ಪುಟ:ಮಾತೃನಂದಿನಿ.djvu/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ 178 ಸತೀ ಹಿತೈಷಿಣಿ ಪ್ರಸನ್ನಳಾಗುವಳು. ಇನ್ನು ವ್ಯಥೆಯನ್ನು ಬಿಡು,” ಎಂದು ಉಪದೇಶಿಸಿದನು. ಅಂದಿನ ಮೊದಲು ಶೋಕದಿಂದ ನಿರ್ಮುಕ್ತನಾಗಿ ಇತರ ಚಿಂತನೆ ಇಲ್ಲದೆ, ಯೋಗೀಶ್ವರನ ಬಳಿಯಲ್ಲಿ ಯೋಗಾಭ್ಯಾಸಕ್ಕೆ ತೊಡಗಿ, ಆತ ನೊಡನೆ ಮಾತೃ ಸೇವೆಯಲ್ಲಿ ನಿರತನಾಗಿದ್ದು ಬಿಟ್ಟೆನು. - ಹೀಗೆಯೇ ನಾನು ಅಲ್ಲಿ ಎರಡು ವರ್ಷಗಳ ದೀರ್ಘಕಾಲವನ್ನೂ ಕಳೆದುಬಿಟ್ಟೆನು. ಅಷ್ಟರಲ್ಲಿಯೇ ನನಗೆ ಒಂದು ರಾತ್ರಿ ಕನಸಿನಲ್ಲಿ ನಮ್ಮ ತಾಯಿಯು ಬಂದು,..-ತಾನು ಈ ಅನಂದವನದಲ್ಲಿ ಒಬ್ಬಳೇ ಇರುವುದಾ ಗಿಯೂ, ತನ್ನ ಸೇವೆಯಲ್ಲಿದ್ದ ತನ್ನ ಹಿರಿಯಮಗನು ವ್ಯತ್ಯುಪಥದಲ್ಲಿರುವುದ Dಂದ ನನ್ನನ್ನು ಬೇಗ ಬರಬೇಕೆಂದೂ, ಹೇಳಿದಂತಾಯಿತು. ಅದನ್ನು ನಾನು ಯೋಗೀಶ್ವಕನಿಗೆ ತಿಳಿಸಲು, ಆತನು.-ದೇವಿಯು ನಿನಗೆ ಪ್ರಸನ್ನ ಳಾಗಿರುವಳು. ನೆತೆ, ಈ ತಾಯಿಯ ಅಂಶರೂಪವು ನಿನಗೆ ನಿರ್ದಿಷ್ಟವಾದ ಟೆಯಲ್ಲಿ ದೃಶ್ಯವಾಗಬಹುದಾಗಿದೆ. ನೀನಿನ್ನು ಮಾತೃಕೃಪಾಪಾತ್ರನಾಗಿ ಧನ್ಯನೆನ್ನಿ ಸುವೆ; ನೆನಪಿರಲಿ.' ಎಂದು ನನ್ನನ್ನು ಅಂತಃಕರಣಪೂರ್ವಕವಾಗಿ ಹರಸಿ ಬೀಳ್ಕೊಟ್ಟನು. ಹಾಗೆ ಕಾಶಿಯಿಂದ ಹೊರಟು: ನಾನು ಬರುತ್ತಾ ನಾಲ್ಕಾರು ವಾರ ಗಳಲ್ಲಿ ಈ ವನವನ್ನು ಸೇರಿ, ದೇವಿಯಿಂದ ನಿರೂಪಿಸಲ್ಪಟ್ಟ ಗುರುತುಗಳಿಂದ ಇಲ್ಲಿಗೆ ಬಂದು ನೋಡಿದೆನು. ಈ ಮಂದಿರವು ಇಷ್ಟು ದೊಡ್ಡದಾಗಿರಲಿಲ್ಲ. ಇಲ್ಲಿಯ ಗರ್ಭಾ೦ಕಣವು ಮಾತ್ರವೇ ಇದ್ದು, ಈ ವನವೆಲ್ಲವೂ ಕ್ರೂರಮೃಗ ಸಂಕೀರ್ಣವಾದ ಕಾನನವೇ ಆಗಿದ್ದಿತು. ಇಲ್ಲಿ ಮಾತೃ ಸೇವೆಗೆ ಒಬ್ಬ ವಿರಕ್ತ ನಾದ ವೃದ್ಧನು ಮಾತ್ರ ಇದ್ದನು. ಆತನನ್ನು ಕಂಡೊಡನೆ, ನಾನು ನನಗಾದ ಸ್ವಪ್ನ ವೃತ್ತಾಂತವನ್ನು ಹೇಳಿ, ಆತನಿಂದ ಮಾತೃ ಸೇವೆಯಲ್ಲಿ ಅದುಮೊದಲು ನಿಯಮಿಸಲ್ಪಟ್ಟು ನಿಂತೆನು. ಆ ಸಾಧುವು ತನ್ನ ಹೊರೆಯನ್ನು ನನ್ನ ಮೇಲೆ ಹೊರೆಸಿ, ತನ್ನ ಇಹಜೀವನದ ಸಮಾಪ್ತಿಯನ್ನು ತಾನು ಕಂಡನು. ನಾನು ಇಲ್ಲಿಗೆ ಬಂದಮೇಲೆಯೂ ನಾಲ್ಕಾರು ತಿಂಗಳವರೆಗೆ ನನಗೆ ಸತ್ಯ-ಪತ್ರಿ--ಸೋದರ-ಸೋದರಿಯರ ವಿಚಾರವಾದ ಅಭಿಮಾನವೇ ಉಂಟಾಗಿರಲಿಲ್ಲ. ಆದರೆ, ಅಗಲೂ ಸ್ವಷ್ಟದಲ್ಲಿ ತಾಯಿಯೇ ನನ್ನನ್ನು ಕುರಿತು, (ಮಗುವೆ! ಅಲ್ಲಿ ನಿನ್ನ ಪರಿವಾರಕ್ಕೆ ಅಪದವೆ ಉಂಟಾಗಿವೆ;