ಪುಟ:ಮಾತೃನಂದಿನಿ.djvu/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



182 ಸತೀಹಿತೈಷಿಣೀ ಬೇಕೆಂಬುದೇ ಇವಳ ಉದ್ದೇಶವಾಗಿರುವುದು. ಇದಕ್ಕನುಸಾರವಾಗಿಯೀ ಇವಳು ಪ್ರಾಪಂಚಿಕ ತತ್ವದ ಪ್ರೌಢಶಿಕ್ಷಣವನ್ನೂ, ಗೃಹರಾಜ್ಯನಿರ್ವಾಹಕ್ಕೆ ಬೇಕಾದ ದಕ್ಷತೆಯನ್ನೂ, ಸಪ್ರಮಾಣವಾದ ದೃಷ್ಟಾಂತಗಳೊಡನೆ ಹೊ೦ದ ಬೇಕೆಂಬ ಉದ್ದೇಶದಿಂದ, ನರೇಶರಾಯನ ವಶಕ್ಕೊಪ್ಪಿಸಲ್ಪಟ್ಟು, ಅಲ್ಲಿ ಎರಡು ವ ಅತ್ಯುತ್ತಮರೀತಿಯಿಂದ ವಿನಿಯೋಗಿಸಿರುವುದಲ್ಲದೆ, ನರೇಶರಾಯನ ಪುತ್ರನಿಗೂ ಪುತ್ರಿಗೂ ತನ್ನ ಮನೋರೋಗಶಕ್ತಿಯಲ್ಲಿ ಅಷ್ಟಿಷ್ಟಾಗಿ, ಅವರಿಂದಲೂ ಅಭ್ಯಸಿಸಲ್ಪಡುವಂತೆ ಮಾಡಿ, ನರೇಶರಾಯನಿಗೂ ಆತನ ಪತ್ನಿಗೂ ಪ್ರಾಣಾಧಿಕವಾದ ಜೀವರತ್ನವೆಂಬಂತೆ ತೋರಿ, ಮುಂದಿನ ತನ್ನ ಎಳದಂಗೆಯರಿಗೆಲ್ಲ ಮಕ್ಕಳಿಗಿರಬೇಕಾದ ಭಾವನೆಯಂತಹದೆಂಬುದನ್ನು ಕಲಿಸುವವಳಾಗಿರುವಳು. ಇನ್ನು ಮುಂದೆ, ಈ ನಂದಿನಿಯಿಂದ ನಮ್ಮೀ ಭಾರತಮಾತೆಗೆ ಎಷ್ಟೆ ಫ್ರೋ ಕಾರ್ಯಗಳಾಗಬೇಕಾಗಿರುವುದರಿಂದಲೂ, ಅದನ್ನು ಇವಳೊಬ್ಬಳೇ ನಿರ್ವಹಿಸಲಾರದುದರಿಂದಲೂ, ಪ್ರಕೃತಿ-ಶಕ್ತಿಗಳೆರಡೂ ಸೇರಿಯೇ ವಸ್ತು ಸ್ವರೂಪವು ವ್ಯಕ್ತಪಟ್ಟು, ರಸವತ್ತಾಗಿ ತೋರುವದಲ್ಲದೆ, ಶಕ್ತಿಯಿಲ್ಲದೆ ಪ್ರಕೃತಿ ಸೌಂದರ್ಯವಾಗಲೀ ಪ್ರಕೃತಿಯಿಲ್ಲದೆ ಶಕ್ತಿಯ ಕಾಂತಿಯಾಗಲೀ ಕಾರ್ಯಕಾರಿಯಾಗಿ ನಿಲ್ಲಲಾರದಂತೆ, ಕೇವಲಪ್ರಕೃತಿ ಸಾದೃಶ್ಯವಾಗಿರುವ ಸ್ತ್ರೀವ್ಯಕ್ತಿತ್ವದಿಂದಮಾತ್ರವೇ ನಂದಿನಿಯು ಉದ್ದೇಶಿಸಿದ್ದಿ ಹೊಂದುವುದು ಅಸಾಧ್ಯವಾದುದರಿಂದಲೂ, ಇಂತಹ ಪ್ರಕೃತಿಗೆ ಶಕ್ತಿಯನ್ನು ಂಟುಮಾಡುವ ಪಾತ್ರವು ಎಂದರೆ, ನಂದಿನಿಯ ವ್ಯಕ್ತಿತ್ವವನ್ನು ಸಾಫಲ್ಯಗೊಳಿಸುವ ಪ್ರಭಾವವೂ, ನಾದಾನಂದನಲ್ಲಿ ಚೆನ್ನಾಗಿ ತೋರುತ್ತಿರುವುದರಿಂದಲೂ, ಅಲ್ಲದೆ, ನಂದಿನಿಯ ಸದುದ್ದೇಶ-ಸಾಹಸ-ಪ್ರಯತ್ನಗಳಿಗೆ ಉದಾರಾಶ್ರಯ, ಪ್ರೋತ್ಸಾಹಗಳನ್ನು ಕಲ್ಪಿಸುವುದರಲ್ಲಿ ನರೇಶ-ಚಿತ್ರಕಲೆಯರಿಬ್ಬರೂ ಸಮರ್ಥರಾಗಿರುವುದರಿಂದಲೂ ಇಂದು ಇವಳನ್ನು , ಈ ನಮ್ಮ ಪುತ್ರಮಣಿ ಅಚಲಚಂದ್ರನಾಥನ ಹಿತಸೂಚನೆಯಂತೆ, ಮಾತೃಸನ್ನಿಧಿಯಲ್ಲಿ ನಾದಾನಂದನ ಹಸ್ತದಲ್ಲಿರಿಸಿ, ನನ್ನ ಕರ್ತವ್ಯದ ದೊಡ್ಡ ಹೊರೆಯನ್ನು ಕೆಳಗಿಳಿಸುತ್ತಿರುವೆನು. ಇದರಿಂದ, ಲೇ ನಮ್ಮ ಸಮಾಜದ ಕಲ್ಯಾಣವು ಊರ್ಜಿತವಾಗಬೇಕೆಂದೂ ಆಶಿಸುವೆನು. (ಧನ್ಯಧನ್ಯ!! ಸತ್ಯಾನಂದಜೀ ಧನ್ಯಧನ್ಯ!!! ಸತ್ಪಾತ್ರಲಾಭ; ಸಾಲಂಕೃತ