ಪುಟ:ಮಾತೃನಂದಿನಿ.djvu/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

186

                                ಸತೀಹಿತಷಿಣೀ 

ಆದರೂ ನಮ್ಮವರ ಆಚಾರ ವಿಚಾರಗಳೇ ವಿಕಲ್ಪವಾಗಿ ತಿರುಗಿವೆ. ಇದರಿ೦ದ ನಮ್ಮ ಮನೋದಾರ್ಡ್ಯವು ಕು೦ದಿ, ಹಿಂದುಮುಂದಿನ ವಿಷಯವಿಚಾರಗಳನ್ನು ಸಮಾಲೋಚಿಸುವುದರಲ್ಲಿಯೇ ನಮ್ಮ ಬುದ್ಧಿಶಕ್ತಿಯನ್ನು ನಾಶಮಾ ದಿಕೊಳ್ಳುವ ದುಃಸ್ಥಿತಿಯು ನಮ್ಮವರನ್ನು ಆಕ್ರಮಿಸಿದೆ! ಹೇಳುವುದೇನು?

ಯಾವ ಸ್ತ್ರಿರ್ವರ್ಗವು ಸಮಸ್ತ ಪುರುಷ ವರ್ಗದಿಂದ ತ್ರಿಕರಣಸಾಕ್ಷಿಕವಾಗಿ ಪ್ರಶಂಸಿಸಲ್ಪಡುತ್ತಿದ್ದಿತೋ, ಅದೇ ಸ್ತ್ರಿ ವರ್ಗವೇ, ಈಗ ಇಷ್ಟರ ಅಪಮಾನ-ಉದಾಸೀನ-ಸಂಶಯ-ಕ್ಲೀಶಗಳಿಗೂ ಪಕ್ಕಾಗಿ, ನರಳುವ ಗತಿಯುಂಟಾಗಿದೆ. . ಅಷ್ಟೇ ಅಲ್ಲ. ನಾವು ಮಾತ್ರವೇ ಅಪವಾದಗ್ರಸ್ತೆಯರಾಗಿದ್ದರೆ ದುಃಖವಿಲ್ಲ. ಪವಿತ್ರಾಂತಃಕರಣರಾದ ನಮ್ಮ ಭಾರತಮಹಿಳಾ ಮಣಿಯರ ಯಶೋಧಾವಲ್ಯವು ಕೂಡ, ನಮ್ಮವರ ಮೇಲಿನ ದೌರ್ಜನ್ಯ ವಿಷದಿಂದ ಮಲಿನಸ್ಥಿತಿಗಿಳಿಯುತ್ತಿರುವುದು, ವಿಚಾರಪರರಾರಿಗೂ ವಿಷಾದವನ್ನು೦ಟು ಮಾಡದೆ ಬಿಡಲಾರದು ! ಇರಲಿ.

      ಈ ಕಡೆ ನೊಡಿರಿ ನನ್ನ ತ೦ಗಿಯರೆ!
    ಇಲ್ಲಿರುವ ನಮ್ಮ ತಾಯಿಗೆ ಇವಳ ಪುತ್ರಸಂತಾನವೇ ಬಲಭುಜವಾಗಿಯೂ, ಸ್ತ್ರೀಸಂತಾನವೇ ಇವಳ ವಾಮಭುಜವಾಗಿಯೂ ಇರುವುವು. ಇಂತಿರುವ ಭುಜಗಳಲ್ಲಿ ಈಗಾಗಿರುವ ಸ್ಥಿತಿಗಳನ್ನು ನೋಡಿ ತಿಳಿಯಿರಿ. ಈ ತಾಯಿಯ ದಕ್ಷಿಣಬಾಹುವನ್ನು ನೋಡಿರಿ ! ಅಭಯಪ್ರದವಾಗಿ ನಳನಳಿಸುತಿದ್ದ ಕರಪಲ್ಲವವು ಕುಂದಿಹೋಗಿ, ಒಡಲಬೇಗೆಯ ಉಪಟಳವನ್ನು ತಡೆಗಟ್ಟುತ್ತಿರುವ ನಡುಪಟ್ಟಿಯಂತೆ ಸಾರವಿಲ್ಲದುದಾಗಿ, ಕಟಿಪ್ರದೇಶದಲ್ಲಿ ಹೇಗೆ ಸುತ್ತಿಡಲ್ಪಟ್ಟಿರುವುದೋ, ಕಾಣಲಿಲ್ಲವೇ? ಹೀಗಾಯಿತೇಕೆ?
      ಮತ್ತೆ ನೋಡಿರಿ, ಇವಳ ವಾಮಬಾಹುವಿನ ಪರಿಯನ್ನು ! ಯಾವ ಭಾಗವು, ಹಿಂದೆ ಅತ್ಮಾನಂದಪಥವನ್ನು ಪ್ರಕಾಶಪಡಿಸುತ್ತಿದ್ದ ಕರಕಮಲದಿಂದ ಸಮಸ್ತ ಜೀವಕೋಟಿಗೂ ಆಹ್ಲಾದ ದಾಯಕವಾಗಿದ್ದಿತೋ, ಅದೇ ಭಾಗವೇ ಈಗ ಈ ಬಗೆಯಾಗಿ, ಕೃಶವಾಗಿ,-ಅದೇ ಕರಕಮಲವೇ ಈಗ ಈರೀತಿ ಮುಕುಳಿತವಾಗಿ, ಅಂತಸ್ತಾಪದಿಂದ ಹೊರಡುವ ಕಣ್ಣೀರನ್ನು ವಾರಿಸುತ್ತಿರುವಂತೆ ಕಪೊಲಪ್ರದೇಶದಲ್ಲಿ ಸೇರಿಹೋಗಿರುವುದನ್ನು ನೋಡು