ವಿಷಯಕ್ಕೆ ಹೋಗು

ಪುಟ:ಮಾತೃನಂದಿನಿ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಿ 18 ಸತಿ ಹಿತೈಷಿಣಿ ಎಲ್ಲಾ ಭಾಗಕ್ಕೂ ಎಲ್ಲರಿಗೂ ನಾನೇ ಹೆಚ್ಚಿನ ಅದೃಷ್ಟವಂತೆ. ಇನ್ನೂ ಇದೇ ಬಗೆಯಾಗಿ ನನ್ನ ಹೆಮ್ಮೆಯನ್ನು ತೋರಿಸುತ್ತಿದ್ದನು. ಅದಕ್ಕೆ ಪ್ರತಿಯಾಗಿ ಹೇಳಿದವರೊಡನೆ ಇಲ್ಲದ ಗಂಟುಜಗಳವನ್ನು ತಂದಿಟ್ಟ ಅವರನ್ನು ಬಯ್ಯುದು, ಹೊವುದು, ಕಡೆಗೆ ಅವರ ಮೇಲೆ ಅಲ್ಲದ-ಸಲ್ಲದ ತಪ್ಪುಗಳನ್ನು ಹೊರೆಯಿಸಿ, ಮನೆಯವರಲ್ಲಿ ಚಾಡಿಯೇಳೆ, ಒಗೆಬಗೆಯಾ, ದಂಡಿಸುವುದೂ ಅದರಿಂದ ಅವರು ಅಳುತ್ತಿದ್ದರೆ ನಿಂತುನೋ ಡಿ-ನೋಡಿ ನಲಿದಾಡುವುದು......' ಇನ್ನೂ ಎಷ್ಟೆಷ್ಟೊ ಕೆಟ್ಟ ಕೆಲಸಗಳನ್ನು ಮಾಡಿದೆನು. ಅದನ್ನು ನೆನೆವಾ ಗಲೆಲ್ಲಾ ನನಗೆ ಅಧಿಕ ಸಂತಾಪವಾಗುತ್ತಿರುವುದು. ಅದೂ ಹಾಗಿರಲಿ. ಸ್ವರ್ಣ ! ಈಗ ನಿನ್ನನ್ನು ನೋಡಿ ನೀನೇ ತಿಳಿಯಬಹುದು ! ಈ ಆಲ. ಕಾರಗಳಿಂದ ನಿನ್ನಲ್ಲಿ ನೀನೇ ಎಷ್ಟು ಹಿಗ್ಗುತ್ತಿರುವೆಂಪಿ'ಗನ್ನು ಯೋಸಿ ತಿಳಿ! ಇದರಿಂದ ನಿನಗೆ ಎಷ್ಟರ ಹೆಮ್ಮೆಯಾಗಿರಬಹುದೆಂಬದನ್ನೂ ನಿರ್ಧರಿಸಿ ಹೇಳು ? ಹೆಮ್ಮೆಯೆಂಬುದು ತಲೆಹಾಕಿತೆಂದರೆ ಸಾಕು. ಬರುಬರುತ್ತೆ ಅದೇ ದೊಡ್ಡ ವಿಪತ್ತಿಗೆ ಗುರಿಮಾಡುತ್ತಿರುವುದಲ್ಲದೆ ಹಿತವನ್ನೆ ೦ತ ಉಂಟುಮಾಡ ಲೊಲ್ಲದು. ಹೆಮ್ಮೆಯಿಂದಲ್ಲವೇ, ಇಂದ್ರನು ಕೂಡ. ಸ್ವರ್ಗಭ್ರಷ್ಟನಾhದ್ದುದು ? ತಾಯಿ ! ಸೀನಿನ್ನು ನನ್ನನ್ನು ಬಯ್ದರೂ ..ಂತೆಯಿಲ್ಲ. ನಿನ್ನ ನ್ನು ಅಂದಗೊಳಿಸುವಂತಹ ಅಭರಣಗಳು ಇವಲ್ಲ. ಇವ್ರ ಒರಿಯ ಆಶಾ-ಲೋಭ ಗಳೆಂಬ ಕಿಲುಬಿನ ಪರಿಕರಣಗಳು ಮಾತ್ರವೇ ! ಇವುಗಳಿಂದ ದೇಹದ ಹೊರ ಗತೆಗೆ ಅಂದವಾಗಿ ಕಂಡುಬರುವುದೆಂದರೂ, ದೇಹದ ಒಳಗೂ ಹೊರಗೂ ಮತ್ತೂ ಕೇಳಿ ನೋಡತಕ್ಕವರ ಕಣ್ಣು-ಕಿವಿ-ಮನಸ್ಸುಗಳಿಗೂ ನಲವುಂt: ಮಾಡುವ ತೊಡನೆದರೆ, ನಮ್ಮ ಸದ್ವರ್ತನೆಗೊಂದೇ ! ಅಂತಹ ಶಾಶ್ವತಸುಖಾನಂದವಾರಕವಾದ ಅನರ್ಘಾಭರಣವನ್ನು ಧರಿಸಬೇಕಾದರೆ, ಮೊದಲು ನಾವು: ಎಳೆತನದಿಂದ ಈಬಗೆಯ ವಿಕಾಸ-ಶೃಂಗಾರ ಆಡಂಬರ ಗಳಿಗೆ ಅಷ್ಟಾಗಿ ಮನಸ್ಸನ್ನು ಹೋರಗೊಡಬಾರದು. ಸ್ವರ್ಣ:-ಹಾಗಾದರೆ, ನನ್ನನ್ನೂ ಬಿಡಹೇಳುವೆಯಾ ? ನಂದಿನಿ: - ನಿನ್ನನ್ನು ಬಿಟ್ಟೇಬಿಡಬೇಕೆಂದು ನಾನು ಹೇಳಲಿಲ್ಲ. ಮಿತ ವಾಗಿರಲಿ. ಸ್ವಲ್ಪ ಸ್ವಲ್ಪವಾಗಿ ಅಲಂಕರಿಸಿಕೊ, ಅದಕ್ಕೂ ಕಾಲವು