ವಿಷಯಕ್ಕೆ ಹೋಗು

ಪುಟ:ಮಾತೃನಂದಿನಿ.djvu/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ೧೮೯ ಮಾತೃನಂದಿನಿ

ವೇನು ? ಎಲ್ಲರನ್ನೂ ಮಾತುಮಾತಿಗೂ ಹೊಡೆದು ಕೊಲ್ಲುವುದೆಂದೇ ವಾಡಿಕೆ. ಅದಿರಲಿ. ಮಕ್ಕಳನ್ನು ಹೊಡೆದು-ಬಯುತ,ದಾರಿಗೆ ತರಬೇಕೆಂಬುವರು ಮೂರ್ಖ ರು. ಹಾಗೆ ಹೊಡೆದು-ಬಯುತ ದಾರಿಗೆ ತರಬೇಕೆಂದರೆ, ಅವರು ಏಟನ್ನು ತಡೆಯಲಾರದೆ ಮೊದಮೊದಲು ಅಳುವುದು, ಕಳವಳಿಸುವುದು, ಆ ಬಳಿಕ ಸುಳ್ಳಾಡಿ ತಲೆತಪ್ಪಿಸಿಕೊಳ್ಳುವುದು, ಅದೂ ಆದ ಬಳಿಕ ಮುಂದೆ ಕ್ರಮ ವಾಗಿ ಚಂಡಿತನದಿಂದ ಹೊರುವುದು, ಹೆರವರನ್ನು ದೂರಿ ತಾವೂ ದೂರ ಲ್ಪಡುವುದು. ಕಡೆಗೆ ಮೀರಿಬಂದು ಮೇಲೆ ಮುರಿದು ಬೀಳುವುದು, ಇಲ್ಲವೆ, ಕುಲ-ಗೋತ್ರ-ಶೀಲಗಳೆಲ್ಲವನ್ನೂ ಬಿಟ್ಟು, ಅಡ್ಡದಾರಿ ಹಿಡಿದು ಹಾಳಾಗುವುದು. ಹೀಗಲ್ಲವೇ-ಆಗುವರು ?

  • ಶಿಕ್ಷಣವೆಂದರೆ, ಹಿರಿಯರ ಸದ್ವರ್ತನಗುಣವೇ ಮಾದರಿಯಾಗಿಟ್ಟು, ಮಕ್ಕಳಿಗೆ ಬಾಲ್ಯದಿಂದಲೂ ತಮ್ಮ ತಾಯಿ ತಂದೆಗಳ ಮತ್ತು ಒಡಹುಟ್ಟಿದವ ರಲ್ಲಿ ಪ್ರೀತಿಯುಂಟಾಗಿ,ತಾಯಿ ತಂದೆಗಳ ಸಂತೋಷಕ್ಕಾಗಿ ಅವರು ಕೆಲವು ವೇಳೆ ಆಟಪಾಟಗಳನ್ನಾದರೂ ಬಿಟ್ಟು, ಅವರ ಮುಂದೆ ಬಂದು ಸರಸ ಪ್ರಸಂಗದಲ್ಲಿ ಬರೆದು, ಏನೋದಕ್ಕಾಗಿ ಅವರ ಕೆಲಸಗಳಿಗೆ ತಾವೂ ನೆರವಾಗ ಬೇಕೆಂಬ ಅಭಿಮಾನವನ್ನು ಹೊಂದಿ, ತಮ್ಮ ಶಕ್ತಿ-ಶ್ರದ್ಧಾ-ಭಕ್ತಿಗಳನ್ನು ಪ್ರದ ರ್ಶಿಸುವ ಪ್ರಯತ್ನವನ್ನು ಹಿಡಿಯುವಂತೆ ಕೊಡಲ್ಪಡುವ ಶಿಕ್ಷಣವೇ ಶಿಕ್ಷಣ

ವೆನ್ನಿಸುವುದು,

  • ಹೀಗೆ ಕೊಡಲ್ಪಡುವ ಶಿಕ್ಷಣದಿಂದ ಆ ನಮ್ಮ ಮಕ್ಕಳು ಆದಿ ಯಿಂದಲೂ ತಮ್ಮ ತಾಯಿತಂದೆಗಳಲ್ಲಿ ಅಕೃತ್ರಿಮವಾದ ಪ್ರೀತಿಗೌರವವನ್ನು ಳ್ಳವರಾಗಿ, ತಮ್ಮ ಒಡಹುಟ್ಟಿದವರು, ಆಪ್ತರು, ಇಷ್ಟರು, ಇವರಲ್ಲಿ ವಿಶ್ವಾ

ಸವನ್ನೂ, ಇತರ ಆರ್ತರು, ಅನಾಥರುಗಳಲ್ಲಿ ಕನಿಕರವನ್ನೂ, ಪ್ರಾಣಿಗಳಲ್ಲಿ ದಯೆಯನ್ನೂ ತೋರುವವರಾಗುತ್ತಾರೆ. ಇಂತವರೇ ದೇಶಕ್ಕೂ ಸಮಾ ಜಕ್ಕೂ ಕಲ್ಯಾಣವನ್ನು ಂಟುಮಾಡುವರು. ಇಂತವರಿಂದಲೇ ಕುಲ-ಮತಕೀರ್ತಿ-ಸುಖ-ಸಂಪದಗಳು ಊರ್ಜಿತಸ್ಥಿತಿಗೆ ಬರಬೇಕು. ಇದೇ ಶಿಕ್ಷಣವೇ ನಮ್ಮ ಆರ್ಯರಮಣಿಯರೂ, ಮತ್ತು ಆರ್ಯಬಾಂಧವರೂ ಹೊಂದಿದ್ದರು. ಈಬಗೆಯ ಅತ್ಯುತ್ತಮ ಶಿಕ್ಷಣವೇ ನಮ್ಮವರಿಗೆ ಪ್ರಾಥಮಿಕ ಶಿಕ್ಷಣವಾಗಿದ್ದು,