ಪುಟ:ಮಾತೃನಂದಿನಿ.djvu/೧೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

176 ಸತೀ ಹಿತೈಷಿಣಿ ವ್ಯ-ಧರ್ಮ-ಧೈಯಗಳನ್ನು ನಿರಾತಂಕದಿಂದ ನಿರ್ವಹಿಸುತ್ತಿರುವೆ. ಆ ಪುಣ್ಯವತಿಯ ಸಹಕಾರದಿಂದಲೇ ನನ್ನ ಚಿತ್ತವು. ಸಮಸೀಪ್ರಪಂಚವನ್ನೂ, ಇಲ್ಲಿ ಸಾಕ್ಷಾತ್ಕರಿಸಿರುವ ನಮ್ಮ ತಾಯಿಯಂತೆಯೇ ಭಾವಿಸಿ, ಪೂಜಿಸುತ್ತಿರು ವೆನು. ಮತ್ತು ಅವರಲ್ಲಿ ನಾನು ಕೇವಲ ಬಾಲಮಾತ್ರನೆಂದೇ ತಿಳಿದಿರುವೆನು; ಅಲ್ಲದೆ ಆ ಪುಣ್ಯಮೂರ್ತಿಯನ್ನು ಮರೆತು, ಸ್ತ್ರೀಯರನ್ನು ನೋಡುವುರಾ ಗಲೀ, ನುಡಿಸುವುದಾಗಲೀ, ಅವರ ಹೆಸರನ್ನೆತ್ತುವುದಾಗಲೀ ಸನ್ಯಾಸಿಗೆ ತಕದಲ್ಲವೆಂದಾಡುವರಂತೆ ನಾನು ಆತ್ಮವಂಚಕನಾಗಿ, ಅಜ್ಜನಂತೆ ಸಂಶಯ ಕ್ಷೇಶದಲ್ಲಿ ಕೊರಗಿದ ಮಾತ್ರದಿಂದ ಸನ್ಯಾಸ ಧರ್ಮದಲ್ಲಿ ನಿಮ್ಮ ನಗುವೆ ನೆಂದು ಹೇಗೂ ಎಣಿಸಲಾರೆನು. ಅದಿರಲಿ. ನಂದಿನಿಯ ತಾಯಿಯು ವಿಶ್ವನಾಥಭಟ್ಟಾಚಾರ್ಯರಿಗೆ, ಅಣ್ಣನ ಮಗ ಳಾಗಿದ್ದಳು. ಭಟ್ಟಾಚಾರ್ಯರ ಅಣ್ಣಂದಿರು ಸಾಮಾನ್ಯ ಪುರುಷರಾಗಿರಲಿಲ್ಲ. ಅವರ ಜ್ಞಾನವು ಅತ್ಯದ್ಭುತವಾಗಿದ್ದು ದುದರಿಂದ ಅವರು ತಮ್ಮ ಕಮಾತ್ರ ಪುತ್ರಿಯನ್ನು ಸುಶಿಕ್ಷಿತಳನ್ನಾ ಮಾಡಿದ್ದರು. ಅಲ್ಲದೆ ಅವರ ಅಚ್ಚಭಾವ ನೆಗೆ ತಕ್ಕಂತೆ ಪತ್ನಿ ವಿಯೋಗದಿಂದ ವಿರಕ್ತನಾಗಿ, ಪರಸ್ಥಳದಲ್ಲಿ ವ್ಯಾಸಂಗ ಸುತ್ತಿದ್ದ ನನ್ನನ್ನು ಕರೆಸಿ, ಕನ್ಯಾದಾನವಾಡಿ, ಮತ್ತೆ ನನ್ನ ನ್ನು ಗ್ರಹಸ್ಥನೆ ಸಿಸಿ, ತಾವು ಒಂಧನಿರ್ಮುಕ್ತರಾದರು. ಇದರಿಂದ ನಮ್ಮ ತಾಯಿಗೂ ನನ್ನ ಸೋದರ-ಸೋದರಿಯಾದ ಶರಚ್ಚಂದ್ರ, ತಪಸ್ವಿನಿಯರಿಗೂ ಅತ್ಯಂತ ಸಮಾಧಾನವಾಯಿತು. ನಂದಿನಿಯು ಹುಟ್ಟಿದ ನಾಲ್ಕನೆಯ ವರ್ಷದಲ್ಲಿಯೇ ನಾನು, ತಮ್ಮನು ಶಿವಪುರದಲ್ಲಿ ಬೇರೆಯಿದ್ದುದರಿಂದ ನನ್ನ ಪತ್ನಿಯ ಮತ್ತು ನಂದಿನಿಯ ಮೇಲ್ವಿಚಾರಣೆಯನ್ನು ತಂಗಿಗೊಪ್ಪಿಸಿ, ವೃದ್ದಳಾಗಿದ್ದ ನಮ್ಮ ತಾಯಿಯನ್ನು ತೀರ್ಥಯಾತ್ರೆಗಾಗಿ ಕರೆದುಕೊಂಡುಹೋದೆನು. ತಾಯಿ ಹೊಡನೆ ನಾನು ಭೂ ಪ್ರದಕ್ಷಿಣಮಾಡಲು ಹೊರಟು, ಪ್ರಯಾಗವನ್ನು ಸೇರಿದ ಒಂದೆರಡು ವಾರಗಳಲ್ಲಿಯೇ ತಾಯಿಯು ಮೃತಪಟ್ಟು ದರಿಂದ ಮಾತೃಕೈಂಕ ರ್ಯವನ್ನು ಪ್ರಯಾಗದಲ್ಲಿಯೇ ಯಥೋರೀತಿಯಾಗಿ ನೆರವೇರಿಸಿ, ಅಲ್ಲಿಂದ ಕಾಶೀಕ್ಷೇತ್ರಕ್ಕೆ ಹೊರಟು ಬಂದೆನು. ಪ್ರೇಮಮಯಿಯಾದ ನನ್ನ ತಾಯಿಯು ನನ್ನನ್ನು ಬಿಟ್ಟು ಹೋದಳೆಂಬ ದುಃಖವು ನನಗೆ ಅತಿಯಾಗಿದ್ದು, ಪವಿತ್ರತಮವಾದ ಕಾಶೀಕ್ಷೇತ್ರವನ್ನು