ಈ ಪುಟವನ್ನು ಪರಿಶೀಲಿಸಲಾಗಿಲ್ಲ.
30)
ಸತೀ ಹಿತೈಷಿಣೀ
ಬೆಂಬಲವಾಗಿರುವೆನು. ನಿರ್ಭಯವಾಗಿ ಇವರಿಗೆ ಉತ್ತರವನ್ನು ಕೊಡು. :
ವಿಶ್ವನಾಥ:-- ಮತ್ತೂ ಚೆಂದ! ಹೇಳಮ್ಮಾ: ಇನ್ನೇಕೆ ತಡೆ? ಸಂಪನ್ನ ನಾದ ನಗೇಶರಾಯನೇ ನಿನಗೆ ಬೆಂಬಲವಾಗಿದ್ದೂ ಭಯವೇ ? ಹೂಂ, ಮೊದಲು ಮಾಡು! ಆಗಲಿ, ವಿವಾದ? ನಂದಿನಿ:--ಕೂಗುವಿರೇಕೆ? ಅಪ್! ಎಷ್ಟಾದರೂ ಹೆಂಗಸರ ಬುದ್ದಿ ಲರಿಯೇ ಸರಿ! ಗಣೇಶ:- ತಲೆದೂಗಿ,- ಅದೀಗ ತಕ್ಕನುಡಿ! ಒಳ್ಳೆಯ ಹೆಂಗಸು! ಚೆನ್ನಾಗಿ ಹೇಳಿದಳು. ಇದಕ್ಕೆಂದೇ ಹೆಂಗಸರಿಗೆ ಸ್ವಾತಂತ್ತ್ಯ ಕೊಡದಿರುವುದು ? " ನಂದಿಸಿ:- ನಿಜ! ಅದಕ್ಕೆಂದೇ ಹೆಂಡಿರು-ಮಕ್ಕಳನ್ನು ಕಾಡುಮೃಗಗಳನ್ನು ಕಂಡಂತೆ ಕ್ರೂರವಾಗಿ ದಂಡಿಸುತ್ತಿರುವಿರಿ! ಅಲ್ಲವೇ?' ವಿಶ್ವನಾಥ:-ಸಂದೇಹವೇನು? ಆ ಒರಟುತನದ ಮೂಢಪ್ರಾಣಿಗಳನ್ನು ಇನ್ನು ಹೇಗಿಡಬೇಕು? ನಂದಿನಿ: -ನ್ಯಾಯ! ಅವರನ್ನು ಹಾಗೆಯೇ ಕೊಲ್ಲಬೇಕು. ಆದರೆ, ಆ ದೋಷವು ಯಾರನ್ನು ಸೇರಬೇಕು?ತಿಳಿಯೆ ಹೇಳಲಾದೀತೇ? ಗಣೇಶ:- -ಅದರಲ್ಲಿ ದೋಷವೇನುಬಂತು? ನಂದಿನಿ:- ನಿಷ್ಕಾರಣವಾಗಿ ಮೂಢಪ್ರಾಣಿಗಳನ್ನು ಹಿಂಸಿಸುವುದು ದೋಷವಲ್ಲವೇ? ವಿಶ್ವನಾಥ:-- ಮೂಢರನ್ನು ಒಡಿವುದೇ ಲೋಕಸ್ವಭಾವ! ಅದರಲ್ಲಿ ದೋಷವೆಂದು ಯಾರೂ ಹೇಳಲಾರರು ! ಹಾಗೂ ಅದರಲ್ಲಿ ದೋಷವೆಂದರೆ,ಅದು ಮೂಢರ ತಪ್ಪಿತವಲ್ಲದೆ ನಮಗೆ ಸೇರತಕ್ಕುದಲ್ಲ! ನಂದಿನಿ: - ಶತತೆಂದ್ರ-ಮಹಾಶಯ! ವಿವೇಕದವಿದ್ದೂ, ಅಲ್ಲದ ಸಲ್ಲದ ದುರ್ಭಾವನೆಗಳಿಂದ ವಿಪರೀತ ಮಾರ್ಗದಲ್ಲಿ ನಡೆವಂತವರಿಗೆ, ಎಂತಹ ಮೂಲ ಸನ್ಮಾನವ ದೊರೆಯಬೇಕೋ?'
ನಗೇಶ:--ಕೇಕೆಹಾಕಿ ನಗುತ್ತ, 'ಹೇಗಿದೆ? ಇದಕ್ಕೇನು ಸಮಾಧಾನ?' ಗಣೇಶ: -ತಿರಸ್ಕಾರದಿಂದ. ...- 'ಅಹುದಮ್ಮಾ, ಅಹುದು ! ಒಳ್ಳೆಯ