ಪುಟ:ಮಾತೃನಂದಿನಿ.djvu/೧೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾತೃ ನಂದಿನಿ 181 ಗೊಂಡು ಇಲ್ಲಿಗೆ ಬಂದೆನು. ಒಂದೆರಡು ವರ್ಷಗಳ ವರೆಗೆ ನಮ್ಮ ವರ್ತಮಾನ ವನ್ನೇ ಕೊಡದೆ ಇದ್ದುದರಿಂದ, ನಾವು ಯಾತ್ರಿಕರಾಗಿ ಹೋಗಿ ಮೃತಪಟ್ಟಿ ಎಂದೇ ಅವರೆಲ್ಲರೂ ತಿಳಿದಿದ್ದರು. ಹೀಗಾದ ಬಳಿಕ ನಾನು ತಪಸ್ವಿನಿಯ ಮತ್ತು ನಂದಿನಿಯ ಮಾತಾ ಮಹನ ಸಂಪತ್ತಿಯಿಂದ ಈ ಆನಂದವನವನ್ನೂ ಮಂದಿರವನ್ನೂ ವಿಸ್ತಾರರ್ಗೊ ಸಿದೆನು. ಆಬಳಿಕ ನಂದಿನಿಯನ್ನು ಈ ತಾಯಿಯಮುಂದೆ ಪ್ರಮಾಣಪೂರ್ವಕ ವಾಗಿ ಒಪ್ಪಿಸಿ, ಅವಳ ಅಭಿಮಾನಪುತ್ರಿಯಾದುದರಿಂದ ತಕ್ಕಮಟ್ಟಿಗೂ ಬ್ರಹ್ಮಚರ್ಯೆ-ವಿದ್ಯಾ-ಸದಸದ್ವಿಚಾರಜ್ಞಾನ-ವೈರಾಗ್ಯ- ಯೋಗಗಳನ್ನು ಅಭ್ಯಾಸಕ್ಕೆ ತಂದೆನು. ವಯೋ-ರೂಪ-ವಿದ್ಯಾ-ವಿನಯಾದಿ ಸಮಸ್ತ ಗುಣಸಂಪನ್ನೆಯಾದ ಕನೈಯನ್ನು ಹೀಗೇಕೆ ಬೆಳೆಸಿದ್ದೆನೆಂದರೆ, ಕನೈಯನ್ನು ಅಪಾತ್ರನಿಗೆ ಕೊಡ ಬಾರದು. ಸತ್ಪಾತ್ರನು ದೊರೆಯಲಿಲ್ಲ. ಮಾಡತಕ್ಕುದೇನು ? ಮನೋ ಯೋಗದಿಂದ ಮಾತೃ ಸೇವೆಯಲ್ಲಿದ್ದರೆ ಸಾಕೆಂದು ಮಾಡಿ ಹಾಗೆಯೇ ಬಿಟ್ಟೆ ನು. ಅನೇಕರು ಬಂದು ಕೇಳಿದರು. ಸಮ್ಮತಿಸಲಿಲ್ಲ. ಅದರೆ ಹೀಗೆ ನನ್ನ ಬಳೆಯಲ್ಲಿ ಇನ್ನಷ್ಟು ಕಾಲವಿರಬಹುದೆಂದು ಯೋಚಿಸುತ್ತಿರುವಾಗಲೇ ನರೇ ಶನು ದೃಗ್ಗೋಚರನಾಗಿ, ನಂದಿನಿಯ ಪೋಷಣೆಗೆ ತಾನು ನಿಲ್ಲುವೆನೆಂದು ಹೇಳಿ, ಆ ಕಾರ್ಯಭಾರವನ್ನು ವಹಿಸಿದನು. ಕೇಳಿದಿರೇನು, ನನ್ನ ಬಾಧೆ ವರೇ? ನಂದಿನಿಯ ಇಂದಿನ ವರೆಗಿನ ಚರಿತೆಯೆಲ್ಲವನ್ನೂ ವಿವರಿಸಿರುವೆ. ಇನ್ನು ಒಂದು ವಿಚಾರವುಳಿದಿದೆ. ನಂದಿನಿಯು ನನಗೆ ಮಗಳಲ್ಲ; ತಾಯಿ. ಈ ನಮ್ಮ ತಾಯಿಯ ಅಭಿಮಾನದ ಪತ್ರಿ; ತಾಯಿಯ೦ತೆಯೇ ಮಕ್ಕಳ ಇರಬೇಕೆಂಬ ತತ್ವವು ಇವಳಿಗೆ ಸಲ್ಲುವಂತೆ, ಇವಳು ತನ್ನ ಮಾತೆಯ ಕ್ಷಮಾಗ ಣವನ್ನೇ ಅವಲಂಬಿಸಿರುವಳು. ಇವಳು ತಾಯಿಯೆಂದರೆ ಜನ್ಮಭೂಮಿಯೊಂದೇ ಎಂದು ನಂಬಿರುವಳಲ್ಲದೆ, ತಾಯಿಗೆ ಮೇಲೆಯುಂಟಾಗುವಂತೆ ಮಾಡಲು ತನ್ನ ಜೀವವನ್ನೇ ಒತ್ತೆಯಾಗಿಟ್ಟು, ಸ್ಥಿರತೆಯಿಂದ ನಡೆಯುತ್ತಿರುವಳು. ತಾಯಿ, ತಂದೆ, ಗುರು ಮೊದಲಾದ ಹಿತೈಷಿಗಳ ಶಾಸನವು ಎಷ್ಟೇ ಕಠಿಣ ವಾಗಿರಲಿ, ತನಗದೇ ಶ್ರೇಯಸ್ಕರವಾದುದರಿಂದ ಅದನ್ನು ಮೀರದೆ ನಯ