ಪುಟ:ಮಾತೃನಂದಿನಿ.djvu/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾತೃನಂದಿನಿ

                                                                                                                                                                                        195
ಮಾಂಗಲ್ಯವಿವೃದ್ಧಿಯಾಗುವಂತೆ ಅನುಗ್ರಹಿಸುವಳೆಂಬುದನ್ನು ಸಂಪೂರ್ಣ ಭರವಸೆಯಲ್ಲಿಟ್ಟು ಶುಭಕರ್ವುವನ್ನು ನೆರವೇರಿಸಿ” ಎಂದು ಹೇಳಿ ನರೇಶಶರಚ್ಚಂದ್ರರನ್ನು ಕುರಿತು-ತಮ್ಮಂದಿರೇ! ಈ ವರೆಗೆ ನೀವ ಜಗನ್ನಿಯಂ ತನ ಕಟ್ಟಳೆಯನ್ನನುಸರಿಸಿ, ಕನ್ಯಾಪಿತೃತ್ವದ ಮಹತ್ತರವಾದ ಭಾರವನ್ನು ಸಹಿಸಿ, ದೇಶಹಿತಕಾರ್ಯದಲ್ಲಿ ದಕ್ಷತೆಯನ್ನು ವಹಿಸಿ, ಸಹಜ ರೀತಿಯಿಂದ ಸತ್ಪಾತ್ರಗಳಿಗೆ ಕನ್ಯಾದಾನವನ್ನು ಮಾಡಿ, ಅಕ್ಷಯವಾದ 'ಯಶಸ್ಸುಖಗಳನ್ನು ಸಂವಾದಿಸಿ ಧನ್ಯರಾದಿರಿ! ಜಗನ್ಮಾತೆಯನ್ನು ಪರಿಶುದ್ಧಾಂತಃಕರಣದಿಂದ ಸೇವಿಸಿ, ದೇಶಸೇವಕರಲ್ಲಿ ಅಗ್ರಗಣ್ಯರೆನ್ನಿಸಿದಿರಿ!! ಸಮಾಜದ ಮತ್ತು ಆಚಾರ ವಿಚಾರದಲ್ಲಿ ಉಂಟಾಗಿದ್ದ ಮೌಡ್ಯ-ಮೂರ್ಖ ಪದ್ಧತಿಗಳನ್ನೂ, ವರ ಸಿಕ್ರಯ ಕನ್ಯಾವಿಕ್ರಯಗಳ ಹೇಯವ್ಯಾಪಾರಗಳನ್ನೂ ಖಂಡಿಸಿ, ಅನೀತಿಯ ದುಂದುವೆಚ್ಚವನ್ನು ತಡೆದು, ಆಶ್ರಿತಾನಾಥರಿಗೂ ಆರ್ತರಿಗೂ ತ್ರಾಣವುಂಟಾ ಗುವಂತೆ ಸುಧಾರಣೆಯನ್ನು ಕಟುಮಾಡಿ, ಪರಮಾತ್ಮನ ಪೂರ್ಣಾನುಗ್ರಹಕ್ಕೂ ಪಾತ್ರರಾಗಿ, ಮುಂದೆ ಮಂದಿಗಳಾಗುವವರಿಗೆ ಮಾರ್ಗದರ್ಶಕರಾಗಿ ಪ್ರಕಾ ಶಿಸುವಂತಾದಿರಿ. ಸಂತೋಷ ! ಸತ್ಪುತ್ರರೇ, ನಿಮ್ಮಿ ಸದುದ್ಯಮದಿಂದ ದೇಶ ಮಾತೆಗುಂಟಾದಶಾಭವು ಸಂತಸಪ್ರದವೇಸರಿ, ವಿಶೇಷವಿವರಣವೇಕೆ? ಪವು ಹೂರ್ತವಾಗಿದೆ. ನಿಮ್ಮ ಛಾಯೆಯರೊಡನೆ ನೀವು, ನಿಮ್ಮ ನಿಮ್ಮ ಕನ್ಯಾ ಮಣಿಯರ ಪಾಣಿಗ್ರಹಣಮಾಡುವುದರಲ್ಲಿರುವ ಇವರನ್ನು ಆಶಿರ್ವದಿಸಿರಿ.”
  ನರೇಶ ಶರಚ್ಚಂದ್ರರು ತಲೆಬಾಗಿ ದೇವಿಯ ಕಡೆಗೆ ಕೈನೀಡಿ-1fಧಿಗ ರ್ವ! ನಮ್ಮೆಲ್ಲರಿಗೂ ತಾಯಿಯಾದವಳೇ ಇಲ್ಲಿರುವಲ್ಲಿ, ಆಶೀರ್ವದಿಸುವುದು ಅವಳನ್ನಲ್ಲದೆ ನಮ್ಮನ್ನು ಸೇರಿಲ್ಲ. ಮಾತೆಯ ಆಶೀರ್ವಚನವನ್ನು ನಿರೂಪಿ ಸಲು ತಾವೇ ಸಮರ್ಥರು. ತಮ್ಮ ಅನುಗ್ರಹವೇ ಪರಮೋಷವಾದ ವರವ. ಈ ನೂತನ ವಧೂವರರು ಜಗನ್ಮಾತೆಯ ಮಕ್ಕಳೇ ಆಗಿರುವುದ sಂದ, ಇವರ ಪಾಣಿಗ್ರಹಣ ಮಹೋತ್ಸವವನ್ನು ನೋಡಿ ಆನಂದಿತರಾಗು ವಂತೆ ನಮ್ಮೆಲ್ಲರಿಗೂ ತಾವೇ ಅನುಗ್ರಹಿಸಬೇಕು.” ಎಂದು ಸುಮ್ಮನಾದರು.
  ಮತ್ತೆ ಸತ್ಯಾನಂದನ ಅಜ್ಞೆಯಾಯಿತು. ನಂದಿನೀ ಸ್ವರ್ಣಯರಿಗೆ ಮಾಂಗಲ್ಯಧಾರಣಾ ಮಹೋತ್ಸವವೂ ಸಂಭ್ರಮದಿಂದ ನಡೆಯಿತು. ಮತ್ತೆ ಸತ್ಯಾನಂದನ ನಿರೂಪದಂತೆ ಶರಚ್ಚಂದ್ರ ನರೇಶರು-ತಮ್ಮ ತಮ್ಮ ಭಾರ್ಯೆಯ.