ಪುಟ:ಮಾತೃನಂದಿನಿ.djvu/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾತೃ ನ೦ದಿನಿ 179 ನೀನು ಇಲ್ಲಿ ನಿರ್ವಿಚಾರವಾಗಿರುತ್ತೀಯ” ಹೀಗೆ ಹೇಳಿದಳು. ಅದನ್ನು ಕೇಳಿದ ಕೂಡಲೇ ನಾನು ಇಲ್ಲಿಂದ ಹೊರಟುಹೋಗಿ ನೋಡುವಷ್ಟರಲ್ಲಿ ನನ್ನ ತಂಗಿಯು ವೈಧವ್ಯದುಃಖಕ್ಕೆ ಗುರಿಯಾಗಿ ವರ್ಷದಮೆಲಾಗಿದ್ದಿತು. ವಿಧವೆಯರ ಕಷ್ಟ ಗಳು ಅಷ್ಟಿಷ್ಟೆಂಬುದನ್ನು ನಾವು ಹೇಳಲಳವಲ್ಲ ವಷ್ಟೆ, ಹಾಗೆಯೇ ಇವಳು ಪತಿವಿಯೋಗಹೊಂದಿ ದುಃಖಾನುಭವ ಮಾಡು ತಿದ್ದುದು ಸಾಲದೆಂದು, ಇವಳ ಮೈದುನರಾದ ಗಣೇಶಸಂತರೂ, ಇವಳ ಸ್ವಾಮಿಗೆ ಮಾತುಲನಾಗಿದ್ದ ಈಗಿನ ವಾನಂದ ಗುರುಪೀಠದವರೂ, ಇವಳ ಸರ್ವಸ್ವವನ್ನೂ ಮತದ ಸೇವಾಕಾರ್ಯಕೊಪ್ಪಿಸಿ, ಸಮಾಜಶಾಸನಕ್ಕೆ ಆಧೀನವಾಗಿ ನಡೆಯಬೇಕೆಂದು ಒಹುಒಗೆ೦ದ ನಿಷ್ಟುರವಡಿಸಿದ್ದರು. ಅಲ್ಲದೆ, ಭಟ್ಟಾಚಾರ್ಯರಂತೂ ನನ್ನ ಪತ್ನಿಗೆ ಪಿತೃದತ್ತವಾಗಿದ್ದ ಭೂಸ್ವಾಸ್ಥ್ಯ ವನ್ನು ತಾವೇ ಅಪಹರಿಸಬೇಕೆಂದೋ, ಹೇಗೋ, ತನ್ನ ಮಗಳಿಗೆ ತಮ್ಮ ಕೈಯಿಂದಲೇ ವಿಷಪ್ರಯೋಗವಾಡಿದ್ದುದರಿಂದ ಅವಳು ಅತ್ಯಂತ ಯಾತನೆ ಯನ್ನು ಅನುಭವಿಸುತ್ತಾ ಕೇವಲ ನನ್ನ ಸಂದರ್ಶನಾಪೇಕ್ಷೆಯೊಂದರಲ್ಲಿಯೇ ಪ್ರಾಣವನ್ನುಳಿಸಿಕೊಂಡಿದ್ದಳು. (ಹರಿಹರಿ ! ಘೋರಕೃತ್ಯ !! ಚಂಡಾಲತನ.) ನಾನು ಹೋಗಿ ಸೇರಿದ ಕೂಡಲೇ ನನಗೆ ವಿಚಾರವೆಲ್ಲವೂ ತಿಳಿದು ಬಂದಿತು. ತಂಗಿಯು ತನ್ನ ಹಿರಿಯಣ್ಣನ ಮಾತನ್ನು ಕೇಳಿ, ಅದರಂತೆ, ತನಗೆ ಎಷ್ಟೋ ಕಷ್ಟಗಳುಂಟಾದರೂ ಹೇಸಿಗೆ ಕೆಲಸಕ್ಕೆ ತನ್ನಲ್ಲಿ ಎಡೆಗೊಡೆ ನೆಂದೇ ಹೇಳುತ್ತ ಎಲ್ಲವನ್ನು ತಡೆದಿರುವುದಾಗಿಯೂ ಅಲ್ಲದೆ ನಂದಿನಿಯ ತಾಯಿಯು, ಅಂತ್ಯ ಕಾಲಕ್ಕಾದರೂ ನೋಡಿ ಮನಸ್ಸಮಾಧಾನ ಹೊ೦ದು ವಂತೆ ಮಾಡೆಂದು ಎಷ್ಟೋ ಬಾರಿ ಪತ್ರಮುಖದಿಂದ ಪ್ರಾರ್ಥಿಸಿಕೊಂಡಿದ್ದು ವಾಗಿಯೂ ತಿಳಿದೆನು. ಅದೆಲ್ಲವೂ ಹಾಗಿರಲಿ, ನನ್ನನ್ನು ನೋಡಿ ನನ್ನಿಂದ ವೃತ್ತಾಂತವೆಲ್ಲವನ್ನೂ ತಿಳಿದ ಬಳಿಕ, ಆ ನನ್ನ ಪತ್ನಿಯು ಈ ನಂದಿನಿಯು ಕೈಯನ್ನು ನನ್ನ ಕೈಯಲ್ಲಿರಿಸಿ--ದೇವ! ಇನ್ನು ಅಪ್ಪಣೆಯಾಗಲಿ. ನಾನು ಇಂದು ಕೃತಕೃತ್ಯಳಾದೆನು. ನನ್ನ ಉದ್ದೇಶವು ಭಗವತಿಯ ಅನುಗ್ರಹದಿಂದ ನೆರವೇರಿತು. ನಾನು ಇಂದು ಈ ದೇಹವನ್ನು ಬಿಟ್ಟು ಹೋಗುವೆನಾದರೂ ನಿಮ್ಮನ್ನು ಬಿಟ್ಟು ಹೋಗುವಳಾಗಿಲ್ಲ. ಮಾತೃಸೇವೆಯಲ್ಲಿ ನೀವು ನಿರತ ರಾಗಿರುವುದನ್ನು ನೋಡಿ ನಲಿಯಲು, ಆ ಮಾತೃ ಚರಣಾರವಿಂದದಲ್ಲಿಯೇ