17 ಮಾತೃನ ೦ ದಿನಿ ನಂದಿನಿ:-ಸ್ವರ್ಣ ! ನನಗೆ ಬೇಸರವೇಕೆಂಬೆಯೋ? ಹೇಳಬೇಕೋ? ಹಾಗೂ ಆಗಲಿ, ಇವುಗಳ ಗುಣಾವಗುಣಗಳು ನನ್ನ ಅನುಭವಕ್ಕೆ ಚೆನ್ನಾಗಿ ಬಂದಿರುವುವು. ಸ್ವರ್ಣ:-ಕುತೂಹಲದಿಂದ.- 14 ಏನು-ನು? ಅನುಭವವೇ? ಹೇಗೋ, ಹೇಳು ನೋಡುವ? ನಾನೂ ಅದರಂತೆಯೇ ನಡೆಯಲಾದೀತೋ, ಯೋಚಿಸಬಹುದು.' ನಂದಿನಿ:- ನಡೆಯಬಹುದು-ಕೂಡದು;' ಎಂಬುದನ್ನು ನಾನೇಕೆ ಹೇಳಲಿ ? ನಡೆದಷ್ಟೂ ಒಳ್ಳೆಯದೆಂದು ಮಾತ್ರ ಹೇಳದಿರಲಾರೆನು. ಸ್ವರ್ಣ:-ಸರಿ,ಬಿಡು ! ಇನ್ನ ನಿನ್ನ ಪ್ರೀತಿಕಾ ಪ್ರಕರಣದಲ್ಲಿ ಹೊತ್ತು ಕಳೆಯುತ್ತಿರುವೆ? ವಿಷಯವೇನೆಂಬುದನ್ನು ಹೇಳುವುದೇ ಇಲ್ಲವಷ್ಟೆ? ನಂದಿನಿ:-ಕೋಪಿಸಬೇಡ, ಸ್ವರ್ಣ ! ಕೇಳು. ನಾನು ಹುಡುಗಿಯ hಪ್ಪಾಗ-ಎಂದರೆ ನನ್ನ ಆರೇಳು ವರ್ಷದ ಎಳೆತನದಲ್ಲಿ ಅಲಂಕಾರವೆಂದರೆ ನನಗೆ ನಿನಗೂ ಹೆಚ್ಚಾಗಿಯೇ ಆಶೆಯಿತ್ತು. ಆಗ ನನ್ನ ತಾಯಿ, ನನ್ನನ್ನು ದಿನಕ್ಕೆ ಮೂರು ಬಗೆಯಾಗಿಯಾದರೂ ಅಲಂಕರಿಸದೆ ಇರುತ್ತಿರಲಿಲ್ಲ ! ಸ್ವರ್ಣ:-ಕುತೂಹಲದಿಂದ,. --:ಆಬಳಿಕ?? ನಂದಿನಿ:- ಹಾಗೆ ಅಲಂಕಾರ ಮಾಡಿದಷ್ಟಷ್ಟಕ್ಕೂ ನನಗೆ ಆಕೆಯ ಹೆಚ್ಚುತ್ತಬಂತಲ್ಲದೆ ತಗ್ಗುವಂತಿರಲಿಲ್ಲ. ಬರುಬರುತ್ತೆ ನಾನು ಯಾವಾಗ ನೋಡಿದರೂ ಉಡುವು-ತೊಡವಗಳೆಂಜ ವೇಷಧಾರಣೆಗಳಲ್ಲಿಯೇ ಮನ ಸ್ವಿಟ್ಟೆನಲ್ಲದೆ ಮತ್ತಾವ ಕೆಲಸದಲ್ಲಿಯೂ ಗಮನಿಸುತ್ತಿರಲಿಲ್ಲ. ಸ್ವರ್ಣ:-ಸರಿ; ಅಷ್ಟು ಎಳೆತನದಲ್ಲಿಯೇ ಮಾಡಬೇಕಾದ ಕೆಲಸ ವೇನಿತ್ತು? . ನಂದಿನಿ:-ಮುಂದೆ ಕೇಳು, ಆಗ ಅಟಕ್ಕಾದರೂ ನಾನು ಹೋಗುತ್ತಿ ರಲಿಲ್ಲ. ಒಂದುವೇಳೆ ಜತೆಗಾರ್ತಿಯರ ಬಲವಂತದಿಂದ ಹೋದರೂ, ಅವ ರನ್ನು ಕುರಿತು, 'ನಾನೇ ರಾಣಿ, ನನ್ನನ್ನು ನೀವೆಲ್ಲರೂಗೌರವಿಸಬೇಕು. ನಾನು ಹೇಳಿದ ಮಾತಿಗೆ ಯಾರೂ ಅಡ್ಡಿಯಾಗಬಾರದು. ನನ್ನನ್ನು ಯಾವ ಕೆಲಸಕ್ಕೂ ಬಲಾತ್ಕರಿಸಲಾಗದು.' ಎಂದು ಹೇಳುತ್ತಿದ್ದೆನಲ್ಲದೆ ಮತ್ತೆ ಮತ್ತೆ ಅವರಲ್ಲಿ,-ನಾನೇ ಚಲುವೆ; ನನಗೆ ಸಮಾನರಾರೂ ಇಲ್ಲ.
ಪುಟ:ಮಾತೃನಂದಿನಿ.djvu/೩೩
ಗೋಚರ