ಪುಟ:ಮಾತೃನಂದಿನಿ.djvu/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

130 ಸತೀಹಿತ್ಯ ಸಿದೇ ಸೇರಿರುವೆನೆಂದು ತಿಳಿಯಿರಿ. ಅಶೀರ್ವದಿಸಿ ಬೀಳ್ಕೊಡಿರಿ, ನಂದಿನಿಯನ್ನು ಇಂದಿನವರೆಗೆ ನಾನು ಅಕ್ಕರತೆಯಿಂದ ಬೆಳೆಯಿಸಿದರೂ ನೀವ್ರ ಮುಂದೆ ಇವಳನ್ನು ತಕ್ಕ ರೀತಿಯಿಂದ ದೇಶಸೇವೆಯಲ್ಲಿ ಸಹಕರಿಸುವಂತೆ ಸುಧಾರಿಸು ವುದನ್ನು ಮರೆಯಬಾರದು. ಅಲ್ಲದೆ, ನನ್ನ ಮರಣಕ್ಕೆ ಮತ್ತೊಬ್ಬರು ಕಾರಣರಾಗಿದ್ದರೂ, ಅದು ಕೇವಲ ಮಾತೃಸೇವೆಗೆ ಅನುಕೂಲವಕ್ಕೆ ಉಂಟುಮಾಡಿದುದರಿಂದ ನಮಗೆ ಸಹಾಯವೇ ಆಯಿತು. ಇದಕ್ಕಾಗಿ ಅವರಲ್ಲಿ ನೀವೇ ಆಗಲಿ, ನಿಮ್ಮ ತಮ್ಮನು ಅಥವಾ ಮಕ್ಕಳು ಯಾರೇ ಆಗಲೀ, ಪ್ರತೀಕಾರಮಾಡಲು ಚಿಂತಿಸಲಾಗದೆಂದು ಕೇಳಿಕೊಳ್ಳುವೆನು.ಅಪ್ಪಾ ದರೆ ಸಾಕು.' ಹೀಗೆ ಹೇಳುತ್ತ ಹೇಳುತ್ತ ನನ್ನಿಂದ ಭಾಷೆಯನ್ನು ತೆಗೆದು ಕೊಂಡು, ನನ್ನಿ ದಿರಾಗಿಯೇ ಪ್ರಾಣತ್ಯಾಗ ಮಾಡಿದಳು. ( ಶೋಚ ನೀಯವು; ಶೋಚನೀಯವು.) | ಪತ್ನಿ ವಿಯೋಗವಾದ ಬಳಿಕ, ಮತ್ತೆ ನಾನು ನಂದಿನಿಯನ್ನು ಅಲ್ಲಿಯೇ ಬಿಟ್ಟು, ಇಲ್ಲಿಗೆ ಬಂದು ಎಂದಿನಂತೆ ಮಾತೃ ಸೇವೆಯಲ್ಲಿ ನಿರತನಾದೆನು, ಹೀಗೆ ನಾನೂ ಬಂದು, ಆಕೆಯ ಸತ್ತುದರಿಂದಲೂ, ಈ ತಪಸ್ವಿನಿಗೆ ಕಿರು ಕುಳಗಳು ಮಿತಿಮೀರಿ ಹೋದವು. ಆ ವೇಳೆಯಲ್ಲಿ ಅಚಲು ಬುದ್ದಿ ತಿಳಿದ ವನಾಗಿ ಇರುತ್ತಿದ್ದರೆ ಎಷ್ಟೋ ಅನರ್ಥಗಳು ನಡೆದು ಹೋಗುತ್ತಿದ್ದುವು; ಅದಿರಲಿ, ಹೇಗೂ ಕಿರುಕುಳಗಳನ್ನು ತಡೆಯಲಾರೆನಂದು ಇವಳು ನನಗೆ ಹೇಳಿಕಳುಹಿದಳು. ನನ್ನ ಸೇವಾಕಾರ್ಯವನ್ನು ಬಿಟ್ಟು ಬರಲು ನನಗೆ ಸಮ್ಮತವಿರಲಿಲ್ಲ ವಾದರೂ ಹೋಗದೆ ಹೇಗಿರಬಹುದೆಂದು ಯೋಚಿಸುತ್ತಿದ್ದಾಗ ಮತ್ತೆ ನಮ್ಮಿ ತಾಯಿಯು ನನಗೆ--1ಮಗುವೆ! ನಂದಿನಿಯನ್ನು ನನಗೆ ದತ್ತಕೊಡ ಲಾರೆಯಾ? ಅವಳನ್ನು ನಾನು ಅಧಿಕವಾಗಿ ಪ್ರೀತಿಸುವೆನು” ಎಂದಿಂತು ಸ್ವಪ್ನ ವನ್ನು ಕರುಣಿಸಿದಳು. * ಮಾತೃವಾಕ್ಯವು ಹೀಗೆ ನನ್ನನ್ನು ಪ್ರೇರಿಸಲು, ನಾನು ಆಗಲೇ ಹೊರಟು ತಂಗಿಯ ಸ್ವತ್ತನ್ನೂ ಮತ್ತು, ನನ್ನ ಪತ್ನಿಯ ಪಿತೃದತ್ತವಾದ ಸಂಪತ್ತಿ ಯನ್ನೂ ಒಟ್ಟಾಗಿ ಮಾರಿ ಹಣವನ್ನು ತೆಗೆದುಕೊಂಡು, ದೇಶಯಾತ್ರೆಗಾಗಿ ಹೊರಟು ಹೋಗುವೆನೆಂದು ಹೇಳಿ, ನಂದಿನಿ-ತಪಸ್ವಿನಿಯರನ್ನು ಜೊತೆ