ಪುಟ:ಮಾತೃನಂದಿನಿ.djvu/೨೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಸತೀಹಿತೈಷಿಣೀ ೧೮೮

ಭಾವಿವು ನಮ್ಮನ್ನು ಹತ್ತಿರುವುದರಿಂದಲೇ ನಮ್ಮಲ್ಲಿ ದೌರ್ಜನ್ಯವು ಹೆಚ್ಚಿ ಹೋಗಿರುವುದು. ಇದಕ್ಕೆ ಕಾರಣರು, ಇಲ್ಲವೆ ಪ್ರೋತ್ಸಾಹಕರು ಒಂದು ವೇಳೆ ಪುರುಷರೇ ಅಗಿರುವರೆಂದು ಕೆಲವರು ತರ್ಕಿಸಬಹುದಾದರೂ, ನಾವು ಹಾಗೆ ಎಂದಿಗೂ ಹೇಳಬಾರದು. ಏಕೆನ್ನು ವಿರಲ್ಲವೆ? ಪುರುಷರು ಇದನ್ನು ತಮ್ಮ ಸ್ವಬುದ್ಧಿಯಿಂದಲೇ ಮಾಡಿದವರಾಗಿಲ್ಲ. ಹೀಗೆ ಮಾಡಲು ಅಥವಾ ಮಾಡಲ್ಪಡುವಂತಾಗಲು ಅವರು ಅನೇಕ ಕಾರಣಗಳಿಂದ ಅನುಮೋದಿಸಿರ ಬೇಕೆಂದು ಮಾತ್ರ ಹೇಳಬಹುದು. ಅಷ್ಟಲ್ಲದೆ, ನಮ್ಮ ಪುರುಷಬಾಂಧವರು ಸ್ತ್ರೀಸಾಮಾನ್ಯವನ್ನು ನಿಂದಿಸುವಂತೆ ನಾವೂ ಪುರುಷ ಕೋಟಿಯನ್ನು ದೂರಿ ಗೆಳೆಯಬೇಕೆಂಬುದು ಸರಿಯಲ್ಲ. ಅಂತವರಲ್ಲಿ ಪ್ರತ್ಯಕ್ಷಪ್ರಮಾಣಕ್ಕೆ ಬರು ವಂತಹ ದೋಷಗಳು ಕಂಡುಬಂದರೆ ಕೂಡ, ನಾವು ಅದಕ್ಕೆ ಮುಂಬರಿದು ಬರಲವಕಾಶಕೊಡದೆ, ನಮ್ಮ ಸಹಜ ಕ್ಷಮಾಗುಣದಿಂದಲೇ ತಡೆಗಟ್ಟಿ, ಆ ನಮ್ಮ ಬಂಧುವರ್ಗವನ್ನು ಉಚಿತರೀತಿಯಲ್ಲಿ ಸನ್ಮಾನಿಸುತ್ತಿರಬೇಕು, ಸ್ತ್ರೀಯರನ್ನು ನಿರಾಕರಿಸಿ ಪುರುಷರಾಗಲೀ, ಪುರುಷರನ್ನು ನಿರಾಕರಿಸಿ ಸ್ರೀಯರಾಗಲೀ ಬೇರೆ ಬೇರೆಯಾಗಿದ್ದು, ತಮ್ಮ ಕರ್ತವ್ಯವನ್ನು ತೃಪ್ತಿ ಕರವಾಗಿ ನೆರವೇರಿಸುವೆನೆಂದರೆ ಸಾಧ್ಯವಲ್ಲ. ಒಬ್ಬರ ಸಹಾನು ಭೂತಿಯು ಮತ್ತೊಬ್ಬರಿಗಿದ್ದು, ಇಬ್ಬರೂ ಏಕಮತದಿಂದ ತಮ್ಮ ತಮ್ಮ ಪಾಲಿಗೆ ಬಿದ್ದಿರುವ ಕೆಲಸದ ಹೊರೆಯನ್ನು ನಿರ್ವಹಿಸುವುದೇ ಮುಖ್ಯವು. ಇದನ್ನು ಚೆನ್ನಾಗಿ ವಿಚಾರಕ್ಕೆ ತರದೆ, ಬರಿದೆ ಒಬ್ಬರನ್ನೊಬ್ಬರು ದೂರಿ, ತಮ್ಮ ಆತ್ಮಸಮಾಧಾನಕ್ಕೆ ತಾವೇ ಆತಂಕಕಾರಣರಾಗುವುದು ನೀತಿ ಯಲ್ಲ

ಮತ್ತೆ ಕೇಳಿರಿ, ನನ್ನ ಎಳದಂಗೆಯರೇ! ನಮ್ಮ ಹೆಣ್ಣು ಮಕ್ಕಳಿಗೆ ನಾವು ಯಾವ ರೀತಿಯಲ್ಲಿ ಶಿಕ್ಷಣೆಯನ್ನು ಕೊಡಬೇಕೆನ್ನುವಿರಿ? ಶಿಕ್ಷಣೆಯೆಂದರೆ ಏನೆಂದು ತಿಳಿದಿರುವಿರಿ? ದಿನಕ್ಕೆ ನಾಲ್ಕಾರು ದೆಬ್ಬೆಗಳು ಮುರಿವಂತ ಮಕ್ಕಳನ್ನು ಹೊಡೆವುದು, ಇಲ್ಲವೆ, ಅಸಿ ಹವಾದ ಬಯುಗಳಿಂದ ಅವರನ್ನು ಬಗೆಬಗೆಯಾಗಿ ನೋಯಿಸುವುದು, ಇವೇ ಶಿಕ್ಷಣವೆಂದು ನಮ್ಮಲ್ಲಿ ಕೆಲವರು ಭಾವಿಸಿ, ಅದನ್ನೇ ಆಚರಣಿಯಲ್ಲಿಯೂ ತಂದಿರುವರಲ್ಲವೆ? ಅಂತವರಿಗೆ ಹೆಣ್ಣು ಮಕ್ಕಳು, ಗಂಡುಮಕ್ಕಳೆಂಬ ಭೇದ