ಪುಟ:ಮಾತೃನಂದಿನಿ.djvu/೨೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾತೃನ ದಿ ನಿ ನ 187 ತಿದ್ದರೂ ನೀವೇನೆನ್ನುತ್ತಿರುವಿರಿ? ಹೀಗಾಯಿತೇಕೆಂದು ಕೇಳುವಿರೇನು... ತಂಗಿಯರೇ? ಇದಕ್ಕೆ ಕಾರಣರು ನಾವೇ, ಅಥವಾ ನಮ್ಮ ಪುರುಷಬಾಂಧ ವರೋ-ಹೀಗೆಯೇ ಸರಿಯೆಂದು ನಿರ್ಧರಿಸುವುದು ಕಷ್ಟವಾಗಿದ್ದರೂ, ಇಬ್ಬರಿಂದಲೂ ಅಪಚಾರವು ನಡೆಯಲ್ಪಟ್ಟಿರುವುದೆಂದು ಹೇಳಬೇಕಾಗಿದೆ. ಇದಕ್ಕಾಗಿ ಎಷ್ಟೆಷ್ಟು ಪರಿತಪಿಸಿದರೂ ಸ್ವಲ್ಪವಾಗಿಯೇ ಇದೆ. ಆದರೆ, ಗತಿಸಿದ ವಿಚಾರವನ್ನು ಕುರಿತು, ಅತಿಯಾಗಿ ಶೋಕಿಸುತ್ತ ಕುಳಿತ ಮಾತ್ರದಿಂದಲೇ ನಾವು ನಮ್ಮ ಮಾತಯ ಪೂರ್ವ ಶೋಭಾ ರಾಶಿಯನ್ನು ಮತ್ತೆ ಊರ್ಜಿತಪಡಿಸಿದ ಹಾಗಾಗಲಿಲ್ಲ. ನಾವು ಅಧೀರರಾಗಿ ಅತ್ತು ದರಿ ದಲೇ ನಮ್ಮ ತಾಯಿಯು ಅಭ್ಯುದಯವನ್ನು ಹೊಂದುವುದಿಲ್ಲ. ಅಳುವುದುಹಂಬಲಿಸುವುದು-ಕಳವಳಿಸಿ ಬಳಲುವುದು, ಇವುಗಳಲ್ಲಿ ಯಾವದೇ ಒಂದ ರಿಂದಲೂ ನಾವು ನಮ್ಮ ಕರ್ತವ್ಯವನ್ನು ಸಾಧಿಸಲಾರೆವು. ಮತ್ತೆ ಈಗ ನಾವು ಮಾಡಬೇಕಾಗಿರುವುದೆಂದರೆ, ಮುಂದಿನ ಅಭ್ಯುದಯವನ್ನು ಕಾಣ ಬೇಕೆಂಬ ಉತ್ಸಾಹವನ್ನು ಹೊಂದಿ, ನಮ್ಮಲ್ಲಿರುವ ದುರ್ಗುಣಗಳನ್ನು ದೂರ ಮಾಡಿ, ಸದ್ವರ್ತನ-ಸೌಜನ್ಯಗಳನ್ನು ಹೆಚ್ಚಿಸಿಕೊಳ್ಳಬೇಕಾದುದೊಂದೇ ನಾವು ಮಾಡಬೇಕಾಗಿರುವುದು, ನಮ್ಮಲ್ಲಿರುವ ದುರ್ಗುಣಗಳೆಂದರೆ, ಪ್ರಬಲವಾದುದು ಆಲಸ್ಯ-ಉಡಾ ಸೀನ-ಅಭಿಮಾನ-ಮಾತ್ಸರ್ಯಗಳೇ ಆದಿಯಾದುವು. ಇವುಗಳಲ್ಲಿ ಅಲಸ್ಯ ಎಂಬುದು ನಮ್ಮಲ್ಲಿ ಕಾಲೂರಿದಾಗಲೇ ನಮ್ಮ ಕರ್ತವ್ಯದ ಪಾಲಿಗೆ ಧೂಳು ಬಿದ್ದಂತಾಯಿತು. ಕರ್ತವ್ಯಮೂಢರಾದ ಬಳಿಕ, ನಾವು ಮಾಡಬೇಕಾದುದೇ ನಿದೆ? ಊಟ-ನೋಟ-ಕೂಟ-ಬಡಿದಾಟ ಇವುಗಳಲ್ಲಿಯೇ ನಮ್ಮ ಗಮನ ವಿರಬೇಕಷ್ಟೆ ? ಹಾಗಿರಲಾರದ ಪಕ್ಷದಲ್ಲಿ ನಾವು ಕುಳಿತೆಡೆಯಲ್ಲಿಯೇ ಸುಮ್ಮನೆ ಕುಳಿತಿರಲಾರದೆ, ಪರಮತದೂಷಣೆ, ಪರಹಿಂಸೆ, ಪರಸ್ತ್ರಾಪಹಾರ, ಕಲಹ, ಕ್ರೋಧ ಮೊದಲಾದುವುಗಳನ್ನು ಹಿಡಿಯುವೆವು. ಬಳಿಕ ಇವನ್ನೆ ಆಶ್ರಯಿಸಿರುವ ಇತರ ದುರ್ಗುಣಗಳೂ ಒಂದೊಂದಾಗಿ ಬಂದು ನಮ್ಮಲ್ಲಿ ಸ್ಥಾನವನ್ನಾಕ್ರಮಿಸಿ, ನಮ್ಮಲ್ಲಿ ಜನ್ಮಸಹಜವಾಗಿದ್ದ ಪ್ರಜ್ಞಾ, ಲಜ್ಞಾ,ದಯಾ, ದುರಿತಭೀತಿ, ಧೃತಿ, ಶಾಂತಿ ಮೊದಲಾದ ಗುಣಗಳನ್ನು ನುಂಗಿ, ಅವುಗಳ ಅಭಾವದಿಂದ ನಮ್ಮಲ್ಲಿ ತಾಮಸ ಭಾವವನ್ನು ಹೆಚ್ಚಿಸುವುವು. ಹೀಗೆ ತಾಮಸ