ಪುಟ:ಮಾತೃನಂದಿನಿ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

29 ಮಾತೃನ೦ದಿನಿ ಭಲೆ! ನಮ್ಮ ಹುಡುಗಿಯರು ನಿನ್ನ೦ತೆ ಮದುವೆಯಿಲ್ಲದೆ ಗೊಡ್ಡಾ ಕಳಾಗಿ ನಿಂತಿರಲಿಲ್ಲ. ನಿನ್ನೀ ವಯಸ್ಸಿಗಾಗಲೇ ಅವರು ಗಂಡನಮನೆಯಲ್ಲಿ ಸಂಸಾರ ಸುಖವನ್ನೂ ಚೆನ್ನಾಗಿ ಅನುಭವಿಸುವವರಾಗಿದ್ದರು. ನಂದಿನಿ:-ಇರಬಹುದು; ಅದರಿಂದಾದ ಲಾಭವೇನೆಂಬುದು ಮಾತ್ರ ತಿಳಿಯಲಿಲ್ಲ? ಗಣೇಶ:-ವ್ಯಂಗ್ಯವಾಗಿ ನಗುತ್ತೆ, ಹಾ! ಹಾ!! ಹಾ!!! ಬಲು ಸೊಗಸು! ಬಲುಸೊಗಸು !! ಲಾಭವನ್ನು ಹೇಳಬೇಕು? ಕಾಣುತ್ತಿಲ್ಲ ? ಗಂಡನಿಗೆ ಹೆಂಡತಿ; ಮನೆಗೆ ಒಡತಿ! ಒಂದೆರಡು ಮಕ್ಕಳಿಗೂ ತಾಯಿ! ಇನ್ನೇನಾಗಬೇಕು? ಇದಕ್ಕೂ ಹೆಚ್ಚಿಗೆ ಮತ್ತೇನಾಗಬೇಕು ?? - ನಂದಿನಿ:-ಗಂಭಿರಮುದ್ರೆಯಿಂದ,-ಅದೀತು; ಸುಖವೇ ಆದೀತು ! ಆದರೆ, ಅದು ಸರಿಯಾದ ರೀತಿ-ನೀತಿಗಳ೦ದ ಸಾರ್ಥಕವೆನಿಸಿರುವುದೆಂರಾ ಗಲೀ, ಚಿರಕಾಲ ವೃದ್ಧಿ೦ಗತವಾಗಿ ಬೆಳಗುತ್ತಿರುವುದೆಂದಾಗಲಿ, ನಾನು ಹೇಳಲಾರೆನು ! ” ವಿಶ್ವನಾಥ:-ಕೋಪದಿಂದ,-ಇದೇನು ವಕ್ರತೆ? ಇದೆಂತಹ ಶತತೆ ? ಸರಿಯಾದ ನೀತಿ-ನೀತಿಗಳಾವುವು? ಚಿರಕಾಲ ವೃದ್ಧಿ೦ಗತವಾಗಿ ಬೆಳಗುವುದು ಹೇಗೆ? ” ನಂದಿನಿ:- - ಅಪ್ಪ! ನಾನಿನ್ನೂ ಚಿಕ್ಕವಳು. ಅಷ್ಟು ದೂರ ವಿಚಾರ ಮಾಡಿ, ನಿಮಗೆ ಬೇಸರವುಂಟುಮಾಡಲಾರೆನು, ನೀವು ತಿಳಿದವರು; ಸಕಲ ಶಾಸ್ತ್ರ ಪ್ರವಚನಗಳನ್ನೂ (ಸಾತ್ರಗಳನ್ನು) ಕಂಠಪಾಠ ಮಾಡಿಕೊಂಡಿರುವಿರಿ. ನಿಮ್ಮಲ್ಲಿ ನಾನು ಹೇಳುವುದು ಸರಿಯಾಗಿದ್ದಿತೇ? ನಾರಾನಂದ:-ಹೋ ! ಹೋ!! ಇದರ ತತ್ವವನ್ನು ನಾನೂ ಬಲ್ಲೆನು ! ಅವರ ಮಾತಿಗೆ ಸರಿಯಾದ ಉತ್ತರವನ್ನು ಕೊಡಲಾರದುದಕ್ಕೆ ಇದೊಂದು ಕುಂಟಯುಕ್ಕಿ!!! ಗಣೇಶ:-ತಲೆದೂಗಿ ಬೆರಲು ಕುಣಿಸುತ್ತೆ-'ಭಲೆ ! ಚೆನ್ನಾಗಿ ಹೇಳಿದೆ! ಮತ್ತೊಮ್ಮೆ ಹೇಳು? ನರೇಶ:-ದರ್ಪಿತಸ್ವರದಿಂದ 1 ಈಗಲೇ ಇಷ್ಟೇಕೆ ಹಾರಾಟ ? ನಂದಿನಿ! ಯಾರು ಹೇಗೆ ಬೇಕಾದರೂ ಹಳಿದಾಡುತ್ತಿರಲಿ, ನಾನು ನಿನಗೆ