ವಿಷಯಕ್ಕೆ ಹೋಗು

ಪುಟ:ಮಾತೃನಂದಿನಿ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸುವ ಅವಶ್ಯಕತೆಯಿಲ್ಲ

ಮಾತೃ ನ೦ದಿನಿ 19 ಗೊತ್ತಾಗಿರಲಿ. ಆದರೆ, ನಿನ್ನ ಮನಸ್ಸನ್ನು ಮಾತ್ರ, ಸದ್ಗುಣಗಳೆಂಬ ಅಭರಣಗಳಿಂದ ಚೆನ್ನಾಗಿ ಬೆಳಗುವಂತೆ ಮಾಡುವ ಪ್ರಯತ್ನವನ್ನು ನೀನು ಯಾವಾಗಲೂ ಬಿಡದೆ, ತಪ್ಪದೆ, ಮಾಡುತ್ತಿರು. ಹಾಗೆ ಮಾಡುವೆಯಾದರೆ. ನೀನೇ ನನ್ನ ಸಖೆಯರಲ್ಲಿ ಮೊದಲನೆಯವಳಾಗಿ ಗಣಿಸಲ್ಪಡುವೆ. ಆಗಲೇ ಈಗ ನಾನು ಅನುಭವಿಸುತ್ತಿರುವ ಆತ್ಮಾನಂದದ ಅನುಭವಕ್ಕೆ ನೀನೂ ಪಾತ್ರಳಾಗುವೆ. ಸ್ವರ್ಣ: -ಹಾಗೆಯೇ ಮಾಡಬೇಕೆಂದಿರುವೆನು. ಆದರೆ, ಮೊದಲು ನಿನಗಿದ್ದ ಆಶೆ, ಈಗ ಇಲ್ಲವಾಯ್ತೇಕೆ? ನಿನ್ನ ಮನಸ್ಸು ಇಷ್ಪು ಬೇಸರ ಗೊಂಡಿರುವ ಕಾರಣವೇನು ? ಹೀಗೆ ಮಾಡಿದವರಾರು? ನಂದಿನಿ--ನನ್ನ ತಾಯಿ ಸತ್ತಬಳಿಕ, ವಿರಕ್ತರಾದ ನಮ್ಮ ತಂದೆ, ಎಂಟು ವರ್ಷದವಳಾದ ನನ್ನನ್ನು ಯಾವಾಗಲೂ ತಮ್ಮ ಬಳಿಯಲ್ಲಿಯೇ ನಿಲ್ಲಿಸಿಕೊಂಡು, ತಮ್ಮ ನಿತ್ಯ ನೈಮಿತ್ತಿಕಗಳೆಲ್ಲವನ್ನೂ ನನ್ನ ಇದಿರಾಗಿಯೇ ಮಾಡುತ್ತಿದ್ದರು. ತಮ್ಮ ವಿರಾಮಕಾಲದಲ್ಲೆಲ್ಲಾ ನನ್ನ ಮನಸ್ಸಿಗೆ ಸುಲಭವಾಗಿ ಹಿಡಿವಂತೆ ಪಾರಮಾರ್ಥಿಕ ವಿಚಾರವನ್ನು ತಿಳಿಯೆ ಹೇಳುತ್ತಲೂ. ನನಗೆ ದೇಶ ಮಾತೆಯಲ್ಲಿಯೇ ಅನನ್ಯ ಮಾತೃಭಕ್ತಿ ನೆಲೆಗೊಳ್ಳುವಂತೆ ಬೋಧಿಸುತ್ತಲೂ.ಪರಮಾತ್ಮನ ತೇಜೋರೂಪವನ್ನೇ ಮನದಲ್ಲಿ ಧ್ಯಾನಿಸುವಂತೆ ಅಭ್ಯಾಸಮಾಡಿ ಸುತ್ತಲೂ ಬಂದರು. ಅವರ ತತ್ತ್ವಬೋಧಾಮೃತವೇ ನನಗೆ ಭಗವತ್ ಸೃಷ್ಟಿಕ್ರಮವನ್ನು ತಿಳಿದು, ಸಕಲ ಚರಾಚರಾತ್ಮಕ ಪ್ರಪಂಚವನ್ನೂ ಆತನ ಅಂಶರೂಪದಿಂದ ಸಂಭವಿಸುವಂತೆ ಮಾಡಿರುವುದಲ್ಲದೆ. ಉಳಿದ ನಶ್ವರ ಸುಖ-ಸಂಪದ- ಭೋಗಾನುಭವಗಳಲ್ಲಿ ಬೇಸರವನ್ನು ಹುಟ್ಟಿ ಸಿರುವವ್ರದ. ಹಾಗಾಗದಿದ್ದರೆ. ನಾನು ಈವರೆಗೆ ಏನಾಗುತ್ತಿದ್ದೆನೋ ಹೇಳಲಾರೆನು ಸ್ವರ್ಣ:- ನಾನು ಅಭ್ಯಾಸ ಮಾಡುವೆನು. ನನಗೂ ಕಲಸಾವೆಯಾ ? ನಂದಿನಿ:- ನಾನು, ಕಲಿಸುವುದೇನು ? ನಿನ್ನ ಮನದಲ್ಲಿ ಆಸಕ್ತಿಯಾಂಬಾದರೆ ಯಾವ ಕಾರಯ್ಯವೇ ಆದರೂ ಸುಲಭವಾಗಿ ನಾಗುವುದು, ಅದರೂ ನನ್ನಿಂದಾರಷ್ಟನ್ನು ಹೇಳಿಕೊಡಲು ತಡೆಯಿಲ್ಲ. ಸ್ವರ್ಣ:-ಅಹುದು; ನನಗೆ ಆಸಕ್ತಿಯೇನೋ ಇರುವಂತೆ ಕಾಣುತ್ತಿದೆ. ಆದರೆ ಅಮ್ಮನು ಬಯ್ವ ರೋ?