ಪುಟ:ಮಾತೃನಂದಿನಿ.djvu/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

'ಓರೆ ಅಕ್ಷರಗಳು'ಓರೆ ಅಕ್ಷರಗಳು'194


                      ಷೊಡಶ ಪರಿಚೆದ.
                     (ತಪಸ್ವಿನೀ ಹಿತೋಪದೇಶ)
                 “ಯೋಗೇಶ್ವರಿ,ತಾ೦ ಶಿರಸಾನಮಾಮಿ”
ಸತ್ಯಾನಂದ ಪರಮಹಂಸನು ಧ್ಯಾನಾಸಕ್ತನಾಗಿ ಕುಳಿತಬಳಿಕ, ಗರ್ಭಾ೦ಕಣದಲ್ಲಿದ್ದ ತಪಸ್ವಿನಿಯು ನಂದಿನಿಯನ್ನು ಕೈ ಹಿಡಿದು ಕರೆದು ಕೊಂಡು ಚಿತ್ರಕಲೆಯಿದ್ಲಲಿಗೆ ನಡೆತಂದಳು. ತಪಸ್ವಿನಿಯ ಹಿಂದೆಯೇ ಸವಿ ಯರೊಡನೆ ಸ್ವರ್ಣ ಕುಮಾರಿಯೂ, ನಾದಾನಂದಾದಿಗಳೊಡನೆ ಅಚಲಚಂದ ಸೂ ಹೊರಟುಬಂದರು. ತಪಸ್ವಿನಿಯ ಆಗಮನವನ್ನು ನೋಡಿ, ಕುಳಿತಿದ್ದವರೆಲ್ಲರೂ ನಿಂತು, ಕೈಗಳನ್ನು ಮೇಲಕ್ಕೆತ್ತಿ, ವಿನಯ-ಭಕ್ತಿ-ಗೌರವದಿಂದ "ಯೋಗೇಶ್ವರಿ. ತ್ವಾಂ ಶಿರಸಾನಮಾಮಿ” ಎಂದು ಸ್ತುತಿಸಿದರು.

ತಪಸ್ವಿನಿಯು:- ದೇವಿಯ ಕಡೆಗೆ ಕೈನೀಡಿ, ಕರುಣಾವ್ಯಂಜಕಸ್ವರ ದಿಂದ ಹೇಳಿದಳು:- “ನನ್ನ ದೇಶಬಾಂಧವರೇ ! ಯೋಗೇಶ್ವರಿಯ ನೋಡಿರಿ, ಅಲ್ಲಿರುವಳು. ಅವಳಿಗೆ ನಿಮ್ಮ ವಂದನೆಗಳು ಅರ್ಪಿತವಾಗಿರುವುವು. ಅವಳ ಪೂರ್ಣಾನುಗ್ರಹಕ್ಕೂ ನೀವು ಪಾತ್ರರಾಗಿರುವಿರಿ. ಅಷ್ಟಲ್ಲದೆ ದೇಶಮಾತೃ ಸೇವಕಳಾದ ಈ ಭಿಕ್ಷುಕಳು ವಂದನಾರ್ಹಳೆಂದಿಗೂ ಅಲ್ಲವೆಂದು ತಿಳಿಯಿರಿ.” ಚಿತ್ರ ಕಲೆ:-ಭಗವತಿ! ಕೊರಳುತುಂಬ ಜಪಮಾಲೆಗಳನ್ನು ಅಳವಡಿಸಿಕೊಂಡು ಕಾವಿಯನ್ನುಟ್ಟಮಾತ್ರದಿಂದಲೇ ತಪಸ್ವಿಗಳಾದ್ದೆವೆಂದು ಭಾವಿಸಿ, ತಾವೇ ಪರಮಪಾವನರೆಂಬ ಅಹಂಕಾರದಿಂದ ಅನನುಭವವಾದ ನಾಲ್ಕಾರು ಸಂತೆಪಾಠಗಳನ್ನು ಕ೦ಠಪಾಠಮಾಡಿ, ಬಂದವರನ್ನು ಭ್ರಮೆಗೊಳಿಸುವವರನ್ನು ನಾವು ಸ್ತುತಿಸಲಿಲ್ಲ್ವ; ಸ್ತುತಿಸುವುದೂ ಇಲ್ಲ. ಯಾರ ಪವಿತ್ರಹೃದಯವು ಪ್ರಪಂಚವನ್ನೇ ಪರದೇವತಾಭಾವನೆಯಿಂದ ಪ್ರೀತಿಸುತ್ತಿರುವುದೋ, ಯಾರ ಅಂತಃಕರಣವು ಪರಮಾತ್ಮನ ಸಂಬಂಧಾನುಸಂಬಂಧಗಳ ಸೂಕ್ಷ್ಮತತ್ವವನ್ನು.