ಪುಟ:ಮಾತೃನಂದಿನಿ.djvu/೨೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

194

                                                                                  ಸತಿ ಹಿತೈಷಿಣಿ 

ಇವರ ಬಳಿಯಲ್ಲಿಯೇ ಸುರಸೆ ಸರಿಮಳೆಯರೂ, ಇವರ ಹಿಂದೆ ಚಿತ್ರಕಲಾ ಚಂದ್ರಮತಿ ಮೊದಲಾದವರೂ ಪಪ್ಪಾಕ್ಷತೆಗಳನ್ನು ಹಿಡಿದು ನಿಂತಿರುವರು. ಮಾಂಗಲ್ಯಧಾರಣೆಗೆ ನಿಶ್ಚಿತವಾಗಿದ್ದ ಸುಮುಹೂರ್ತವೂ ಬಂದಿತು. ದೇವಿಗೆ ಮಂಗಳಾರತಿಯ ನೆರವೇರಿತು. ಸತ್ಯಾನಂದನು ದೇವಿಯ ಪಾದ ಪ್ರದೇಶದಲ್ಲಿದ್ದ ಪುಪ್ಪಾಕ್ಷತೆಗಳನ್ನು ತೆಗೆದು, ಮುಂದೆ ನಿಂತಿದ್ದ ವಧೂವರರ ಮೇಲೆ ಚಲ್ಲಿ ನಾಲ್ವರಿಗೂ ಕಂಕಣಗಳನ್ನು ಕಟ್ಟಿ, ಅ ಬಳಿಕ ಸ್ವರ್ಣಾಭರಣ ಸಹಿತವಾಗಿ ಪ್ರಕಾಶಿಸುತ್ತಿದ್ದ ಮಾಂಗಲ್ಯಸೂತ್ರಗಳನ್ನು ತೆಗೆದು, ನಾದಾನಂದ ಅಡಲಚಂದ್ರರ ಕೈಯಲ್ಲಿತ್ತು. ಸುಕುಮಾರರೇ ! ಈ ನಮ್ಮ ಮಾತೆಗೆ ಪ್ರೀತ್ಯಾಸದ ಪುತ್ರರಾಗಿರುವ ನೀವು ಈವರೆಗೆ ದೇಶಮಾತೃ ಸೇವೆಯಲ್ಲಿ ನಿರತರಾಗಿ, ಬ್ರಹ್ಮಚರ್ಯೆಯ ಏಕನಿಷ್ಠೆಯಿಂದ ನಿಮ್ಮ ಪತ್ರಕರ್ತವ್ಯದ ಪ್ರಥಮಭಾಗವನ್ನು ನಾಫಲ್ಯಗೊಳಿಸಿಕೊಂಡಿವೆ. ಇನ್ನು ಮುಂದೆ, ಈ ನಿಮ್ಮ ಪತ್ರಕರ್ತವ್ಯದ ಸಮಸ್ತಭಾಗಗಳಲ್ಲಿಯೂ ಕೃತಾರ್ಥರೆನ್ನಿಸುವುದಕ್ಕಾಗಿ, ನಿಮಗೆ ಅವಶ್ಯಮನುಭೋಕ್ತವ್ಯಂಗಳಾಗಿರುವ ಗೃಹಾಶ್ರಮಧರ್ಮ ಗಳನ್ನು ನೀವು ಈಗ ಕೈ ಕೊಳ್ಳಬೇಕಾಗಿರುವುದು. ಇಂತಹ ಪವಿತ್ರತಮ ವಾದ ಧರ್ಮದಲ್ಲಿ ನೀವು ಸಿದ್ದಾರ್ಥಿಗಳಾಗಬೇಕಾದರೆ, ಭಗವನ್ನಿಯಾಮಕ ದಂತೆ ನಿಮಗಾಗಿ ಕಾದಿರುವ ಈ ಪ್ರಕೃತಿದೇವಿಯರ ಪಾಣಿಗ್ರಹಣ ಮಾಡಿ, ಇವರ ಸಹಚರ್ಯೆಯಿಂದ ಧರ್ಮ ಪ್ರಜಾಪತಿಗಳಾಗಬೇಕೆಂದು ಭಗವತಿಯ ಆಜ್ಞೆಯಾಗಿರುವುದು.

     ಆದುದರಿಂದ ಸುಕುಮಾರರೇ! ಇದೇ ಈ ಮಾಂಗಲ್ಯಸೂತ್ರಗಳನ್ನು ನೀವು ನಿಮ್ಮ ನಿಮ್ಮ ಸಹಧರ್ಮಿಣಿಯರಾಗುವ ಇವರ ಕೊರಳಿಗೆ ಕಟ್ಟಿರಿ. ಇದರ ಪ್ರಭಾವವು ಅಪಾರವಾದುದು; ಎಂದರೆ, ಸರ್ವಮಂಗಳೆಯ ಕೃಪಾ ಪ್ರೇಷಿತವಾದ ಈ ಸೂತ್ರವು, ಸತಿಯರಿಗೆ ಅವರ ಸ್ವಾಮಿಯ ಅಭಯಹಸ್ತ್ರ ದಿಂದ, ಎಂದು, ಕೊರಳನ್ನು ಅಲಂಕರಿಸುವುದೋ, ಅಂದಿನ ಮೊದಲು ಇದು, ಅವರು ನಾಸರ್ವಮಂಗಳೆಯ ಅಂಶರೂಪಿಣಿಯರೇ ಆಗಿ, ಸಮಸ್ತ ಕಲ್ಯಾಣ ಕಾರ್ಯಗಳಿಗೂ ಮುಖ್ಯ ಕಾರಣೆಯರಾಗಿ ನಿಲ್ಲುವಂತೆ ಅಂತಸ್ಸತ್ವ ವನ್ನು ಕೊಡುವ ಸಾಮರ್ಥ್ಯವುಳ್ಳದು. ಈ ಮಾಂಗಲ್ಯಸೂತ್ರಕ್ಕೆ ನಮ್ಮ ಭಗವತೀಮಾತೆಯೇ ಪೋಷಕಳಾಗಿದ್ದು, ಸರ್ವಪ್ರಕಾರದಿಂದಲೂ ನಿಮಗೆ.