ವಿಷಯಕ್ಕೆ ಹೋಗು

ಪುಟ:ಮಾತೃನಂದಿನಿ.djvu/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಮಾತೃ ನಂದಿನಿ 185 ತಿಳಿದು ಮಹತ್ವಾಕಾಂಕ್ಷೆಯಿಂದ ಅದನ್ನು ಪ್ರಸಾರಕ್ಕೆ ತರಬಲ್ಲದಾಗಿರುವುದೋ, ಅಂತಹ ದೈವಿಕಮುರ್ತಿಯನ್ನೇ ನಾವು ವಂದಿಸುವೆವು, ಭಗವತಿ! ಯೋಗೇಶ್ವರಿಯು ಅಲ್ಲಿರುವಳೆಂಬುದೇನೋ ನಿಜವಾಗಿದ್ದರೂ, ಇಲ್ಲಿ ಈ ರೂಪದಿಂದಲೇ ನಮಗೆ ಪ್ರತ್ಯಕ್ಷಳಾಗಿರುವಳೆಂದು ನಾವು ತಿಳಿಯಬಾರದೇಕೆ ? (“ಸಾಧು ! ಸಾಧು !! ಸಾದ್ವಿ ವಚನವೇ ಪರಮಸಾಧು.” ಸಭಿಕರಉತ್ಸಾಹ)

ತಪಸ್ವಿನಿಯು ಸಂಭ್ರಮದಿಂದ ಚಿತ್ರಕಲೆಯ ಕೈ ಹಿಡಿದು, ನಂದಿನಿಯ ಕೈಗಳೊಡನೆ ಸೇರಿಸಿ, ಪ್ರೇಮಾತಿಶಯದಿಂದ ಒಂದುತಡವೆ ನೆರೆದಿದ್ದವರ ಕಡೆಯನ್ನು ನೋಡಿದಳು. ತಪಸ್ವಿನಿಯ ಕರುಣಾದೃಷ್ಟಿಯನ್ನು ನೋಡಿ ಎಲ್ಲರೂ ಕುತೂಹಲದಿಂದ ನಿಶ್ಯಬ್ಬರಾಗಿ ನಿಂತರು. ತಪಸ್ವಿನಿಯು ಹೇಳ ತೊಡಗಿದಳು.

"ತಾಯಿಯರೇ! ಅಕ್ಕತಂಗಿಯರೇ! ನೀವೆಲ್ಲರೂ ನನ್ನನ್ನು ಎಷ್ಟೋ ಗೌರವಿಸುತ್ತಿರುವಿರಿ. ಆದರೆ, ಆ ಗೌರವಕ್ಕೆ ತಕ್ಕ ಪಾತ್ರತೆಯು ಮಾತ್ರ ನನ್ನಲ್ಲಿರುವುದಿಲ್ಲ. ಆದರೂ ನೀವು ಹೀಗೆ ಅಭಿನಂದಿಸುತ್ತಿರುವದನ್ನು ನಿರೋಧಿಸಲಿಕ್ಕೆ ನನ್ನಿಂದಾಗದು. ಏಕೆಂದರೆ, ಯಾರ ನೆವದಿಂದಲೇ ಆಗಲಿ. ಹೇಗೇ ಆಗಲಿ, ಮಾತೆಯನ್ನು ಸ್ತುತಿಸಿ, ಕೀರ್ತಿಸಿ ಅನಂದಭಾಜನರಾಗುತ್ತಿರುವ ನಿಮ್ಮ ಆತ್ಮಸಂತೋಷಕ್ಕೆ ನಾನೇಕೆ ಆತಂಕವಾಗಲಿ? ಮನದಣಿವಂತೆ ಸ್ತುತಿಸಿ ನಲಿಯಿರಿ. ಅದರೆ ಕೇಳಿರಿ; ನಾನು ಅಷ್ಟರ ಪ್ರತಿಭಾಸಂಪನ್ನೆಯಲ್ಲವಾದರೂ ನಿಮ್ಮಲ್ಲಿ ನಾನಾಗಿ ಹೇಳುವ ಒಂದೆರಡು ಅನುಭವಪೂರ್ವಕ ವಾದ ಹಿತಸೂಚನೆಗಳನ್ನು ಗಮನಿಸಿರಿ,

ದೇವಿಯರೇ! ಅರ್ಯಮಾತೆಯ ಅಂಶರೂಪಿಣಿಯರಾಗಿರುವ ನಿಮ್ಮಲ್ಲಿ ನಮ್ಮ ಆರ್ಯರಮಣೀಧರ್ಮದ ನಿಜವಾದ ರಕ್ತವು ಅಷ್ಟಿಷ್ಟಾದರೂ ಇಲ್ಲದೆ ಹೋಗಿಲ್ಲ. ಆ ಅರ್ಯತ್ವದ ಹನಿಮಾತ್ರವು ನಮ್ಮ ಧಾತುವಿನಲ್ಲಿ ಪ್ರವೇಶ ಮಾಡಿರುವುದಾದರೆ, ಸಾಕು; ನಮ್ಮ ನಾರೀಜನ್ಮವೇ ಸಾಫಲ್ಯ! ಏಕೆಂದರೆ, ನಮ್ಮ ಪೂರ್ವಜರಾದ ಅರ್ಯರಮಣಿಯರ ಅತ್ಯದ್ಭುತವಾದ ತಪಃಪ್ರಭಾವವನ್ನು ನಾವೂ ಹೊಂದಬೇಕೆಂದರೆ ಈ ಕಾಲದಲ್ಲಿ ನಮಗೆ ಸ್ವಷ್ಟ ವಿಚಾರದಂತಾಗುವುದು. ಎಂದರೆ, ಕಾಲವು ಕೆಟ್ಟು ಹೋಗಿಲ್ಲ. ಹಾಗೂ ವಿಚಾರ ಮಾಡುವೆವಾದರೆ, ಈ ಕಾಲವೇ ನಮಗೆ ಅತ್ಯಂತ ಸಹಕಾರಿಯಾಗಿದೆ.