ಪುಟ:ಮಾತೃನಂದಿನಿ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ 28 ಸತೀ ಹಿತೈಷಿಣಿ ಯಿಲ್ಲವೆಂದರೆ ನಗೆಗೇಡಲ್ಲವೇ? ದೇವರಿಗೆಂದು ಏನಾದರೂ ಮುದ್ರೆಯೊತ್ತಿ ಬಿಟ್ಟಿರುವಿರೋ? ನಾರಾನಂದ:-ಇದ್ದಿತು; ಹೇಗೂ ಇವಳು ಬ್ರಹ್ಮಚಾರಿಣಿಯಂತೆ! ವಿಶ್ವನಾಥ:-ವ್ಯಂಗ್ಯಸ್ವರದಿಂದ,- ( ಅಬ್ಬಬ್ಬಾ ! ಬ್ರಹ್ಮಚಾರಿಣಿ !' ಹೂc! ಎಂತಹ ಬ್ರಹ್ಮಚಾರಿ? ಶಾಂಡಿಲಿಯೋ? ಶಬರಿ ? ಅಲ್ಲದೆ, ಈ ಕಾಲದ ಮಹಾಬ್ರಹ್ಮಚಾರಿಣಿಯೋ?” ನರೇಶ:-ಹೇಗಾದರೂ ಹೇಳಿ ಹಳಿರಾಡಿರಿ. ಹೇಗೂ ಇವಳು ನಿಮ್ಮ ಮಹೋಪಕಾರದಿಂದಲೇ ಹೀಗೆ ಕಠಿಣವಾದ ಬ್ರಹ್ಮಚರ್ಯದಲ್ಲಿರುವಳು. ನಿಮ್ಮ ಸಂಶಯಗಳೆಷ್ಟಿದ್ದರೂ, ಅವಳೇ ತಕ್ಕ ಉತ್ತರಗಳನ್ನು ಕೊಡಬಲ್ಲಳು. ಈ ವೇಳೆಗೆ ಸರಿಯಾಗಿ ಭಕ್ಷಗಳನ್ನು ತಂದ ಚಿತ್ರಕಲೆ, ನಸುನ, ಒಂದ, ವಿಶ್ವನಾಥ ಮತ್ತು ಗಣೇಶರನ್ನು ಕುರಿತು, ಮಾವ! ಬಾವ! ಸಹನೆಯಿಂದ ಕುಳಿತು ಊಟಮಾಡಿರಿ. ಸುಮ್ಮನೆ ಸಿಟ್ಟು ಮಾಡಿ ಒಳ ಬಾರದು. ನಾವಧಾನದಿಂದ ಕೇಳಿದರೆ ತಕ್ಕ ಸಮಾಧಾನಗಳೂ ದೊರೆಯ ಬಹುದು !” ಎಂದು ಮತ್ತೆ ಮುಂದೆಬಂದು ನಂದಿನಿಯನ್ನು ನೋಡಿ. - 'ನಂದಿನಿ ! ಇವರಾರೂ ನಿನಗೆ ಕಾಣದಿದ್ದವರಲ್ಲ. ಸಂಕೋಚವಿಲ್ಲದೆ ಇವರ ಪ್ರಶ್ನೆಗಳಿಗೆ ಉತ್ತರವನ್ನು ಕೊಡಬಲ್ಲೆಯಷ್ಟೆ ? ಇದೇ ಸಕಾಲ.” ಎಂರಾಡಿ ಎಲ್ಲರಿಗೂ ಬಡಿಸಿ ಹಿಂದಿರುಗಿ ಹೊರಟುಹೋದಳು. ವಿಶ್ವನಾಥ:-ಎಂತಹ ಕಾಲವಪ್ಪ? ನಾವು ಈ ವರೆಗೂ ಹೆಂಗಸಿನ ಕೂದೆ ವಾದಕ್ಕೆ ನಿಂತಿರಲಿಲ್ಲ. ಇವರ ಮನೆಗೆ ಬಂದುದರಿಂದ ಅದೂ ಅಲ್ಲ ಲ್ಲವೇ? ಆಗಲಿ; ಎಲ್ಲಮ್ಮಾ? ಬ್ರಹ್ಮಚಾರಿಣಿ ! ನಿನ್ನ ಪ್ರೌಢಿಮೆಯೆಷ್ಟಿದೆಯೋ ಅಷ್ಟನ್ನ ಹೆರಗೆಡಹಿ ತೋರಿಸು ! ನೋಡಿ ನಾವೂ ಸಂತೋಷಪಡುವೆವು. ನಂದಿನಿ..ಮೆಲ್ಲನೆ- ಹಾಸ್ಯಮಾಡುವಿರೇಕೆ? ನಾನು ಪ್ರೌಢಿಮೆ: ದಾಗಲೇ ಪಾಂಡಿತ್ಯವುಳ್ಳವಳೆಂರಾಗಲೀ ಹೇಳಿಲ್ಲ; ಹೇಳುವಂತೆಯೂ ಇಲ್ಲ. ಪ್ರಾಪಂಚಿಕ ಸ್ಥಿತಿ-ಗತಿ-ವಿಚಾರಗಳಾಗಲೀ, ವಿಷಯ ಪರಿಜ್ಞಾನವಾಗಲೀ ಶಾಸ್ತ್ರ ಪರಿಶ್ರಮವಾಗಲೀ ಇಲ್ಲದ ಕೇವಲ ಬಾಲಿಶೆಯಾದ ನಾನು, ನಿಮ್ಮಲ್ಲಿ ವಾದಿಸಬಲ್ಲೆನೇ? ನಾನೂ ತಮ್ಮ ಮಕ್ಕಳಂತೆಯೇ ಅಲ್ಲವೇ?” ವಿಶ್ವನಾಥ:- ಏನು ? ಏನೆಂದೆಯಮ್ಮ? ನಮ್ಮ ಮಕ್ಕಳಂತೆಯೋ?