ಯಾಸಿಗೆ ಇವಳು ಕನೈಯೆಂತಾಗುವಳು? ಸನ್ಯಾಸಿ ಯಾದ್ದರೆ ಈ ಹೆಂಗಸನ್ನು ಇಷ್ಟರ ವರೆಗೂ, ತನ್ನ ಬಳಿಯಲ್ಲಿ ಹೀಗೇಕೆ ಬೆಳ ಯಿಸಿಕೊಂಡಿದ್ದನು?” ಎಂದು ಹಲವರು ಶಂಕಿಸಬಹುದಲ್ಲದೆ, ತಪಸ್ವಿನಿಯ ವಿಚಾರವಾಗಿಯೂ ಹಲವು ವಿಕಲ್ಪಾರ್ಥಗಳನ್ನು ಪ್ರಯೋಗಿಸಬಹುದಲ್ಲವೆ? ಸಹಜ. ಇದು, ವಿಚಾರವಿಮರ್ಶೆಯಿಲ್ಲದ ಸಾಮಾನ್ಯರಿಗೆ ಉಂಟಾಗುವುದು ಸ್ವಾಭಾವಿಕವೇ ಸರಿ. ಆದರೂ ಪ್ರಾಜ್ಞರು ಇದನ್ನು ಒಪ್ಪಲಾರರು. ಅದಿರಲಿ. ನಂದಿನಿಯು ಅವಿವಾಹಿತೆಯಾದ ಷೋಡಶಿಯಾಗಿರುವುದೇನೋ ಸಹಜ. ಆದರೆ, ಅವಳು ತನ್ನ ಗರ್ಭಧಾರಿಣಿಯಾದ ಮಾತೃವಿಯೋಗವನ್ನು ಹೊಂದಿದ ಬಳಿಕ ಇಂದಿನವರೆಗೆ ಈ ಎಂಟು ವರ್ಷಗಳನ್ನು ಅಚಲವಾದ ಬ್ರಹ್ಮಚರ್ಯೆ ಯಲ್ಲಿ ವಿನಿಯೋಗಿಸಿ, ತಕ್ಕಮಟ್ಟಿಗೂ ಜ್ಞಾನವನ್ನು ಸಂಪಾದಿಸಿಕೊಂಡಿರುವ ಇಲ್ಲದೆ, ಹೀಗೆಯೇ ಇನ್ನೆಷ್ಟು ಕಾಲವಿದ್ದರೂ ಮನೋವಿಕಲ್ಪಕ್ಕೆ ಅವಕಾಶ ವಿಲ್ಲದೆ ಇರುವಳೆಂದು ಸಪ್ರಮಾಣವಾಗಿ ಹೇಳಬಹುದು. ಆದರೆ, ದೇಶ ಮಾತೆಯ ಅಭ್ಯುದಯಕ್ಕಾಗಿ-ಸಮಾಜದ ಅನಿಷ್ಟ ನಿವಾರಣೆಗಾಗಿ-ಸ್ತ್ರೀಪ್ರಸಂ ಚದ ಕಲ್ಯಾಣಕ್ಕಾಗಿ-ತರುಣಗೃಹಸ್ಥರ ಕರ್ತವ್ಯಸ್ಪೂರ್ತಿಗಾಗಿ ಇಂದು ಇವ ಳನ್ನು ಸುಬ್ರಹ್ಮಚರ್ಯ ನಿಪ್ಪಾತೆಯಾದ ಗೃಹಿಣಿರತ್ನವನ್ನಾಗಿ ಮಾಡಬೇಕೇ ಬುದು ಮಾತೆಯ ಉದ್ದೇಶವಾಗಿದೆ. 4 ಕರತಾಡನದೊಡನೆ ಮೇಲು ಮೇಲು, ಮತ್ತೊಂದುಬಾರಿ) ಮಾತೆಯ ಸಂಕಲ್ಪದಂತೆ ಇಂದು ಇವಳನ್ನು ಗೃಹಿಣಿಯಾಗಿ ಮಾಡಿ, ಋಣವಿಮುಕ್ತನಾಗಬೇಕಾದುದು ನನ್ನ ಕರ್ತವ್ಯವಾಗಿರುವುದರಿಂದ, ಇಂದು ಇವಳ ಇತಿವೃತ್ತವನ್ನೂ ವಿದಿತಪಡಿಸಬೇಕಾಗಿದೆ, ಕೇಳಿರಿ.... ನಂದಿನಿಯ ತಾಯಿಯೇ ನನ್ನ ದ್ವಿತೀಯ ಪತ್ನಿ, ಸನ್ಯಾಸಿಗೆ ಪತ್ನಿ ಯೆಲ್ಲಿ ? .. ಏಕೆ--ಎನ್ನು ವಿರಿ? ನನ್ನ ಭಾವನೆ ಅದಲ್ಲ. ಯಾವ ಪುಣ್ಯವತಿಯು ತನ್ನ ಜೀವಿತವನ್ನೆಲ್ಲ ಪತಿಯ ಸೇವೆಯಲ್ಲಿಯೇ ಕಳೆದು, ತನ್ನ ಜೀವನಸರ್ವ ಸ್ವನಂದ ಸ್ವರೂಪವನ್ನು ಹೊಂದಿ ಅಂತರ್ಹಿತೆಯಾದಳೋ, ಅಂತಹ ಪುಣ್ಯ ಮೂರ್ತಿಯಲ್ಲಿ ಕೃತಜ್ಞನಾಗುವುದು ನನ್ನ ಶೀಲವಲ್ಲ. ಅವಳನ್ನು ನಾನು ನನ್ನ ಸರ್ವಾಂತಃಕರಣದಿಂದಲೂ ಗೌರವಿಸಿಯೇ ಈಬಗೆಯಾಗಿ ನನ್ನ ಕರ್ತ