ಪುಟ:ಮಾತೃನಂದಿನಿ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಿ R 16 ಸತೀ ಹಿತೈ ಏಣಿ ಖಾಸಾ (?) ಹೂವು!!! ನಿನ್ನನ್ನ ನೋಡಿಕೋ? ಪರಿಮಳದ ಹೆಸರೇ ಕಾಣುತ್ತಿಲ್ಲ !! ನಂದಿನಿ:- ನಸುನಕ್ಕು ಸ್ವರ್ಣಯ ಬೆನ್ನು ತಟ್ಟುತ್ತ, 'ಸ್ವರ್ಣ ! ಈ ಬಗೆಯ ಆಡಂಬರದಿಂದ ಬರುವ ಲಾಭವೇನು? ಇವುಗಳು ನಮ್ಮಂತಹ ವಿದ್ಯಾ ರ್ಥಿನಿಯರಿಗೆ ಯೋಗ್ಯವಾದವುಗಳಲ್ಲವಷ್ಟೆ !” ಸ್ವರ್ಣ:- ಓಹೋ! ಅದೇನಮ್ಮ, ನಿನ್ನ ಹೆಚ್ಚುಗಾರಿಕೆ? ಈಗ ನಾವು ಓರುವವರೇ ಅಲ್ಲವೋ? ನೀನೊಬ್ಬಳೆಯೇ ಓದುವವಳೋ? ಯಾವಾಗ ನೋಡಿದರೂ ಗಂಡನಿಂದ ಬಿಡಲ್ಪಟ್ಟವಳಂತೆ ಹೀಗೇಕೆ ಇರಬೇಕು ? ಇರಾವ ವ್ರತವೋ ಹೇಳಬಾರದೇ? ನಂದಿನಿ:- -ಸ್ವರ್ಣ ! ಕೇಳು; ನೀನಿನ್ನೂ ಚಿಕ್ಕವಳು. ನಿನಗೆ ಇದರ ತತ್ತ್ವವೇ ಗೊತ್ತಾಗುತ್ತಿಲ್ಲ. ನಮ್ಮ ಮನಸ್ಸು ದೃಢವಾಗಿರಬೇಕಾಗು, ನಾವು ಬಾಲ್ಯದಿಂದೆಯೂ ಸುಶಿಕ್ಷಿತೆಯ ರಾಗಿ, ಅದನ್ನು ಅಭ್ಯಾಸಕ್ಕೆ ತಂದಿರ ಬೇಕು. ಅಂತಹ ಉತ್ತಮತರದ ಅಭ್ಯಾಸಕ್ಕೆ ಈತರದ ಅಲಂಕಾರ-ಆಡಂಬರ ಗಳು ಆತಂಕವನ್ನೇ ಉಂಟುಮಾಡುವುವು. ಬಾಲ್ಯವೆಂಬುದು, ಶುದ್ಧ ಬಂಗಾರ ದಂತಹದು, ಆ ಬಂಗಾರವನ್ನು ಮನೆ ಮತ್ತು ೦ಟುಮಾಡುವ ಆಸೆ, ಅಭಿಮಾನ, ವಿಳಾಸಗಳೇ ಮೊದಲಾದ ಹಿತ್ತಾಳೆ-ತಾವಗಳೊಡನೆ ಕಲೆಯೇ ಸಿದರೆ ಅದು, ಅಂದವೂ ಬಹುಕಾಲ ಬೆಲೆಬಾಳತಕ್ಕುದೂ ಆಗಿದೆ, ಬಲು ಬೇಗ ಕೆಟ್ಟು ಹೋಗುವುದು. ಹಾಗಾಗುವುದರಿಂದ ಅನಾದರಕ್ಕೂ ಅವರೇ ಇಸೆಗೂ ಎಡೆಯಾಗುವುದಲ್ಲದೆ, ನನಗೆ ಎಷ್ಟೆಷ್ಟೊ ನಷ್ಟಗಳೂ ಉಂಟಾಗ ಬಹುದು. ಆದರೆ, ಅದೇ ಬಂಗಾರವನ್ನೇ, ತಾಳ್ಮೆ, ವಿನಯ, ಸತ್ಯ, ಶುಚಿತ್ವ ಶ್ರದ್ಧೆ, ಭಕ್ತಿ' ಎಂಬೀತೆರದ ಜಾತಿರತ್ನಗಳಿಂದ ಕೂಡಿಸಿದುದೇ ಆದರೆ, ಅತ್ಯು ತಮವಾದ ಅಭರಣವೆನ್ನಿಸುವುದು. ಅಂತಹ ಅನರ್ಘಾಭರಣವನ್ನು ಧರಿಸಿ ಬೇಕೆಂಬುದೇ ನನ್ನ ಅಭಿಲಾಷೆ ! ಅದಕ್ಕೆಂದೇ ನಾನು ಅವುಗಳ ವಿಷಯದಲ್ಲಿ ಇಷ್ಟು ಬೇಸರಿಸುತ್ತಿರುವುದು, ಸ್ವರ್ಣ:-ಬೆರಗಾಗಿ ನೋಡುತ್ತೆ-ಓಹೋ! ಅದೇನು, ಇವುಗಳಲ್ಲಿ ಇಷ್ಟು ಬೇಸರ ? ಇವುಗಳು ನಿನಗೆ ಮಾಡಿದ ಕೆಡುಕಾದರೂ ಯಾವುವು? ನಿನ್ನ ರೂಪ-ಲಾವಣ್ಯಗಳನ್ನು ಮತ್ತೂ ಹೆಚ್ಚಿಸುವುವೆಂಬ ಒಂದೇ ತಪ್ಪಿತವಲ್ಲವೇ?